ಹುನಗುಂದ
ಧರ್ಮ ಮಾನವನ ಅವಿಭಾಜ್ಯ ಅಂಗ. ಧರ್ಮ ಎಂದರೆ ಬದುಕಿನ ರೀತಿ, ಮಾನವ ಕುಲ ಸುಖದಿಂದ ಇರಬೇಕಾದರೆ ಧರ್ಮ ಬೇಕೇ ಬೇಕು. ಧರ್ಮದಿಂದ ಮಾತ್ರ ಜಗತ್ತಿಗೆ ಶಾಂತಿ ಲಭಿಸುತ್ತದೆ ಎಂದು ಗುಳೇದಗುಡ್ಡದ ಒಪ್ಪತ್ತೇಶ್ವರ ಸ್ವಾಮೀಜಿ ಹೇಳಿದರು.
ಬೇವಿನಮಟ್ಟಿಯಿಂದ ಕೂಡಲಸಂಗಮದವರೆಗೆ ಹಮ್ಮಿಕೊಂಡ ಸದ್ಭಾವನಾ ಪಾದಯಾತ್ರೆ ತಿಮ್ಮಾಪೂರ ಗ್ರಾಮಕ್ಕೆ ಆಗಮಿಸಿದಾಗ ಹಮ್ಮಿಕೊಂಡ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ತಿಮ್ಮಾಪೂರಿನ ಜನ ಭಕ್ತಿವಂತರು, ಆಧ್ಯಾತ್ಮಿಕತೆಯನ್ನು ಬದುಕಿನಲ್ಲಿ ರೂಢಿಸಿಕೊಡು ಬಂದಿದ್ದಾರೆ ಎಂದು ವಿವರಿಸಿದರು.
ಅಮೀನಗಡದ ಶಂಕರರಾಜೇಂದ್ರ ಸ್ವಾಮೀಜಿ, ಭಕ್ತಿಯಲ್ಲಿ ಶಕ್ತಿ ಇದೆ. ಮಾನವ ಮಹಾಮಾನವನಾಗಲು, ಮನು?À್ಯನ ಮನಸ್ಸು ಶುದ್ಧಿಗೊಳ್ಳಲು ಆಧ್ಯಾತ್ಮಿಕ ಜೀವನ ಅವಶ್ಯವಾಗಿದೆ ಎಂದರು.
ನಿವೃತ್ತ ಶಿಕ್ಷಕ, ಸಾಹಿತಿ ಎಸ್.ಎಸ್.ಹಳ್ಳೂರ, ಆಧ್ಯಾತ್ಮ ಸಮಾಜದ ತಾಯಿ ಇದ್ದಂತೆ. ತಾಯಿ ತನ್ನ ಮಗು ಸರ್ವಶ್ರೇಷ್ಠ ವ್ಯಕ್ತಿಯಾಗಬೇಕೆಂದು ಬಯಸಿದಂತೆ ಆಧ್ಯಾತ್ಮವು ಈ ಸಮಾಜ ಸರ್ವಶ್ರೇಷ್ಟ ಸಮಾಜ ಆಗಬೇಕೆಂದು ಬಯಸುತ್ತದೆ ಎಂದರು.
ನಿವೃತ್ತ ಶಿಕ್ಷಕ ಬಸಯ್ಯ ಹಿರೇಮಠ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ಶಿವಪ್ರಸಾದ ಗದ್ದಿ, ಹಿರೇಮಠದ ಶಿವಸಂಗಮೇಶ್ವರ ದೇವರು, ಹುನಗುಂದದ ಗಚ್ಚಿನಮಠದ ಅಮರೇಶ್ವರ ದೇವರು, ಜಿಗೇರಿ ಹಿರೇಮಠದ ಗುರುಸಿದ್ಧ ಶಿವಾಚಾರ್ಯರು, ಪುರಗಿರಿಯ ಕೈಲಾಸಲಿಂಗ ಶಿವಾಚಾರ್ಯರು, ವೀರಯ್ಯ ಸರಗಣಚಾರಿ ಇತರರಿದ್ದರು.
ಭೀಮಪ್ಪ ಮಡಿವಾಳರ, ಕಾಂತೇಶ ದಾಸರ, ಹನುಮಂತ ತಳವಾರ, ಸಂತೋಷ ವಾಲಿಕಾರ, ಸಂಗನಗೌಡ ಹಾದಿಮನಿ, ಸವಿತಾ ಕೋಣೆ, ಗುರು ಕರ್ನಾಟಕ ಪತ್ರಿಕೆ ತಾಲೂಕು ವರದಿಗಾರ ಗುರುಬಸಯ್ಯ ಹಿರೇಮಠ, ಸಿದ್ದಮ್ಮ ಚಲವಾದಿ, ರಸಪ್ರಶ್ನೆ ಸ್ಪರ್ಧೆಯಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆಯಾದ ಶಿಕ್ಷಕಿ ಗೀತಾ ತಾರಿವಾಳ, ಶಾರದಾ ಹೂಲಗೇರಿ ಅವರನ್ನು ಸನ್ಮಾನಿಸಲಾಯಿತು.