ಸಮಗ್ರ ವಿಕಾಸಕ್ಕೆ ಕ್ರೀಡಾ ಚಟುವಟಿಕೆಯಲ್ಲಿ ಪಾಲ್ಗೊಳ್ಳಿ:ಮಹಾಂತೇಶ್ ಶೆಟ್ಟರ್
ಬಾಗಲಕೋಟೆ
ವಿದ್ಯಾರ್ಥಿಗಳು ಸಮಗ್ರವಾಗಿ ವಿಕಸನಗೊಂಡು, ಬಾಳಿನ ಉಜ್ವಲತೆ ಕಂಡು ಕೊಳ್ಳಲು ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದನ್ನು ರೂಡಿಸಿಕೊಳ್ಳಬೇಕೆಂದು ಬಸವೇಶ್ವರ ವಿದ್ಯಾವರ್ಧಕ ಸಂಘದ ಪ್ರೌಢ ಶಾಲಾ ವಿಭಾಗದ ಕಾರ್ಯಧ್ಯಕ್ಷ ಮಹಾಂತೇಶ್ ಶೆಟ್ಟರ್ ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ನವನಗರದ ಅಂಗಡಿ ಕ್ರಿಕೆಟ್ ಅಕಾಡೆಮಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಕ್ರಿಕೆಟ್ ಕ್ವಿಜ್ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ವಿವಿಧ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳುವುದರಿಂದ ವ್ಯಕ್ತಿತ್ವ ವಿಕಾಸನ ಗೊಳ್ಳುವುದರ ಜೊತೆಗೆ ಇಂತಹ ಕಾರ್ಯಕ್ರಮಗಳು ನಿಮ್ಮ ಸ್ಪರ್ಧಾ ಮನೋಭಾವವನ್ನು ಮತ್ತಷ್ಟು ಪ್ರಬಲ ಗೊಳ್ಳುತ್ತದೆ ಎಂದವರು ಅಭಿಪ್ರಾಯ ಪಟ್ಟರು.
ಅಕಾಡೆಮಿ ಆಯೋಜಿಸಿದ್ದ ಜಿಲ್ಲಾಮಟ್ಟದ ಮೊದಲ ಕ್ರಿಕೆಟ್ ಕ್ವಿಜ್ ಮುಖ್ಯ ಅತಿಥಿಯಾಗಿ ಆಗಮಿಸಿದ್ದ ಮಾಜಿ ಕ್ರಿಕೆಟರ್ ಹಾಗೂ ಖ್ಯಾತ ಕ್ರೀಡಾ ವಿಶ್ಲೇಷಕ ಹಾಗೂ ಕನ್ನಡದ ಖ್ಯಾತ ಕ್ರೀಡಾ ಕಾಮೆಂಟೇಟರ್ ಚಂದ್ರಮೌಳಿ ಕಣವಿ ಮಾತನಾಡಿ, ಜಿಲ್ಲಾ ಮಟ್ಟದಲ್ಲಿ ಇಂತಹ ಉತ್ತಮ ಕಾರ್ಯಕ್ರಮ ಆಯೋಜಿಸುವುದರ ಜೊತೆಗೆ ವಿದ್ಯಾರ್ಥಿಗಳಲ್ಲಿರುವ ಸುಪ್ತ ಪ್ರತಿಭೆಯನ್ನು ಅನಾವರಣ ಗೊಳಿಸಿ. ಅವರಲ್ಲಿ ಸ್ಫೂರ್ತಿ ತುಂಬುವ ಕಾರ್ಯ ಮಾಡುತ್ತಿರುವುದು ಹೆಮ್ಮೆಯ ಸಂಗತಿ ಎಂದು ಶ್ಲಾಘನೇ ವ್ಯಕ್ತ ಪಡಿಸಿದರು..
ಜೊತೆಗೆ ಕಾರ್ಯಕ್ರಮ ಮಧ್ಯೆ ಸ್ಪರ್ಧಾಳುಗಳಿಗೆ ಖುದ್ದು ತಾವೇ ಪ್ರಶ್ನೆ ಕೇಳುವ ಮೂಲಕ ಸರಳತೆ ಮೆರೆದು ನೆರೆದಿದ್ದ ಪ್ರೇಕ್ಷಕರು ಕಣವಿಯವರ ಸರಳತೆ ಕಂಡು ಸೋಜಿಗಗೊಂಡರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿಲ್ಲೆಯ ಹಿರಿಯ ಸೈಕಲಿಂಗ್ ತರಬೇತುದಾರರು ಹಾಗೂ ಮಾಜಿ ರಾಷ್ಟ್ರೀಯ ಚಾಂಪಿಯನ್ ಅನಿತಾ ನಿಂಬರಗಿ ಮಾತನಾಡಿ, ಇತ್ತೀಚಿನ ದಿನಗಳಲ್ಲಿ ಕ್ರೀಡಾಪಟುಗಳಿಗೆ ಕ್ರೀಡೆಯ ಜೊತೆಗೆ ಇಂತಹ ಕಾರ್ಯಕ್ರಮಗಳು ಅವರನ್ನು ಮತ್ತಷ್ಟು ಗಟ್ಟಿಗೊಳಿಸುತ್ತವೆ..
ಈ ರೀತಿಯ ಕಾರ್ಯಕ್ರಮಗಳ ಅವಶ್ಯಕತೆ ಮತ್ತು ಅನಿವಾರ್ಯತೆ ಹೆಚ್ಚಿದ್ದು, ನಮ್ಮ ಸಂಸ್ಥೆ ಸಹ ಇದಕ್ಕೆ ಉತ್ತೇಜನ ನೀಡುತ್ತಿದ್ದೂ, ಮುಂಬರುವ ದಿನಗಳಲ್ಲಿ ಮತ್ತಷ್ಟು ಸ್ಫೂರ್ತಿಯೊಂದಿಗೆ ಕಾರ್ಯ ನಿರ್ವಹಿಸುತ್ತದೆ ಎಂದು ತಿಳಿಸಿದರು..
ಕಾರ್ಯಕ್ರಮದಲ್ಲಿ ಸಿಟಿ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಆರ್. ಮಧುಕುಮಾರ್, ಗುತ್ತಿಗೆದಾರ ರಾಘವೇಂದ್ರ ಚೀಡಳ್ಳಿ, ಜೇಜೆ ಎಂಟರ್ಪ್ರೈಸಸ್ನ ಜಗದೀಶ್ ಕಟ್ಟಿಮನಿ, ಇಂಜಿನಿಯರ್ ಮಲ್ಲಿಕಾರ್ಜುನ ಪಾಲ್ಗೊಂಡಿದ್ದರು. ಅಕಾಡೆಮಿಯ ಸಂಸ್ಥಾಪಕ ಹಾಗೂ ಕ್ರಿಕೆಟ್ ತರಬೇತುದಾರ ಉದಯ್ ಅಂಗಡಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಬೀಳಗಿಯ ಪರಶುರಾಮ ಮತ್ತು ಸಂತೋಷ್ ಮೊದಲ ಪ್ರಶಸ್ತಿಯ ಆಕರ್ಷಕ ಟ್ರೋಫಿ ಯೊಂದಿಗೆ 10 ಸಾವಿರ ನಗದು ಬಹುಮಾನ ಪಡೆದರು. ರಬಕವಿ-ಬನಹಟ್ಟಿಯ ವಿಶಾಲ ಧಪಾಲಾಪುರ ಮತ್ತು ಸಂತೋಷ್ ಶೇಗುನಸಿ ದ್ವಿತೀಯ ಪ್ರಶಸ್ತಿಯೊಂದಿಗೆ ಟ್ರೋಫಿ ಹಾಗೂ 5 ಸಾವಿರ ಹಾಗೂ ಬಾಗಲಕೋಟೆಯ ನಮನ್ 3ನೇ ಪ್ರಶಸ್ತಿಯೊಂದಿಗೆ ಟ್ರೋಫಿ ಹಾಗೂ 3 ಸಾವಿರ ನಗದು ಬಹುಮಾನ ಪಡೆದರು. ವಕೀಲ ಸಿದ್ದು ಸಜ್ಜನ ಹಾಗೂ ಶಿಕ್ಷಕ ಶಶಿ ಹೂಗಾರ್ ತೀರ್ಪುಗರರಾಗಿ ಆಗಮಿಸಿದ್ದರು…
ಮಂಜುನಾಥ್ ಬಂಡಿ ಕಾರ್ಯಕ್ರಮ ನಿರೂಪಿಸಿ, ಅಚ್ಚುಕಟ್ಟಾಗಿ ಕ್ವಿಜ್ ಪ್ರಶ್ನೆವಳಿ ಕಾರ್ಯಕ್ರಮ ನಡೆಸಿಕೊಟ್ಟರು. ಶ್ರೀಮತಿ ಸುನೀತಾ ಅಂಗಡಿ ಸ್ವಾಗತಿಸಿದರು.