ಬಾಗಲಕೋಟೆ
ಜಿಲ್ಲೆಯ ಹಲವು ಭಾಗದಲ್ಲಿ ಭಾನುವಾರ ರಾತ್ರಿ ಸುರಿದ ಮಳೆ ಅವಾಂತರ ಸೃಷ್ಟಿಸಿದೆ.
ಸಂಜೆ ೭.೩೦ ರ ಸುಮಾರಿಗೆ ಆರಂಭವಾದ ಮಳೆ ರಾತ್ರಿಯೂ ಮುಂದುವರೆದಿತ್ತು.
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಸತತ ಮೂರು ಗಂಟೆಗಳ ಕಾಲ ಸುರಿದ ಮಳೆಗೆ ಜನ ಹೈರಾಣದರು.
ಕೆಲ ತಗ್ಗು ಪ್ರದೇಶಗಳಿಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಬಂದ ಕಾರಣ ಮಳೆ ನೀರು ಮನೆ ಹೊಕ್ಕು ರಾತ್ರಿಯಿಡಿ ಪರದಾಡುವಂತೆ ಆಯಿತು.
ಮಳೆಯ ರಭಸಕ್ಕೆ ರಸ್ತೆ ಮಾಯವಾದಂತೆ ಕಂಡು ಬೆಂಗಳೂರಿನತ್ತ ಮುಖ ಮಾಡಿದ ಸರಕಾರಿ ಬಸ್ ಸೇರಿದಂತೆ ಖಾಸಗಿ ಬಸ್ಸುಗಳು ಪ್ರಯಾಣ ಮುಂದುವರಿಸದೆ ಕೆಲ ಹೊತ್ತು ರಸ್ತೆ ಪಕ್ಕದಲ್ಲಿ ವಿಶ್ರಾಂತಿ ಪಡೆದವು.
ಗುಡ್ಡದ ಪ್ರದೇಶದಿಂದ ಹರಿದು ಬರುವ ನೀರಿಗೆ ಸರಿಯಾದ ದಾರಿ ಇಲ್ಲದೆ ಅಲ್ಲಲ್ಲಿ ರಸ್ತೆಗಳ ಮೇಲೆ ಕಲ್ಲು ಮಣ್ಣುಗಳು ತುಂಬಿ ಹೋಗಿತ್ತು. ಬೆಳಗಿನ ಜಾವದವರೆಗೂ ಜಿಟಿ ಜಿಟಿ ಮಳೆ ಸುರಿಯುತ್ತಿತ್ತು.