This is the title of the web page
This is the title of the web page

Live Stream

April 2025
S M T W T F S
 12345
6789101112
13141516171819
20212223242526
27282930  

| Latest Version 9.4.1 |

Education NewsHealth & FitnessInternational NewsLocal NewsNational NewsState News

ಸೂರ್ಯನೆಡೆ ನಮ್ಮ ನಡೆ; ನಾಳೆ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ; ಇಲ್ಲಿ ವೀಕ್ಷಿಸಿ!

ಸೂರ್ಯನೆಡೆ ನಮ್ಮ ನಡೆ; ನಾಳೆ ಆದಿತ್ಯ L1 ಉಡಾವಣೆಗೆ ಕ್ಷಣಗಣನೆ; ಇಲ್ಲಿ ವೀಕ್ಷಿಸಿ!

ಹೊಸದಿಲ್ಲಿ: ಸೂರ್ಯನ ಅಧ್ಯಯನಕ್ಕಾಗಿ (Solar mission) ಇಸ್ರೋ (ISRO) ಕೈಗೊಳ್ಳುತ್ತಿರುವ ಆದಿತ್ಯ ಎಲ್‌ 1 ಮಿಷನ್‌ (Aditya L1 Mission) ಉಡಾವಣೆಗೆ ಕ್ಷಣಗಣನೆ ಆರಂಭವಾಗಿದೆ. ಆಂಧ್ರಪ್ರದೇಶದ ಶ್ರೀಹರಿಕೋಟಾದಲ್ಲಿರುವ ಸತೀಶ್‌ ಧವನ್‌ ಬಾಹ್ಯಾಕಾಶ ಕೇಂದ್ರದಿಂದ (Satish Dhawan space center) ನಾಳೆ (ಸೆಪ್ಟೆಂಬರ್‌ 2) ಬೆಳಗ್ಗೆ 11.50ಕ್ಕೆ ಉಡಾವಣೆ ಮಾಡಲಾಗುತ್ತದೆ.

ಇಸ್ರೋ ಉಡಾವಣೆಯ ಪೂರ್ವ ಸಿದ್ಧತೆ, ಅಭ್ಯಾಸ ಹಾಗೂ ಆಂತರಿಕ ತಪಾಸಣೆ ಕೈಗೊಂಡಿದೆ. ಇದರ ಫೋಟೊಗಳನ್ನೂ ಇಸ್ರೋ ಎಕ್ಸ್‌ ಸಾಮಾಜಿಕ ಜಾಲತಾಣಲ್ಲಿ ಹಂಚಿಕೊಂಡಿತ್ತು. ಪಿಎಸ್‌ಎಲ್‌ವಿ-ಸಿ 57 (PSLV-C57) ರಾಕೆಟ್‌ ಆದಿತ್ಯವನ್ನು ಹೊತ್ತುಕೊಂಡು ಸಾಗಲಿದೆ. ಭೂಮಿಯಿಂದ 15 ಲಕ್ಷ ಕಿಲೋಮೀಟರ್‌ ದೂರದಲ್ಲಿ ಎಲ್‌ 1 ಮಿಷನ್‌ ಸೂರ್ಯನ ಮೇಲ್ಮೈ ವಾತಾವರಣದ ಅಧ್ಯಯನ ಮಾಡಲಿದೆ. ಗುರುವಾರ ಇಸ್ರೋ ಮುಖ್ಯಸ್ಥ ಎಸ್. ಸೋಮನಾಥ್ ಅವರು ಮಾತನಾಡಿ, ಇಸ್ರೋ ಉಡಾವಣೆಗೆ ಸಿದ್ಧವಾಗುತ್ತಿದ್ದು, ಶುಕ್ರವಾರ ಕ್ಷಣಗಣನೆ ಪ್ರಾರಂಭವಾಗಲಿದೆ ಎಂದಿದ್ದಾರೆ.

ಆದಿತ್ಯ-L1 ಬಾಹ್ಯಾಕಾಶ ನೌಕೆಯನ್ನು ಸೌರ ಕರೋನದ ದೂರವೀಕ್ಷಣೆ ಮತ್ತು ಭೂಮಿಯಿಂದ ಸುಮಾರು 1.5 ಮಿಲಿಯನ್ ಕಿಲೋಮೀಟರ್ ದೂರದಲ್ಲಿರುವ L1 (ಸೂರ್ಯ-ಭೂಮಿಯ ಲಗ್ರಾಂಜಿಯನ್ ಪಾಯಿಂಟ್) ನಲ್ಲಿ ಸೌರ ಮಾರುತದ ನೇರ ವೀಕ್ಷಣೆ ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಆದಿತ್ಯ-L1 ಸಂಪೂರ್ಣ ದೇಶೀ ಪ್ರಯತ್ನದಿಂದ ನಿರ್ಮಿತವಾಗಿದೆ. ಇದು ಸೂರ್ಯನ ವೀಕ್ಷಣೆಗೆ ಮೀಸಲಾದ ಮೊದಲ ಭಾರತೀಯ ಬಾಹ್ಯಾಕಾಶ ಕಾರ್ಯಾಚರಣೆ.

 

ಆದಿತ್ಯ-L1ನ ಪಾರ್ಕಿಂಗ್
ಆದಿತ್ಯ-L1 ಅನ್ನು ಸೂರ್ಯ-ಭೂಮಿಯ ನಡುವಿನ ವ್ಯವಸ್ಥೆಯ L1 (ಲಾಗ್ರೇಂಜಿಯನ್)‌ ಕಕ್ಷೆಯಲ್ಲಿ ಇರಿಸಲಾಗುತ್ತದೆ. ಅಲ್ಲಿ ಎರಡೂ ಆಕಾಶಕಾಯಗಳ ಗುರುತ್ವಾಕರ್ಷಣೆಯ ಪರಿಣಾಮಗಳು ಪರಸ್ಪರ ರದ್ದುಗೊಳ್ಳುತ್ತವೆ. ಬಾಹ್ಯಾಕಾಶದಲ್ಲಿನ ಆ ʼನಿಲುಗಡೆ ಸ್ಥಳʼವು ಗುರುತ್ವಾಕರ್ಷಣೆಯ ಬಲಗಳನ್ನು ಸಮತೋಲನಗೊಳಿಸುವುದರಿಂದ, ಬಾಹ್ಯಾಕಾಶ ನೌಕೆಯನ್ನು ಯಾವುದೇ ಇಂಧನ ಬಳಕೆ ಮಾಡದೆಯೇ ಅಲ್ಲಿಡಬಹುದು. ಈ ಕಕ್ಷೆಯನ್ನು ತಲುಪಲು ಅದು ಸುಮಾರು ನಾಲ್ಕು ತಿಂಗಳು ತೆಗೆದುಕೊಳ್ಳಲಿದೆ.

ಆದಿತ್ಯ-L1 ಮಿಷನ್‌ನ ವೆಚ್ಚ
2019ರಲ್ಲಿ ಆದಿತ್ಯ-L1 ಮಿಷನ್‌ಗಾಗಿ ಕೇಂದ್ರವು ಸುಮಾರು 380 ಕೋಟಿ ರೂ. ನೀಡಿದೆ. ಇದುವರೆಗೆ ಆಗಿರುವ ವೆಚ್ಚದ ಬಗ್ಗೆ ಇಸ್ರೋ ಅಧಿಕೃತ ವಿವರ ನೀಡಿಲ್ಲ.

ಆದಿತ್ಯ-ಎಲ್1 ಮಿಷನ್ ಭಾರತಕ್ಕೆ ಏಕೆ ಮುಖ್ಯ?
ಆಗಸ್ಟ್‌ನಲ್ಲಿ ಚಂದ್ರನ ದಕ್ಷಿಣ ಧ್ರುವದ ಸಮೀಪ ಬಾಹ್ಯಾಕಾಶ ನೌಕೆಯನ್ನು ಇಳಿಸಿದ ಮೊದಲ ದೇಶವಾದ ನಂತರ ಭಾರತದ ಸಾಧನೆಗೆ ಇದು ಮತ್ತೊಂದು ಕಿರೀಟವಾಗಲಿದೆ. ಎಲ್ಲವೂ ಯೋಜನೆಯ ಪ್ರಕಾರ ನಡೆದರೆ, ಆದಿತ್ಯ-L1 ಐದು ಲಾಗ್ರೇಂಜ್ ಪಾಯಿಂಟ್‌ಗಳಲ್ಲಿ ಒಂದರ ಸುತ್ತ ಹಾಲೋ ಕಕ್ಷೆಗೆ ಪ್ರವೇಶಿಸುತ್ತದೆ. ಅಲ್ಲಿಂದ ಆದಿತ್ಯ-L1 ಸೂರ್ಯನ ಅಡೆತಡೆಯಿಲ್ಲದ ನೋಟವನ್ನು ಪಡೆದು ಭೂಮಿ ಮತ್ತು ಇತರ ಗ್ರಹಗಳ ಸುತ್ತಮುತ್ತಲಿನ ಪರಿಸರ ಪರಿಸ್ಥಿತಿಗಳ ಮೇಲೆ ಅಧ್ಯಯನ ನಡೆಸಬೇಕು. ಇಸ್ರೋದ ಈ ಬಾಹ್ಯಾಕಾಶ ನೌಕೆಯು ವಿಜ್ಞಾನಿಗಳಿಗೆ ಭೂಮಿಯ ಹವಾಮಾನದ ಇತಿಹಾಸವನ್ನು ಶೋಧಿಯಲು ಸಹಾಯ ಮಾಡಲಿದೆ. ಏಕೆಂದರೆ ಸೌರ ಚಟುವಟಿಕೆಗಳು ಭೂಗ್ರಹದ ವಾತಾವರಣದ ಮೇಲೆ ಪ್ರಭಾವ ಬೀರುತ್ತವೆ.

Aditya L1 Mission
ಇತರ ದೇಶಗಳು ಮಾಡಿವೆಯೇ?
ಸೂರ್ಯನನ್ನು ಅಧ್ಯಯನ ಮಾಡುತ್ತಿರುವ ದೇಶಗಳು ಕೆಲವೇ. ಸೌರ ಜ್ವಾಲೆಗಳು ಮತ್ತು ಕರೋನಲ್ ಸಮೂಹ ಚಿಮ್ಮುವಿಕೆಗಳನ್ನು ಶೋಧಿಸಲು ಕಳೆದ ವರ್ಷ ಚೀನಾ ಸುಧಾರಿತ ಬಾಹ್ಯಾಕಾಶ-ಆಧಾರಿತ ಸೌರ ವೀಕ್ಷಣಾಲಯವನ್ನು ಸ್ಥಾಪಿಸಿತ್ತು. ಚೀನಾ ಇಂತಹ ಎರಡು ಬಾಹ್ಯಾಕಾಶ ನೌಕೆಗಳನ್ನು ಭೂಮಿಯ ಕಕ್ಷೆಯಲ್ಲಿ ಹೊಂದಿದೆ. ಅಮೆರಿಕವು ಪಾರ್ಕರ್ ಸೋಲಾರ್ ಪ್ರೋಬ್ ಸೇರಿದಂತೆ ಕೆಲ ಸೌರ ಕಾರ್ಯಾಚರಣೆಗಳನ್ನು ಹೊಂದಿದೆ. ಇದು 2021ರಲ್ಲಿ ಸೂರ್ಯನ ಕರೋನಾ ಅಥವಾ ಮೇಲಿನ ವಾತಾವರಣದ ಮೂಲಕ ಹಾದುಹೋದ ಮೊದಲ ಬಾಹ್ಯಾಕಾಶ ನೌಕೆ.

ಜಪಾನ್, ಯುಕೆ, ಯುಎಸ್ ಮತ್ತು ಯುರೋಪ್‌ನ ಬಾಹ್ಯಾಕಾಶ ಏಜೆನ್ಸಿಗಳ ಬೆಂಬಲವಿರುವ ಹಿನೋಡ್ ಎಂಬ ನೌಕೆಯೂ ಹೀಗೇ ಭೂಮಿಯನ್ನು ಸುತ್ತುತ್ತಿದೆ. ಇದು ಸೂರ್ಯನ ಕಾಂತೀಯ ಕ್ಷೇತ್ರಗಳನ್ನು ಅಳೆಯುತ್ತಿದೆ. ನಾಸಾ ಮತ್ತು ಯುರೋಪಿಯನ್ ಸ್ಪೇಸ್ ಏಜೆನ್ಸಿಯ ಜಂಟಿ ಯೋಜನೆಯಾದ ಸೋಲಾರ್ ಮತ್ತು ಹೀಲಿಯೋಸ್ಫಿರಿಕ್ ಅಬ್ಸರ್ವೇಟರಿ ಮಿಷನ್ (SOHO), ಇಸ್ರೋ ಗುರಿಯಾಗಿಸಿಕೊಂಡಿರುವ ಅದೇ ಲಾಗ್ರೇಂಜ್ ಪಾಯಿಂಟ್‌ಗೆ ಸಮೀಪದಲ್ಲಿದೆ. ಮತ್ತೊಂದು ಜಂಟಿ US-ಯುರೋಪಿಯನ್ ಮಿಷನ್, ಸೋಲಾರ್ ಆರ್ಬಿಟರ್, ಸೂರ್ಯನಿಂದ ಸುಮಾರು 42 ಮಿಲಿಯನ್ ಕಿಮೀ ದೂರದಲ್ಲಿ ಚಲಿಸಲಿದೆ.

ಈ ಉಡಾವಣೆಯನ್ನು ನೀವು ಇಲ್ಲಿ ವೀಕ್ಷಿಸಬಹುದು:
ISRO Website: ಇಸ್ರೊ
Facebook: https://facebook.com/ISRO
YouTube: https://youtube.com/watch?v=_IcgGYZTXQw
DD National TV channel
from 11:20 Hrs. IST

Nimma Suddi
";