This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

State News

ರಾಜ್ಯದ ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿಗೆ ಅನುದಾನ ಕೊರತೆ; ನಿರ್ವಹಣೆಗೆ ಪರದಾಡುತ್ತಿರುವ ಅಧಿಕಾರಿಗಳು

ರಾಜ್ಯದ ಕಬ್ಬನ್ ಪಾರ್ಕ್ ಸೆಂಟ್ರಲ್ ಲೈಬ್ರರಿಗೆ ಅನುದಾನ ಕೊರತೆ; ನಿರ್ವಹಣೆಗೆ ಪರದಾಡುತ್ತಿರುವ ಅಧಿಕಾರಿಗಳು

ಬೆಂಗಳೂರು: ಕಬ್ಬನ್ ಪಾರ್ಕ್ ನಲ್ಲಿರುವ ಸೆಂಟ್ರಲ್ ಲೈಬ್ರೆರಿಗೆ ಲಕ್ಷಾಂತರ ಮಂದಿ ಭೇಟಿ ನೀಡಿ ಜ್ಞಾನ ವೃದ್ಧಿ ಮಾಡಿಕೊಳ್ಳುತ್ತಿದ್ದು, ಆದರೆ ಈ ಲೈಬ್ರೆರಿಗೆ ಸರ್ಕಾರ ಅನುಧಾನ ಕಡಿಮೆ ಬಿಡುಗಡೆ ಮಾಡಿದೆ ಎಂದು ಮಾಹಿತಿ ತಿಳಿದು ಬಂದಿದೆ.

ನಿಗಧಿತ ಪುಸ್ತಕಗಳನ್ನ ಖರೀದಿ ಮಾಡಲು ಸಮಸ್ಯೆಯಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದು, ರಾಜಧಾನಿ ಬೆಂಗಳೂರಿನಲ್ಲಿ ಸೆಂಟ್ರಲ್ ಲೈಬ್ರೆರಿ ಅಂದ್ರೆ ತುಂಬಾ ಫೇಮಸ್. ಯಾಕಂದ್ರೆ ಇಲ್ಲಿ ಭಾರತ ರಚನೆಯಾದ ಸಂದರ್ಭದಲ್ಲಿದ್ದ ಲೇಖಕರಿಂದ ಹಿಡಿದು, ಲೇಟೆಸ್ಟ್ ಯುವ ಲೇಖಕರ ಪುಸ್ತಕಗಳು ಇಲ್ಲಿ ಸಿಗುತ್ತವೆ.‌

ಯಾವುದೇ ಪುಸ್ತಕಗಳು ಹೊಸದಾಗಿ ಬಂದ್ರೆ ಮೊದಲ ಪ್ರತಿಗಳು ಈ ಲೈಬ್ರೆರಿಯಲ್ಲಿಯೇ ಸಿಗುತ್ವೆ. ಇತ್ತೀಚೆಗೆ ಈ ಗ್ರಂಥಾಲಯಕ್ಕೆ ಹಣ ಬಿಡುಗಡೆ ಮಾಡದ ಹಿನ್ನೆಲೆ ಗ್ರಂಥಾಲಯಗಳ ನಿರ್ವಹಣೆಯೇ ಕಷ್ಟವಾಗಿ ಹೋಗಿದೆ.ಗ್ರಂಥಾಲಯ ನಿರ್ವಹಣೆಗೆಂದೇ ರಾಜ್ಯ ಗ್ರಂಥಾಲಯ ಇಲಾಖೆಯಿಂದ 24 ಕೋಟಿಯಷ್ಟು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿತ್ತು.‌

ಸರ್ಕಾರದಿಂದ ಕೇವಲ 10 ಕೋಟಿಯಷ್ಟು ಹಣವನ್ನ ಮಾತ್ರ ಘೋಷಣೆ ಮಾಡಿದ್ದು, ಅದ್ರಲ್ಲಿ 7ಕೋಟಿಯಷ್ಟು ಹಣ ಮಾತ್ರ ಬಿಡುಗಡೆಯಾಗಿದ್ದು, ಮೂರು ವರ್ಷಗಳಿಂದ ಗ್ರಂಥಾಲಯದಲ್ಲಿ ಯಾವುದೇ ಹೊಸ ಪುಸ್ತಕಗಳನ್ನ ಖರೀದಿಸುವಲ್ಲಿ ತಡವಾಗುತ್ತಿದೆ. ಗ್ರಂಥಾಲಯಕ್ಕೆ ಬರಬೇಕಾದ ಕರವನ್ನ ಬಿಬಿಎಂಪಿ ಬಾಕಿ ಉಳಿಸಿಕೊಂಡಿದ್ದು, ಅದು ಕೂಡ ಸಮಸ್ಯೆಯಾಗುತ್ತಿದೆ.

ಇದರಿಂದ ಓದುಗರಿಗೆ ಅಗತ್ಯ ಪುಸ್ತಕಗಳು ತಕ್ಷಣಕ್ಕೆ ಸಿಗುತ್ತಿಲ್ಲ., ಸೆಸ್ ವಿಚಾರ ಸಂಬಂಧ ಬಿಬಿಎಂಪಿ ಅಧಿಕಾರಿಗಳನ್ನ ಪ್ರಶ್ನಿಸಿದ್ದಕ್ಕೆ ಗ್ರಂಥಾಲಯಕ್ಕೆ 638 ಕೋಟಿ ರೂ ಬಾಕಿ ಉಳಿದಿದ್ದು, ಈ ವರ್ಷ 64 ಕೋಟಿ ಹಣವನ್ನ ಸಧ್ಯ ಪಾವತಿಸಿದ್ದೇವೆ ಎಂದು ಮಾಹಿತಿ ನೀಡಿದ್ದಾರೆ.

Nimma Suddi
";