ಪ್ರಚಾರ ಶುರು ಮಾಡಿದ ಜಿಕೆಟಿ
ನಿಮ್ಮ ಸುದ್ದಿ ಬಾಗಲಕೋಟೆ
ಮುಂದೂಡಲಾಗಿದ್ದ ಕನ್ನಡ ಸಾಹಿತ್ಯ ಪರಿಷತ್ ಚುನಾವಣೆಗೆ ಮುಹೂರ್ತ ಸಮೀಪಿಸುತ್ತಿದ್ದಂತೆ ಕಸಾಪ ಜಿಲ್ಲಾ ಚುಕ್ಕಾಣೆ ಹಿಡಿಯಲು ಸದ್ದಿಲ್ಲದೆ ಪ್ರಚಾರ ಕಾರ್ಯ ಆರಂಭವಾಗಿದೆ.
ಕನ್ನಡ ಸಾಹಿತ್ಯ ಪರಿಷತ್ ನ ಜಿಲ್ಲಾಧ್ಯಕ್ಷ ಸ್ಥಾನದ ಮೇಲೆ ಕಣ್ಣಟ್ಟಿರುವ ಸಾಹಿತಿ ಜಿ.ಕೆ.ತಳವಾರ ತಮ್ಮ ವಿನೂತನ ರೀತಿಯ ಅಭಿಯಾನದ ಮೂಲಕ ಪರಿಷತ್ ಸದಸ್ಯರ ಮನವೊಲಿಕೆಗೆ ಮುಂದಾಗಿದ್ದಾರೆ ಎಂಬ ಮಾತು ಕೇಳಿದೆ.
ಕೊರೋನಾ ಹಿನ್ನೆಲೆಯಲ್ಲಿ ಮುಂದೂಡಿದ್ದ ಪರಿಷತ್ ಚುನಾವಣೆ ಮುಂದಿನ ತಿಂಗಳ ನಡೆಯಬಹುದೆಂಬ ಪ್ರಬಲ ಮಾತು ಸಾಹಿತ್ಯ ವಲಯದಲ್ಲಿ ಹರಿದಾಡತ್ತಿದೆ. ಹೀಗಾಗಿ ಆಕಾಂಕ್ಷಿಗಳು ಈಗಿನಿಂದಲೇ ಪ್ರಚಾರ ಕಾರ್ಯಕ್ಕೆ ಅಣಿಯಾಗಿದ್ದಾರೆ.
ಪರಿಷತ್ ನ ಜಿಲ್ಲಾ ಚುಕ್ಕಾಣಿ ಹಿಡಿಯಲು ಹಲವರು ಹಲವು ಮಾರ್ಗ ಕಂಡುಕೊಂಡಿದ್ದು ಆಕಾಂಕ್ಷಿ ಜಿ.ಕೆ.ತಳವಾರ ಅವರು *ನಮ್ಮ ಪುಸ್ತಕ ನಿಮ್ಮ ಮನೆಗೆ* ಎಂಬ ಅಭಿಯಾನ ಆರಂಭಿಸಿದ್ದಾರೆ.
ಈಗಾಗಲೇ ಹಲವು ಸಂಘಟನೆಗಳ ಬೆಂಬಲದೊಂದಿಗೆ ಆರಂಭವಾದ ಅಭಿಯಾನ ಬಹುತೇಕ ಪರಿಷತ್ ಸದಸ್ಯರಿಗೆ ಪುಸ್ತಕ ತಲುಪಿಸುವ ನೆಪದಲ್ಲಿ ಮತ ಭಿಕ್ಷೆಯನ್ನು ಕೇಳುತ್ತಿದ್ದಾರೆ ಎಂಬುದು ಗುಟ್ಟಾಗಿ ಉಳಿದಿಲ್ಲ. ಏಕೆಂದರೆ ಇದು ಅವರ ಅಭಿಯಾನದ ಬ್ಯಾನರ್ ನಲ್ಲಿ ಆಕಾಂಕ್ಷಿ ಅಭ್ಯರ್ಥಿ, ಜಿಲ್ಲಾ ಕಸಾಪ ಎಂದು ಮುದ್ರಿತ ವಾಗಿದ್ದನ್ನು ಮತ್ತಷ್ಟು ಪುಷ್ಠಿ ನೀಡಿದಂತಿದೆ.
ಮುಂದಿನ ಹಂತದಲ್ಲಿ ಈ ಅಭಿಯಾನ ಮತ್ತಷ್ಟು ಕನ್ನಡದ ಹಳೆಯ ಮನಸ್ಸುಗಳನ್ನು ಸೆಳೆಯಲಿದೆ ಎಂಬ ಮಾತು ಸಾಹಿತ್ಯ ವಲಯದಿಂದ ಕೇಳಿದೆ.
ಜಿಕೆಟಿ ಅವರೊಂದಿಂಗೆ ಮತ್ತಿಬ್ಬರು ಆಕಾಂಕ್ಷಿಗಳೂ ಸಹ ಸದ್ದಿಲ್ಲದೆ ಒಂದೆರಡು ಸುತ್ತು ಪ್ರಚಾರ ಪೂರ್ಣಗೊಳಿಸಿ ಅಖಾಡಕ್ಕೆ ಸಿದ್ದವಾಗಿದ್ದಾರೆ ಎಂಬುದೂ ಕೇಳಲ್ಪಟ್ಟಿದೆ.
ಯಾರೇ ಕಸಾಪ ಜಿಲ್ಲಾ ಘಟಕದ ಚುಕ್ಕಾಣೆ ಹಿಡಿದರೂ ಕನ್ನಡ ಗಟ್ಟಿಗೊಳಿಸಲಿ. ಹಳೆ ಮನಸ್ಸುಗಳೊಂದಿಗೆ ಹೊಸ ಮನಸ್ಸುಗಳನ್ನು ಸಮ್ಮಿಲನ ಗೊಳಿಸಿ ಕನ್ನಡದ ತೇರು ಮತ್ತಷ್ಟು ಮುಂದೆ ಸಾಗಲಿ ಎಂಬುದು ಕನ್ನಡಾಭಿಮಾನಿಗಳ ಅಭಿಲಾಷೆಯಾಗಿದೆ.