ಹೊಸದಿಲ್ಲಿ: 2024 ರ ಪಾರಿಸ್ ಒಲಿಂಪಿಕ್ ಕ್ರೀಡಾಕೂಟದಲ್ಲಿ ಯಾವ ದೇಶ ಎಷ್ಟು ಪದಕ ಪಡೆದಿದೆ. ಯಾವ ದೇಶ ಪದಕ ಪಟ್ಟಿಯಲ್ಲಿ ಮುಂದಿದೆ. ಪದಕ ಪಟ್ಟಿಯಲ್ಲಿ ‘ಾರತಕ್ಕೆ ಸಿಕ್ಕ ಸ್ಥಾನ ಎಷ್ಟು ಎಂಬುದರ ಸಂಪೂರ್ಣ ಮಾಹಿತಿ ನಿಮ್ಮ ಸುದ್ದಿಯಲ್ಲಿ ಸಿಗುತ್ತೆ ಪೂರ್ಣ ಓದಿ.
ಜುಲೈ 26ರಿಂದ ಪ್ಯಾರಿಸ್‌ನಲ್ಲಿ ಆರಂ‘ವಾಗಿರುವ ಒಲಿಂಪಿಕ್ ಕ್ರೀಡಾಕೂಟ ಆ.11ರ ವರೆಗೆ ನಡೆಯಲಿದೆ. ‘ಾರತ ಪದಕ ಪಟ್ಟಿಯಲ್ಲಿ ಎಷ್ಟನೇ ಸ್ಥಾನ ಇದೆ ಎಂಬುದನ್ನು ನೋಡುವುದಕ್ಕಿಂತ ಮುಂಚೆ ಮೊದಲ ಹತ್ತು ಸ್ಥಾನದಲ್ಲಿ ಯಾವ ಯಾವ ದೇಶಗಳಿವೆ ಎಂಬುದನ್ನು ತಿಳಿಯೋಣ.
ಈಗಾಗಲೇ ಸಾಕಷ್ಟು ಸ್ಪರ್‘ೆಗಳು ಮುಗಿದಿದ್ದುಘಿ, ಅದರಲ್ಲಿ ಚೀನಾ ಪದಕ ಪಟ್ಟಿಯಲ್ಲಿ ಮೊದಲ ಸ್ಥಾನ ಗಿಟ್ಟಿಸಿಕೊಂಡಿದೆ. ಚೀನಾ 16 ಚಿನ್ನಘಿ, 12 ಬೆಳ್ಳಿಘಿ, 9 ಕಂಚಿನೊಂದಿಗೆ 37 ಪದಕ ಪಡೆದು ಮೊದಲ ಸ್ಥಾನದಲ್ಲಿ ಮುಂದೆ ಸಾಗುತ್ತಿದೆ. ಇನ್ನೂ ಎರಡನೇ ಸ್ಥಾನದಲ್ಲಿ ಅಮೇರಿಕಾ ಸಂಯುಕ್ತ ಸಂಸ್ಥಾನ ಇದ್ದುಘಿ, 14 ಚಿನ್ನಘಿ, 24 ಬೆಳ್ಳಿಘಿ, 23 ಕಂಚಿನೊಂದಿಗೆ 61 ಪದಕ ಪಡೆದಿದೆ. ಚೀನಾಗಿಂತ ಹೆಚ್ಚು ಪದಕ ಪಡೆದಿದ್ದರೂ ಸಹ ಚಿನ್ನದಲ್ಲಿ ಎರಡು ಸ್ಥಾನ ಹಿಂದಿರುವುದರಿಂದ ಎರಡನೇ ಸ್ಥಾನದಲ್ಲಿ ಮುಂದುವರಿಯಬೇಕಾಗಿದೆ.
ಪ್ರಾನ್ಸ್ 12 ಚಿನ್ನಘಿ, 14 ಬೆಳ್ಳಿ, 16 ಕಂಚಿನೊಂದಿಗೆ ಒಟ್ಟು 42 ಪದಕಗಳನ್ನು ಪಡೆದು ಮೂರನೇ ಸ್ಥಾನ ತನ್ನದಾಗಿಸಿಕೊಂಡು ಮುನ್ನುಗ್ಗುತ್ತಿದೆ. ಇನ್ನೂ ಆಸ್ಟೇಲಿಯಾ 10 ಚಿನ್ನಘಿ, 8 ಬೆಳ್ಳಿಘಿ, 7 ಕಂಚಿನೊಂದಿಗೆ 27 ಪದಕದೊಂದಿಗೆ ನಾಲ್ಕನೇ ಸ್ಥಾನದಲ್ಲಿದ್ದರೆ, ಗ್ರೇಟ್ ಬ್ರಿಟನ್ 10 ಚಿನ್ನ, 10 ಬೆಳ್ಳಿಘಿ, 14 ಕಂಚಿನೊಂದಿಗೆ 34 ಪದಕ ಪಡೆದು ಐದನೇ ಸ್ಥಾನ ಪಡೆದುಕೊಂಡಿದೆ.
ದಕ್ಷಿಣ ಕೋರಿಯಾ, ಜಪಾನ, ಇಟಲಿ, ನೆದರ್‌ಲ್ಯಾಂಡ್, ಜರ್ಮನಿ ಕ್ರಮವಾಗಿ ಆರರಿಂದ 10ನೇ ಸ್ಥಾನದಲ್ಲಿ ಮುಂದುವರಿದಿವೆ.
ಇನ್ನೂ ‘ಾರತ ಮೂರು ಕಂಚಿನ ಪದಕಗಳನ್ನು ಪಡೆದು 54ನೇ ಸ್ಥಾನದಲ್ಲಿದ್ದುಘಿ, ಇನ್ನೂ ಆ.11ರವರೆಗೆ ಸ್ಪರ್‘ೆಗಳಿರುವುದರಿಂದ ಇನ್ನಷ್ಟು ಪದಕಗಳು ‘ಾರತಕ್ಕೆ ಬರಬಹುದು ಎಂಬ ನಿರೀಕ್ಷೆಯಲ್ಲಿ ಕ್ರೀಡಾಭಿಮಾನಿಗಳು ಇದ್ದಾರೆ.