ಮಕ್ಕಳ ಶಿಕ್ಷಣದಲ್ಲಿ ಪಾಲಕರ ಜವಾಬ್ದಾರಿ ಬಹಳಷ್ಟಿದೆ
:==ಸರಕಾರಿ ಶಾಲೆಗಳು ಅಂದರೆ ಇಂದಿನ ದಿನಮಾನ ಗಳಲ್ಲಿ ಮೂಗು ಮುರಿವವರೇ ಹೆಚ್ಚು ಗುಣಮಟ್ಟದ ಶಿಕ್ಷಣ ಇರುವುದು ಸರಕಾರಿ ಶಾಲೆ ಗಳಲ್ಲಿ ಆದ್ದರಿಂದ ಪಾಲಕರು ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವಲ್ಲಿ ಪಾಲಕರು ಜವಾಬ್ದಾರಿ ತಗೆದು ಕೊಳ್ಳ ಬೇಕೆಂದು ಸರಕಾರಿ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಎಸ್ ಡಿ ಎಮ್ ಸಿ ಅಧ್ಯಕ್ಷ ದೇವರಾಜ್ ಕಮತಗಿ ಹೇಳಿದರು
ಅವರು ಪಾಲಕರ ಸಭೆಯ ಅಧ್ಯಕ್ಷ ತೆ ವಹಿಸಿ ಮಾತನಾಡುತ್ತ ಸರಕಾರಿ ಶಾಲೆಗಳಲ್ಲಿ ಗುಣಮಟ್ಟದ ಶಿಕ್ಷಣ ಇರುವುದರಿಂದ ಖಾಸಗಿ ಶಿಕ್ಷಣ ಶಾಲೆ ಗಳತ್ತ ಮುಖ ಮಾಡದೆ ಸರಕಾರಿ ಶಾಲೆಗಳಲ್ಲಿಯೇ ಶಿಕ್ಷಣ ಕೊಡಿಸ ಬೇಕೆಂದು ಹೇಳಿದರು
ಮುಖ್ಯ ಗುರು ಮಾತೆ ಶ್ರೀ ಮತಿ ವಿ. ವಿ. ಕಂದಕೂರ ಪಾಲಕರಸಭೆಯಬಗ್ಗೆ ಪ್ರಾಸ್ತಾವಿಕ ವಾಗಿ ಮಾತನಾಡಿದರು ಈ ಸಭೆಯಲ್ಲಿ ಪಾಲಕರ ಪರವಾಗಿ ಚಿದಾನಂದಪ್ಪ ಮಾರಾ ಶಿವಲೀಲಾ ಹರಗಬಲ್ಲ ಮಾತಾಡಿದರು ಶಿಕ್ಷಕರಾದ ಶ್ರೀಮತಿ ಮಾಂತಮ್ಮ ಲೂತಿಮಠ ಶ್ರೀ ಮತಿ ಅಳ್ಳಿಚಂಡಿ ಶ್ರೀ ಶಿವನಗುತ್ತಿ ಹಾಗೂ ಪಾಲಕರು ಪಾಲ್ಗೊಂಡಿದ್ದರು ಶಿಕ್ಷಕ ಚಂದ್ರು ಮೀನಜಗಿ ಕಾರ್ಯಕ್ರಮ ನಿರೂಪಿಸಿ ವಂದಿಸಿದರು