ಬಾಗಲಕೋಟೆ
ಜಿಲ್ಲೆಯಲ್ಲಿ ಈರುಳ್ಳಿ ಹಾಗೂ ಮೆನಸಿನಕಾಯಿ ಬೆಳೆಯಲಾಗುತ್ತಿದ್ದು, ನಾನಾ ಹಂತಗಳಲ್ಲಿ ರೋಗ ಮತ್ತು ಕೀಟಭಾದೆ ಕಂಡು ಬರುತ್ತಿದೆ. ಸಸ್ಯ ಸಂರಕ್ಷಣಾ ಔಷಧ ಸಿಂಪಡಿಸುವ ಮೂಲಕ ಬೆಳೆ ನಿರ್ವಹಣೆ ಮಾಡಬಹುದಾಗಿದೆ.
ಈರುಳ್ಳಿ ಬೆಳೆ ನಿರ್ವಹಣೆ
ಈರುಳ್ಳಿ ಬೆಳೆಗೆ ಥಿಪ್ಸ್ ನುಸಿಯ ಬಾಧೆ ಕಂಡು ಬಂದಲ್ಲಿ ಪ್ರತಿ ಲೀಟರ್ ನೀರಿಗೆ ೧ ಮಿ.ಲೀ. ಪಿಫೋನಿಲ್ ೫ ಎಸ್‌ಸಿ ಅಥವಾ ೦.೨ ಗ್ರಾಂ. ಥೀಯೋಮೆಥಾಕ್ಸಂ ೨೫ ಡಬ್ಲ್ಯೂ,ಜಿ.ಯನ್ನು ಬೆರೆಸಿ ಸಿಂಪಡಿಸಬೇಕು. ಮಜ್ಜಿಗೆ ರೋಗ ಮತ್ತು ಕಾಡಿಗೆ ರೋಗ ಕಂಡು ಬಂದಲ್ಲಿ ೨ ಗ್ರಾಂ. ಮೆಂಕೋಜೆಬ್ ೭೫ ಡಬ್ಲ್ಯೂಪಿಯನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಎಲೆ ತಿನ್ನುವ ಕೀಟಗಳ ಹಾವಳಿ ಕಂಡು ಬಂದಲ್ಲಿ ೧ ಮಿ.ಲೀ. ಲ್ಯಾಮ್‌ಡ ಸೆಹಲೋಥಿನ್ ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು. ಆಲ್ಟರ್‌ನೇರಿಯಾ ಎಲೆ ಚುಕ್ಕೆರೋಗ ಮತ್ತು ಮಜ್ಜಿಗೆ ರೋಗಕ್ಕೆ ೧ ಮಿ.ಲೀ. ಡೈಪೆನೊಕೊನಜೋಲ್ ೨೫ ಇ.ಸಿ. ಅಥವಾ ೧.೫ ಮಿ.ಲೀ. ಆಜಾಕ್ಸಿಸ್ಟೋಬಿನ್ ೧೧ ನೊಂದಿಗೆ ಟೆಬುಕೊನಜೋಲ್ ೧೮.೩ನ್ನು ಪ್ರತಿ ಲೀಟರ್ ನೀರಿಗೆ ಬೆರೆಸಿ ಸಿಂಪಡಿಸಬೇಕು.
ಮೆಣಸಿನಕಾಯಿ ಬೆಳೆ ನಿರ್ವಹಣೆ
ಮೆಣಸಿನಕಾಯಿಯಲ್ಲಿ ಎಲೆ ಚುಕ್ಕೆ ರೋಗ ಬಾಧೆ ಕಂಡು ಬಂದಲ್ಲಿ ೧ ಗ್ರಾಂ ಕಾರ್ಬಂಡೈಜಿಮ್ ಅಥವಾ ೨ ಗ್ರಾಂ ಮ್ಯಾಂಕೋಜೆಬ್ ೭೫ ಡಬ್ಲ್ಯೂಪಿ ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಬೂದು ರೋಗದ ಬಾಧೆಗೆ ೧ ಗ್ರಾಂ. ಕಾರ್ಬೆಂಡೈಜಿಮ್ ೫೦ ಡಬ್ಲ್ಯೂ.ಪಿ. ಅಥವಾ ೩ ಗ್ರಾಂ ನೀರಿನಲ್ಲಿ ಕರಗುವ ಗಂಧಕ ಅಥವಾ ೧ ಮಿ.ಲೀ. ಪೆನ್‌ನಾಜೋಲ್ ೧೦ ಇ.ಸಿ ಅಥವಾ ೧ ಮಿ.ಲೀ. ಸಾಕ್ಸಿಮ್‌ಮಿಥೈಲ್ ೫೦ ಎಸ್.ಸಿ. ಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಸಿಂಪಡಿಸಬೇಕು. ಡ್ರಿಪ್ಸ್ ನುಸಿ ಹೇನು ಹಾಗೂ ಜೇಡನುಸಿ ಕೀಟ ಬಾಧೆ ನಿಯಂತ್ರಣಕ್ಕೆ ೧.೭ ಮಿ.ಲೀ. ಡೈಮಿಥೋಯೇಟ್ ೩೦ ಇ.ಸಿ. ಅಥವಾ ೧ ಮಿ.ಲೀ ನಟೋರಮ್ ೧೧.೭ ಎಸ್.ಸಿ. ಹಾಗೂ ೮ ವಾರಗಳ ನಂತರ ಪ್ರತಿ ಲೀ. ನೀರಿನಲ್ಲಿ ೨.೦ ಮಿ.ಲೀ ಪ್ರೋಫೆನೊಫಾಸ್ ೫೦ ಇ.ಸಿ. ಬೆರೆಸಿ ಸಿಂಪಡಿಸಬೇಕು.
ಹೆಚ್ಚಿನ ಮಾಹಿತಿಗೆ ತಾಲೂಕು ತೋಟಗಾರಿಕೆ ಇಲಾಖೆ ಸಂಪರ್ಕಿಸುವAತೆ ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ ತಿಳಿಸಿದ್ದಾರೆ.