This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಕೇವಲ 2024ರಲ್ಲಿ ಮಾತ್ರವಲ್ಲ 2029ರಲ್ಲಿಯೂ ನರೇಂದ್ರ ಮೋದಿಯೇ ದೇಶದ ಪ್ರಧಾನಿಯಾಗಲಿದ್ದಾರೆ: ರಾಜನಾಥ್​ ಸಿಂಗ್

ಕೇವಲ 2024ರಲ್ಲಿ ಮಾತ್ರವಲ್ಲ 2029ರಲ್ಲಿಯೂ ನರೇಂದ್ರ ಮೋದಿಯೇ ದೇಶದ ಪ್ರಧಾನಿಯಾಗಲಿದ್ದಾರೆ: ರಾಜನಾಥ್​ ಸಿಂಗ್

ಕೇವಲ 2024ರಲ್ಲಿ ಮಾತ್ರವಲ್ಲ 2029ರಲ್ಲಿಯೂ ನರೇಂದ್ರ ಮೋದಿಯೇ ದೇಶದ ಪ್ರಧಾನಿಯಾಗಲಿದ್ದಾರೆ ಎಂದು ರಕ್ಷಣಾ ಸಚಿವ ರಾಜನಾಥ್​ ಸಿಂಗ್ ತಿಳಿಸಿದರು.

ಟೈಮ್ಸ್​ ಆಫ್​ ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ ಸಿಂಗ್, 75 ವರ್ಷ ಮೇಲ್ಪಟ್ಟವರು ಚುನಾವಣೆಯಲ್ಲಿ ಸ್ಪರ್ಧಿಸಬಾರದು ಎನ್ನುವ ನಿರ್ಧಾರವನ್ನು ಎಂದೂ ತೆಗೆದುಕೊಂಡಿಲ್ಲ. ಒಂದು ವೇಳೆ ಅಂಥಾ ನಿರ್ಧಾರ ಕೈಗೊಂಡಿದ್ದರೆ ಪಕ್ಷದ ನಿಯಮಗಳಲ್ಲಿ ಅದೂ ನಮೂದಿಸಲಾಗುತ್ತಿತ್ತು.

ಭಾರತ ಎಂದಿಗೂ ಯಾವುದೇ ದೇಶದ ಮೇಲೆ ದಾಳಿ ಮಾಡಿಲ್ಲ ಅಥವಾ ಅದರ ಭೂಮಿಯನ್ನು ವಶಪಡಿಸಿಕೊಂಡಿಲ್ಲ, ಆದರೆ ನಮ್ಮ ಭೂಮಿಯನ್ನು ನಾವು ಹಿಂಪಡೆಯದೇ ಬಿಡುವುದಿಲ್ಲ ಎಂದರು.

ತಮಿಳುನಾಡು ಹಾಗೂ ಕೇರಳದಲ್ಲಿಯೂ ಸಾಕಷ್ಟು ಸ್ಥಾನಗಳನ್ನು ಗೆಲ್ಲುವ ವಿಶ್ವಾಸವಿದ್ದು, ತೆಲಂಗಾಣ ಮತ್ತು ಆಂಧ್ರಪ್ರದೇಶದಲ್ಲಿ ನಮ್ಮ ಪಕ್ಷ ದೊಡ್ಡ ಗೆಲುವು ಸಾಧಿಸುವುದರಲ್ಲಿ ಸಂಶಯವಿಲ್ಲ ಎಂದು ಹೇಳಿದರು.

ಹಾಗಿದ್ದಿದ್ದರೆ ಎಲ್​ಕೆ ಅಡ್ವಾಣಿ ಅವರು 2014ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರಲಿಲ್ಲ, 75 ವರ್ಷ ಮೇಲ್ಪಟ್ಟವರು 2014 ಹಾಗೂ 2019ರ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದಿದ್ದಾರೆ ಎಂದು ವಿವರಿಸಿದರು.

";