This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education News

ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣ

ವಿಶ್ವಕರ್ಮರ ಅಸ್ಮೀತೆ ಜೀವಣ್ಣ ಮಸಳಿ-ಡಾ.ವೀರಣ್ಣ ಚರಂತಿಮಠ

ನಿಮ್ಮ ಸುದ್ದಿ ಬಾಗಲಕೋಟೆ

ಜೀವಣ್ಣ ಮಸಳಿ ಅವರು ವಿಶ್ವಕರ್ಮ ಸಮುದಾಯದ ಅಸ್ಮೀತೆ ಇದ್ದಂತೆ ಅವರ ಸಂಶೋದನಾತ್ಮಕ ಕೃತಿಗಳ ಮೂಲಕ ನಾಡಿನಲ್ಲಿ ಗುರುತಿಸಿಕೊಂಡವರು ಎಂದು ಶಾಸಕರಾದ ಡಾ ವೀರಣ್ಣ ಚರಂತಿಮಠ ಹೇಳಿದರು.

ವಿದ್ಯಾಗಿರಿಯ ಶ್ರೀ ಕಾಳಿಕಾದೇವಿ ಸಭಾ ಭವನದಲ್ಲಿ ಮಯ ಪ್ರಕಾಶನ ಕಮಲಾಪುರ (ಬೆಣ್ಣೂರು), ಉತ್ತರ ಕರ್ನಾಟಕ ವಿಶ್ವಕರ್ಮ ಯುವ ಬರಗಾರರ ಹಾಗೂ ಸಂಶೋಧಕರ ವೇದಿಕೆ ಮತ್ತು ತಾಲೂಕ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘ (ರಿ) ಬಾಗಲಕೋಟೆ ಇವರ ಸಹಯೋಗದಲ್ಲಿ ನಡೆದ “ಶ್ರೀ ಜೀವಣ್ಣ ಮಸಳಿ ಅವರ ಕುರಿತ” ಕುರಿತು ಒಂದು ದಿನದ ರಾಜ್ಯ ಮಟ್ಟದ ವಿಚಾರ ಸಂಕಿರಣವನ್ನು ಉಧ್ಘಾಟಿಸಿ ಮಾತನಾಡಿದರು.

ಜೀವಣ್ಣ ಮಸಳಿ ಅವರ ಸಾಹಿತ್ಯ ಮತ್ತು ಪತ್ರಕಾ ಸೇವೆ ಅನನ್ಯವಾಗಿದ್ದು ಅವರ ಸಾಹಿತ್ಯ ಮೌಲ್ಯಗಳ ಸಂಶೋದನಾತ್ಮಕವಾಗಿದ್ದವು ಅಲ್ಲದೆ ಅವರ ವಿಚಾರಧಾರೆಗಳನ್ನು ಸಮಾಜದಲ್ಲಿರುವ ಯುವಜನತೆ ಅರಿತುಕೊಳ್ಳಬೇಕು, ಜೀವಣ್ಣ ಮಸಳಿಯವರ ಕುರಿತು ರಾಜ್ಯಮಟ್ಟದ ವಿಚಾರ ಸಂಕಿರಣ ನಡೆಯುತ್ತಿರುವುದು ಆ ವ್ಯಕ್ತಿಯ ವ್ಯಕ್ತಿತ್ವವು ಮೇರು ಮಟ್ಟದ್ದಾಗಿದೆ.ಈ ವಿಚಾರ ಸಂಕಿರಣದ ವಿಷಯಗಳು ಗ್ರಂಥ ರೂಪದಲ್ಲಿ ಬರುವ ಕಾರ್ಯವಾಗಬೇಕೆಂದು ಹೆಳಿದರು,

ಕಾರ್ಯಕ್ರಮದಲ್ಲಿ ಆಶಯ ಭಾಷಣ ಮಾಡಿದ ಹಂಪಿ ಕನ್ನಡ ವಿಶ್ವವಿದ್ಯಾಲಯದ ಭಾಷಾ ನಿಕಾಯ ಡೀನರಾದ ಡಾ ವೀರೇಶ ಬಡಿಗೇರ ಅವರು ಮಾತನಾಡಿ ಕನ್ನಡಕ್ಕೆ ಕಥನ ಸಾಹಿತ್ಯದ ಅಭಿರುಚಿಯನ್ನು ಕೊಟ್ಟವರು ಜೀವಣ್ಣ ಮಸಳಿಯವರು, ಒಂದು ಶಿಲ್ಪ ಸಂಸ್ಕೃತಿಯನ್ನು ಪ್ರದಾನವಾಗಿಸಿಕೊಂಡು ಕನ್ನಡದಲ್ಲಿ ಬಂದ ಮೊಟ್ಟಮೊದಲ ಕಾದಂಬರಿ ಜೀವಣ್ಣ ಮಸಳಿಯವ ಮಹಾಮನು ಕಾದಂಬರಿಯಾಗಿದೆ ಎಂದರು.

ಕಾರ್ಯಕ್ರದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ನಿವೃತ ಪ್ರಾಚಾರ್ಯರಾದ ಶಂಕರ ಆರ್ ಕಂದಗಲ್ಲ್ ಮಾತನಾಡಿ ಜೀವಣ್ಣ ಮಸಳಿಯವರು ವೃತ್ತಿಯಲ್ಲಿ ಪ್ರಾಥಮಿಕ ಶಾಲಾಶಿಕ್ಷಕರಾಗಿದ್ದರು ಜ್ಞಾನದಲ್ಲಿ ವಿಶ್ವವಿದ್ಯಾಲಯದ ಭಂಡಾರದ ಗಣಿಯಾಗಿದ್ದರು, ಇವರ ಸಾಹಿತ್ಯದ ಕೃತಿಗಳು ನಾವೆಲ್ಲ ಅವಲೋಕನ ಮಾಡಿಕೊಳ್ಳುವ ಅವಶ್ಯಕತೆ ಇದೆ ಎಂದರು.

ಕಾರ್ಯಕ್ರಮದ ದಿವ್ಯಸಾನಿದ್ಯವನ್ನು ಮುರನಾಳ ಮಳೆರಾಜೇಂದ್ರಸ್ವಾಮಿ ಮಠ ಪೂಜ್ಯರಾದ ಜಗನ್ನಾಥ ಮಹಾಸ್ವಾಮಿಗಳು ವಹಿಸಿದ್ದರು. ಶ್ರೀ ವಿಶ್ವನಾಥಸ್ವಾಮಿ ಮಹಾಪುರುಷ ಗೌರವ ಉಪಸ್ಥಿತಿ ವಹಿಸಿದ್ದರು. ಸಮಾರಂಭದ ಅತಿಥಿಗಳಾಗಿ ಶ್ರೀ ಮಲ್ಲಪ್ಪ ಪತ್ತಾರ, ಶ್ರೀ ವಸಂತರಾವ್ ಎನ್.ಕಮ್ಮಾರ, ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಬಾಗಲಕೋಟ ತಾಲೂಕ ವಿಶ್ವಕರ್ಮ ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷರಾದ ದೇವೇಂದ್ರ ಅಗಳಕಟ್ಟಿಯವರು ಸ್ವಾಗತಿಸಿದರು.ಈರಣ್ಣ ಪತ್ತಾರ ಪ್ರಾರ್ಥಿಸಿದರು, ಸಂಚಾಲಕರಾದ ಚಂದ್ರಶೇಖರ ಕಾಳನ್ನವರ ಕಾರ್ಯಕ್ರಮ ನಿರೂಪಿಸಿದರು ಇನ್ನೂರ್ವ ಕಾರ್ಯಕ್ರಮದ ಸಂಚಾಲಕರಾದ ಸಂಗಮೇಶ ಬಡಿಗೇರ ವಂದಿಸಿದರು.

ನಂತರ ನಡೆದ ಗೋಷ್ಠಿ ಒಂದರಲ್ಲಿ “ಶ್ರೀ ಜೀವಣ್ಣ ಮಸಳಿ ಮತ್ತು ರಾಮಾಯಣ ಓದು” ಕುರಿತು ಜೀವಣ್ಣ ಮಸಳಿಯವರು ನಾನು ಕಂಡಂತೆ, ಕುರಿತು ಶ್ರೀ ವೀರೇಂದ್ರ ಶೀಲವಂತ ಬೀಳಗಿ, ರಾಮಾಯಣದಲ್ಲಿ ವೈಶ್ವಕರ್ಮರು: ಜೀವಣ್ಣ ಮಸಳಿಯವರ ಆಲೋಚನೆಗಳು ಕುರಿತು ಶ್ರೀ ವಿಶ್ವನಾಥ ಪತ್ತಾರ ಹಂಪಿ, ಜೀವಣ್ಣ ಮಸಳಿ ಅವರು ಚಿತ್ರಿಸಿದ ರಾಮನ ವ್ಯಕ್ತಿತ್ವ ಕುರಿತು ಡಾ.ಪ್ರಕಾಶ ನರಗುಂದ ಮುದ್ದೇಬಿಹಾಳ, ಜೀವಣ್ಣ ಮಸಳಿ ಅವರು ಚಿತ್ರಿಸಿದ ರಾವಣನ ವ್ಯಕ್ತಿತ್ವ ಕುರಿತು ಡಾ.ಪ್ರಕಾಶ ಖಾಡೆ ಬಾಗಲಕೋಟ, ರಾಮಾಯಣದ ಸ್ತ್ರೀ ಪಾತ್ರಗಳು ಜೀವಣ್ಣ ಮಸಳಿ ಅವರು ಕಂಡಂತೆ ಡಾ.ವಿಜಯಶ್ರೀ ಇಟ್ಟಣ್ಣವರ ಬೀಳಗಿ ತಮ್ಮ ವಿಷಯಗಳ ಮಂಡನೆ ಮಾಡಿದರು ಈ ಗೋಷ್ಠಿಯ ಅಧ್ಯಕ್ಷತೆಯನ್ನು ಶ್ರೀ ಸಿದ್ದರಾಮ ಮನಹಳ್ಳಿ ಅವರು ವಹಿಸಿದ್ದರು.

ಕಾರ್ಯಕ್ರಮದಲ್ಲಿ ವಿಶ್ವಕರ್ಮ ನೌಕರರ ಸಂಘದ ಪದಾದಿಕಾರಿಗಳುಹಾಗೂ ವಿಶ್ವಕರ್ಮ ಸಮುದಾಯದ ಮುಖಂಡರು ಪಾಲ್ಗೊಂಡಿದ್ದರು.

.

";