ಬೆಂಗಳೂರು: ರಾಜ್ಯ ಕಾಂಗ್ರೆಸ್ ಸರಕಾರದ ಐದು ಗ್ಯಾರಂಟಿಗಳಲ್ಲಿ ಗೃಹಲಕ್ಷ್ಮೀ ಯೋಜನೆ ಕೂಡ ಒಂದು. ಅದು ದೇಶದ ಮೂಲೆ ಮೂಲೆಗಳಲ್ಲೂ ಸದ್ದು ಮಾಡುತ್ತಿದೆ. ಜತೆಗೆ ಕಾಂಗ್ರೆಸ್ ಪಕ್ಷಕ್ಕೆ ಈ ಯೋಜನೆ ಹೊಸ ಶಕ್ತಿ ಹಾಗೂ ಹುಮ್ಮಸ್ಸು ಕೂಡ ತಂದಿದೆ. ಇದರ ನಡುವೆಯೇ ಅದನ್ನೂ 1,000 ರೂ.ಗೆ ಇಳಿಕೆ ಮಾಡುವ ಸರಕಾರ ಚಿಂತನೆ ನಡೆಸಿದ ಎಂಬ ಸುದ್ದಿ ಸೋಷಿಯಲ್ ಮಿಡಿಯಾದಲ್ಲಿ ಸುದ್ದು ಮಾಡುತ್ತಿದೆ.
ಹೌದು, ರಾಜ್ಯ ಸರಕಾರ ೨೦೨೩ರ ವಿಧಾನಸಭೆ ಚುನಾವಣೆ ವೇಳೆ ಐದು ಗ್ಯಾರಂಟಿ ಯೋಜನೆಗಳನ್ನು ಘೋಷಿಸಿತ್ತು. ಅದರಲ್ಲಿ ಗೃಹ ಲಕ್ಷ್ಮೀ ಯೋಜನೆ ಕೂಡ ಒಂದು. ಪ್ರತಿ ತಿಂಗಳು ಯಜಮಾನಿಗೆ ಈ ಯೋಜನೆ ಮೂಲಕ 2,000 ರೂ. ಕೊಡುವ ಯೋಜನೆ ಇದಾಗಿತ್ತು. ಹಾಗಾಗಿಯೇ ಬಿಜೆಪಿ ನಾಯಕರು ಇದರ ವಿರುದ್ಧ ಆರೋಪ ಮಾಡುತ್ತಲೇ ಇರುತ್ತಾರೆ. ಹೀಗಿರುವಾಗಿ ಈ ಸುದ್ದಿ ಹರಿಡಿದ್ದು, ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ.
ಮಹತ್ವದ ನಿರ್ಧಾರ?
ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳಿಗೆ ಸಿಕ್ಕಾಪಟ್ಟೆ ಜನ ಮನ್ನಣೆ ಸಿಕ್ಕು, ಗಮನ ಸೆಳೆಯುತ್ತಿವೆ. ಹೌದು, ರಾಜ್ಯದಲ್ಲಿ ಗೃಹಲಕ್ಷ್ಮೀ ಯೋಜನೆ ಸೇರಿದಂತೆ ಕಾಂಗ್ರೆಸ್ ಗ್ಯಾರಂಟಿ ಯೋಜನೆಗಳು ಜಾರಿಗೆ ಬಂದ ನಂತರ ಅಭಿವೃದ್ಧಿಗೆ ಹಣ ಇಲ್ಲ ಎಂಬ ಆರೋಪ ಮಾಡಲಾಗುತ್ತಿದೆ. ಹೀಗೆ ವಿರೋಧ ಪಕ್ಷಗಳ ನಾಯಕರು ಅಭಿವೃದ್ಧಿಗೆ ಹಣವೇ ಇಲ್ಲ, ಹೀಗಾಗಿ ಕಾಂಗ್ರೆಸ್ ಸರ್ಕಾರವೇ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸಲಿದೆ ಎಂದು ಆರೋಪ ಮಾಡುತ್ತಿದ್ದಾರೆ.
ಹೀಗಿದ್ದಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸುದ್ದಿಯೊಂದು ಈಗ ಹಬ್ಬಿದ್ದು, ಗೃಹಲಕ್ಷ್ಮೀ ಯೋಜನೆ ಮೊತ್ತ 1,000 ರೂಪಾಯಿಗೆ ಇಳಿಕೆ ಮಾಡಲು ಚಿಂತನೆ ನಡೆದಿದೆ ಎಂಬ ಸುದ್ದಿ ಹಬ್ಬಿಸಲಾಗುತ್ತಿದೆ. ಆದರೆ ಈವರೆಗೂ ಕರ್ನಾಟಕ ಸರ್ಕಾರವೇ ಆಗಲಿ ಅಥವಾ ಅಧಿಕಾರಿಗಳೇ ಆಗಲಿ ಈ ಕುರಿತಾಗಿ ಅಧಿಕೃತ ಹೇಳಿಕೆ ನೀಡಿಲ್ಲ. ಹೀಗಾಗಿ ಈ ಸುದ್ದಿ ಸುಳ್ಳು ಎಂಬ ಮಾತು ಕೂಡ ಕೇಳಿಬಂದಿದೆ. ಆದರೆ ಇಂತಹ ಸುದ್ದಿಗಳು ಹಬ್ಬುತ್ತಿರುವ ಕಾರಣ ಫಲಾನುಭವಿಗಳು2ಚಿಂತೆ ಮಾಡುವಂತೆ ಆಗಿದೆ!