ಪ್ರಜಾಪ್ರಭುತ್ವ ದಿನ:ಗೈರಾದವರಿಗೆ ನೊಟೀಸ್
ಬಾಗಲಕೊಟೆ:ಪ್ರಜಾಪ್ರಭುತ್ವದ ಆಚರಣೆ ದಿನದಂದು ಸಮಯಕ್ಕಿಂತ ಸರಿಯಾಗಿ ಬಾರದ ಸಿಬ್ಬಂದಿಗೆ ನೊಟೀಸ್ ನೀಡಲಾಗುವುದು ಎಂದು ಅಮೀನಗಡ ಪಟ್ಟಣ ಪಂಚಾಯಿತಿ ಪ್ರಭಾರ ಮುಖ್ಯಾಧಿಕಾರಿ ಅಶೋಕ ಪಾಟೀಲ ತಿಳಿಸಿದ್ದಾರೆ.
ಸೆ.15 ರಂದು ಪ್ರಜಾಪ್ರಭುತ್ವ ದಿನದಂದು ಸಂವಿಧಾನ ಪೀಠಿಕೆ ಓದು ಅಭಿಯಾನ ಆಯೋಜಸಲಾಗಿತ್ತು. ಈ ಸಂದರ್ಭದಲ್ಲಿ ಎಲ್ಲ ಸಿಬ್ಬಂದಿ ಕಡ್ಡಾಯವಾಗಿ ಹಾಜರಿರಲು ಸೂಚಿಸಲಾಗಿತ್ತು. ಆದರೆ ಕೆಲ ಸಿಬ್ಬಂದಿ ಅಭಿಯಾನ ಮುಗಿದ ಮೇಲೆ ಕಚೇರಿಗೆ ಆಗಮಿಸಿದ್ದಾರೆ. ಈ ಕುರಿತು ಅಭಿಯಾನದದಲ್ಲಿ ಹಾಜರಿರದ ನೌಕರರು ಹಾಗೂ ಸಿಬ್ಬಂದಿಗೆ ಕಾರಣ ಕೇಳಿ ನೊಟೀಸ್ ನೀಡಲಾಗುವುದು ಎಂದು ಪ್ರಭಾರ ಮುಖ್ಯಾಧಿಕಾರಿ ಅಶೋಕ ಪಾಟೀಲ ತಿಳಿಸಿದ್ದಾರೆ.