ನಿಮ್ಮ ಸುದ್ದಿ ಬಾಗಲಕೋಟೆ
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಬಾಗಲಕೋಟೆ ವಿಭಾಗದಲ್ಲಿ ನಿಯುಕ್ತಿಗೊಂಡ ೩೦ ಜನ ತರಬೇತಿ ಸಿಬ್ಬಂದಿ ಅನಧಿಕೃತವಾಗಿ ಗೈರು ಹಾಜರಾಗಿ ಲಿಖಿತ ಸಮಜಾಯಿಷಿಯೊಂದಿಗೆ ಕೂಡಲೇ ತರಬೇತಿಗೆ ಹಾಜರಾಗುವಂತೆ ವಾಕರಸಾ ಸಂಸ್ಥೆಯ ವಿಭಾಗೀಯ ನಿಯಂತ್ರಣಾಧಿಕಾರಿ ಸೂಚನಾ ಪತ್ರ ಹೊರಡಿಸಿದ್ದಾರೆ.
ಅನಧಿಕೃವಾಗಿ ಗೈರು ಹಾಜರಾಗಿ ರಾಜ್ಯ ರಸ್ತೆ ಸಾರಿಗೆ ನಿಗಮದ ನೌಕರರ ಕೂಟ ಸಂಘಟನೆ ಕರೆ ನೀಡಿರುವ ಮುಷ್ಕರಕ್ಕೆ ಬೆಂಬಲ ನೀಡಿದ್ದು, ತರಬೇತಿ ನೌಕರರು ತರಬೇತಿಗೆ ಗೈರು ಆಗದೇ ಕೆಲಸ ನಿರ್ವಹಿಸುವುದು ಅವರ ಕರ್ತವ್ಯವಾಗಿದ್ದು, ಅನಧಿಕೃತ ಗೈರು ಹಾಜರಿಯಿಂದ ಘಟಕದ ದೈನಂದಿನ ಸಾರಿಗೆ ಕಾರ್ಯಾಚರಣೆಗೆ ಅಡಚಣೆಯಾಗಿದೆ. ಅಲ್ಲದೇ ಸಾರ್ವಜನಿಕ ಪ್ರಯಾಣಿಕರಿಗೆ ಅನಾನುಕೂಲ ಉಂಟಾಗಲು ಹಾಗೂ ಸಾರ್ವಜನಿಕರಲ್ಲಿ ಸಂಸ್ಥೆಯ ಘನತೆಗೆ ಧಕ್ಕೆ ಉಂಟಾಗಲು ಕಾರಣರಾಗಿತ್ತಾರೆ.
ತರಬೇತಿ ನೌಕರರ ಕರ್ತವ್ಯ ಲೋಪಕ್ಕೆ ವಾಕರಸಾ ಸಂಸ್ಥೆ ಬಾಗಲಕೋಟೆ ವಿಭಾಗವು ಅಳವಡಿಸಿಕೊಂಡಿರುವ ನಿಯಮಾವಳಿಯಂತೆ ಶಿಸ್ತುಕ್ರಮ ಜರುಗಿಸಲಾಗುವುದು. ಕೂಡಲೇ ತರಬೇತಿಗೆ ಹಾಜರಾಗಿ, ತಪ್ಪಿದಲ್ಲಿ ಅಂತವರ ವಿರುದ್ದ ನಿಯಮಾನುಸಾರ ಶಿಸ್ತುಕ್ರಮ ಕೈಗೊಳ್ಳಲಾಗುವುದೆಂದು ಸೂಚನಾ ಪತ್ರದಲ್ಲಿ ತಿಳಿಸಿದ್ದಾರೆ.