ಯಾದಗಿರಿ: ರಾಜ್ಯ ಸರಕಾರ ಐದು ಗ್ಯಾರಂಟಿ ಯೋಜನೆಗಳಲ್ಲೊಂದಾದ ಗೃಹಜ್ಯೋತಿ ಯೋಜನೆಗೆ ಜಿಲ್ಲೆಯಲ್ಲಿ2,17,593 ಗ್ರಾಹಕರು ಅರ್ಹರಾಗಿದ್ದರೂ, ಇದುವರೆಗೆ 1,88,912 ಗ್ರಾಹಕರು ನೋಂದಣಿ ಮಾತ್ರ ಮಾಡಲಾಗಿದ್ದು, 28,681 ಗ್ರಾಹಕರ ನೋಂದಣಿ ಬಾಕಿಯಿದೆ. ಸರ್ಕಾರ ಅಧಿಕಾರಕ್ಕೆ ಬಂದು ಒಂದು ವರ್ಷ ಸಮಿಪಿಸುತ್ತಿದ್ದರೂ ಇನ್ನೂ ಯೋಜನೆಯಲ್ಲಿ ಸಮಸ್ಯೆಗಳು ನೀಗುತ್ತಿಲ್ಲ.
ಗೃಹಜ್ಯೋತಿ ಯೋಜನೆಯ ಉಚಿತ ವಿದ್ಯುತ್ ಸೌಲಭ್ಯ ಜಿಲ್ಲೆಯ ಬಹುಪಾಲು ಜನರಿಗೆ ದೊರೆಯುತ್ತಿದೆಯಾದರೂ ನೋಂದಣಿ ಮಾಡಿಕೊಂಡ ಗ್ರಾಹಕರಲ್ಲಿ ಕೆಲವರಿಗೆ ಉಚಿತ ವಿದ್ಯುತ್ ಸೌಲಭ್ಯ ದೊರೆಯದಿರುವ ದೂರುಗಳು ಕೇಳಿಬಂದಿದ್ದು, ಈ ಬಗ್ಗೆ ಜೆಸ್ಕಾಂ ಇಲಾಖೆಯ ಗಮನಕ್ಕೂ ತರಲಾಗಿದೆ. ಆದರೂ, ಸಮಸ್ಯೆಗೆ ಪರಿಹಾರ ಮಾತ್ರ ಇನ್ನೂ ದೊರೆತಿಲ್ಲ.
ಗುರುಮಠಕಲ್ ವ್ಯಾಪ್ತಿಯಲ್ಲಿ 28,327 ಅರ್ಹ ಗ್ರಾಹಕರಿದ್ದು, 26,796 ನೋಂದಣಿ ಮಾಡಲಾಗಿದೆ. ಇನ್ನೂ 1531 ಗ್ರಾಹಕರು ಗೃಹಜ್ಯೋತಿ ಯೋಜನೆಗೆ ನೋಂದಣಿಯಾಗಬೇಕಿದ್ದು, ಹುಣಸಗಿಯಲ್ಲಿ 19,738 ಅರ್ಹರಿದ್ದು, 17,486 ಗ್ರಾಹಕರು ನೋಂದಣಿ ಆಗಿದ್ದಾರೆ. 2,252 ಗ್ರಾಹಕರನ್ನು ಮಾಡಬೇಕಿದೆ.ಕೆಂಭಾವಿ ವ್ಯಾಪ್ತಿಯಲ್ಲಿ12,421 ಅರ್ಹ ಫಲಾನುಭವಿಗಳಿದ್ದು, 11,332 ಗ್ರಾಹಕರ ನೋಂದಣಿ ಪೂರ್ಣಗೊಂಡಿದ್ದು, 1,089 ಆಗಬೇಕಾಗಿದೆ.
ವಡಗೇರಾ ವ್ಯಾಪ್ತಿಯಲ್ಲಿ10,076 ಅರ್ಹರಿದ್ದರೂ 9,137 ಗ್ರಾಹಕರು ನೋಂದಣಿಯಾಗಿವೆ. 939 ಸೈದಾಪುರ ವಿಭಾಗದಲ್ಲಿ13,123 ಅರ್ಹರಿದ್ದು,12,658 ನೋಂದಣಿಯಾಗಿದ್ದು, 465 ಬಾಕಿ ಉಳಿದಿವೆ.ಶಹಾಪುರ ವ್ಯಾಪ್ತಿಯಲ್ಲಿ ಗೃಹಜ್ಯೋತಿ ಯೋಜನೆಗೆ 34,250 ಅರ್ಹರಿದ್ದು, 31,191 ಗ್ರಾಹಕರು ನೋಂದಣಿಯಾಗಿದ್ದಾರೆ. ಇನ್ನೂ 3,059 ಗ್ರಾಹಕರು ನೋಂದಣಿ ಆಗಬೇಕಿದೆ.