This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Agriculture NewsBusiness NewsEducation NewsHealth & FitnessLocal NewsState News

ಕಬ್ಬಿಗಿಂತ ತಾಳೆ ಬೆಳೆ ಲಾಭದಾಯಕ : ಪಿ.ಎಚ್.ಪೂಜಾರ

ಕಬ್ಬಿಗಿಂತ ತಾಳೆ ಬೆಳೆ ಲಾಭದಾಯಕ : ಪಿ.ಎಚ್.ಪೂಜಾರ

ರೈತರ ಯಶೋಗಾಥೆ ಸಿಡಿ ಬಿಡುಗಡೆ

ನಿಮ್ಮ ಸುದ್ದಿ ಬಾಗಲಕೋಟೆ

ದೇಶದಲ್ಲಿ ಉತ್ಪಾದನೆಕ್ಕಿಂತ ಆಮದು ಪ್ರಮಾಣದಲ್ಲಿ ಹೆಚ್ಚಿಗಿರುವ ತಾಳೆ ಬೆಳೆ ಕಬ್ಬಿನ ಬೆಳೆಗಿಂತ ಲಾಬದಾಯಕವಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಪಿ.ಎಚ್.ಪೂಜಾರ ಹೇಳಿದರು.

ಜಿ.ಪಂ ನೂತನ ಸಭಾಭವನದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ, ತೋಟಗಾರಿಕೆ ಇಲಾಖೆ ಹಾಗೂ 3ಎಫ್ ಆಯಿಲ್ ಪಾಮ್ ಪ್ರೈ.ಲಿ ಸಹಯೋಗದಲ್ಲಿ ಪ್ರಪ್ರಥಮ ಬಾರಿಗೆ ತೈಲ ಅಭಿಯಾನ ತಾಳೆಬೆಳೆ ಯೋಜನೆಯಡಿ ಹಮ್ಮಿಕೊಂಡ ಮೇಘಾ ಎಣ್ಣೆ ತಾಳೆ ತೋಟಕ್ಕೆ ಚಾಲನೆ ನೀಡಿ ಮಾತನಾಡಿದ ಅವರು ಜಿಲ್ಲೆಯಲ್ಲಿ ವಿವಿಧ ನೀರಾವರಿ ಯೋಜನೆಗಳಿಂದ ಬಹುಪಾಲು ನೀರಾವರಿಗೆ ಒಳಪಟ್ಟಿದೆ. ಕಬ್ಬಿನ ಬದಲಾಗಿ ತಾಳೆ ಬೆಳೆ ಬೆಳೆಯುವದರಿಂದ ಹೆಚ್ಚು ಲಾಭದಾಯಕವಾಗುತ್ತದೆ ಎಂದರು.

ಕೋಲಾರ ಹೊರತುಪಡಿಸಿದರೆ, ನಂತರ ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ದಾಳಿಂಬೆ, ಚಿಕ್ಕು ಹಾಗೂ ಬಾಳೆ ಬೆಳೆ ಬೆಳೆಯಲಾಗುತ್ತದೆ. ತಾಳೆ ಎಣ್ಣೆ ಆಹಾರ ಪದಾರ್ಥ ಹಾಗೂ ಕೈಗಾರಿಕಾ ಉತ್ಪನ್ನ ಹಾಗೂ ಜೈವಿಕ ಶಕ್ತಿ ಇಂಧವಾಗಿ ಬಳಸಲಾಗುತ್ತಿರುವದರಿಂದ ಹೆಚ್ಚು ಲಾಭ ಪಡೆಯಬಹುದಾಗಿದೆ. ಇದರಿಂದ ರೈತರ ಆರ್ಥಿಕ ಮಟ್ಟ ಸುಧಾರಣೆಗೊಂಡು ಸ್ವಾವಲಂಭಿ ಬದುಕು ಸಾಗಿಸಲು ಸಾಧ್ಯವಾಗುತ್ತದೆ. 25 ವರ್ಷಗಳವರೆಗಿನ ಕನಿಷ್ಟ ನಿರ್ವಹಣೆಯ ಬೆಳೆಯಾಗಿದೆ. ಇದರಲ್ಲಿ ಆಂತರಿಕ ಬೆಳೆ ಸಹ ಬೆಳೆಯಬಹುದಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಮಾತನಾಡಿ ತಾಳೆ ಬೆಳೆಯಿಂದ ರೈತರ ಆರ್ಥಿಕ ಮಟ್ಟದ ಸುಧಾರಿಸುವದರ ಜೊತೆಗೆ ಆರೋಗ್ಯವನ್ನು ಕಾಪಾಡಿಕೊಳ್ಳಬಹುದಾಗಿದೆ. ಜಿಲ್ಲೆಗೆ ಹೊಸ ಯೋಜನೆಯಾದರೂ ಸಹ ಇದರ ಬಗ್ಗೆ ಪೂರ್ವ ಸಿದ್ದತೆ ಮಾಡಿಕೊಳ್ಳಲಾಗಿರುತ್ತದೆ. ವಿಜ್ಞಾನಿಗಳು ವಿಚಾರ ಮಾಡುವದಕ್ಕೂ ರೈತರು ಎದುರಿಸುವ ಸಮಸ್ಯೆಗಳು ಬೇರೆಯಾಗಿರುತ್ತದೆ. ಒಟ್ಟಿನಲ್ಲಿ ಅನುಭವದ ಪಾಠ ಕಲಿಸುತ್ತದೆ. ತಾಳೆ ಬೆಳೆಗೆ ಇಲಾಖೆ ಮತ್ತು ಕಂಪನಿಗಳ ಸಹಕಾರ ಪಡೆದು ಉತ್ತಮ ಬೆಳೆ ಬೆಳೆಯಲು ರೈತರು ಮುಂದಾಗಬೇಕು ಎಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಲಾಲ್‍ಬಾಗ್ ತೋಟಗಾರಿಕೆ ಅಪರ ನಿರ್ದೇಶಕ ಡಾ.ಪಿ.ಎಂ.ಸೊಬರದ ಅವರು 50 ವರ್ಷಗಳ ಇತಿಹಾಸ ಹೊಂದಿರುವ ಖ್ಯಾದ್ಯ ತೈಲ ನಮ್ಮ ಆಹಾರ ಪದಾರ್ಥದಲ್ಲಿ ಬಳಕೆಯಾಗುತ್ತಿರುವದನ್ನು ನೋಡಿದರೆ ಅದರ ಮಹತ್ವ ಗೊತ್ತಾಗುತ್ತದೆ. ಎಣ್ಣೆ ಬಳಕೆ ಮೂಲಕವೇ ನಮ್ಮ ಆರೋಗ್ಯವನ್ನು ತಿಳಿಯಬಹುದು. ಒಬ್ಬ ವ್ಯಕ್ತಿ ವರ್ಷಕ್ಕೆ 20 ಕೆಜಿ ಎಣ್ಣೆ ಉಪಯೋಗಿತ್ತಿದ್ದಾರೆ. 1980ರಲ್ಲಿ ನೋಡಿದರೆ ಪ್ರತಿ ವ್ಯಕ್ತಿ ವರ್ಷಕ್ಕೆ 7 ಕೆಜಿ ಎಣ್ಣೆ ಮಾತ್ರ ಬಳಕೆ ಮಾಡುತ್ತಿದ್ದರು. ಇದಕ್ಕೆ ಕರದು ಪದಾರ್ಥ ತಿನ್ನುವುದು ಹೆಚ್ಚಾಗಿರುವುದೇ ಕಾರಣ ಎಂದರು.

ದೇಶದಲ್ಲಿ ಎಣ್ಣೆ ಕಾಳುಗಳ ಬೇಡಿಕೆ ಹೆಚ್ಚಾಗಿ ಉತ್ಪಾದನೆಕ್ಕಿಂತ ಬೇಡಿಕೆ ಹೆಚ್ಚಾಗಿ ಕಂಡುಬಂದಿದೆ. ಇದರಿಂದ ದೇಶದ ಆರ್ಥಿಕತೆ ಮೇಲೆ ಪರಿಣಾಮ ಬೀರತೊಡಗಿದೆ. 26 ಮೆಟ್ರಿಕ್ ಟನ್ ಬಳಕೆ ಇದ್ದರೆ, 12 ಮೆಟ್ರಿಕ್ ಟನ್ ಉತ್ಪಾದನೆಯಾಗುತ್ತಿದೆ. ಶೇ.68 ರಷ್ಟು ಎಣ್ಣೆಯನ್ನು ಇಂಡೋನೇಷಿಯಾ ಮತ್ತು ಮಲೇಶಿಯಾದಿಂದ ಆಮದು ಮಾಡಿಕೊಳ್ಳಲಾಗುತ್ತಿದೆ. ಇದರಿಂದ ದೇಶದ ಆರ್ಥಿಕತೆ ಜೊತೆಗೆ ಆರೋಗ್ಯ ಹಾಳಾಗುತ್ತಿದೆ. ಉತ್ತರ ಕರ್ನಾಟದ ಬಾಗಲಕೋಟೆ ಮತ್ತು ಯಾದಗಿರಿ ಪ್ರದೇಶದಲ್ಲಿ ಹವಾಮಾನ ಮತ್ತು ನೀರು ಉತ್ತಮವಾಗಿದ್ದು, ತಾಳೆ ಬೆಳೆಯಬಹುದಾಗಿದೆ ಎಂದರು.

ಈ ಸಂರ್ದರ್ಭದಲ್ಲಿ ತಾಳೆ ಬೆಳೆಯಲ್ಲಿ ಯಶಸ್ಸು ಕಡಂ ರೈತರ ಯಶೋಗಾಥೆಯ ಕಿರುಚಿತ್ರಗಳ ಸಿಡಿಗಳನ್ನು ಜಿಲ್ಲಾಧಿಕಾರಿ ಕೆ.ಎಂ.ಜಾನಕಿ ಬಿಡುಗಡೆ ಮಾಡಿದರು.

ತಾಂತ್ರಿಕ ಗೋಷ್ಠಿಯಲ್ಲಿ ತಾಳೆ ಬೆಳೆ ಬೇಸಾಯ ಕುರಿತು ತೋವಿವಿಯ ಸಹ ಪ್ರಾದ್ಯಾಪಕ ಡಾ.ಸಂಜೀವರೆಡ್ಡಿ ರೆಡ್ಡಿ, ತಾಳೆ ಬೆಳೆ ಮಾರುಕಟ್ಟೆ ಹಾಗೂ ಒಡಂಬಡಿಕೆ ಕುರಿತು 3ಎಫ್ ಆಯಿಲ್ ಪಾಮ್ ಪ್ರೈವೆಟ್ ಲಿ. ಮುಖ್ಯಸ್ಥ ಶ್ರೀನಿವಾಸ್ ಖಿಲಾರಿ ಮಾಹಿತಿ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ ಸಿಇಓ ಶಶಿಧರ ಕುರೇರ, ತೋಟಗಾರಿಕೆ ವಿವಿಯ ಕುಲಪತಿ ಡಾ.ಎನ್.ಕೆ.ಹೆಗಡೆ, ಜಿ.ಪಂ ಉಪಕಾರ್ಯದರ್ಶಿ ಎನ್.ವಾಯ್.ಬಸರಿಗಿಡದ, ತೋಟಗಾರಿಕೆ ಉಪನಿರ್ದೇಶಕ ರವೀಂದ್ರ ಹಕಾಟೆ, 3ಎಫ್ ಆಯಿಲ್ ಪಾಮ್ ಪ್ರೈವೆಟ್ ಲಿಮಿಟೆಡ್‍ನ ಬಸವಕುಮಾರ ಸೇರಿದಂತೆ ಇತರರು ಉಪಸ್ಥಿತರಿದ್ದರು.

Nimma Suddi
";