ಬೆಂಗಳೂರು: ವಿಧಾನಮಂಡಲದ ಬಜೆಟ್ ಅಧಿವೇಶನದಲ್ಲಿ ಮಾತಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ ರಾಜ್ಯದಲ್ಲಿ ಆಪರೇಶನ್ ಕಮಲ ಆರಂಭಿಸಿದ್ದೇ ಬಿಎಸ್ ಯಡಿಯೂರಪ್ಪನವರು ಎಂದು ತಿಳಿಸಿದರು.
ರಾಜ್ಯದ ಜನತೆ ಯಾವತ್ತೂ ಬಿಜೆಪಿಯನ್ನು ಆಶೀರ್ವದಿಸಿ ಅಧಿಕಾರಕ್ಕೆ ತಂದಿಲ್ಲ, 2008 ರಲ್ಲಿ ಅವರಿಗೆ ದಕ್ಕಿದ್ದು 110 ಸ್ಥಾನ ಮಾತ್ರ. ಆಗಲೇ ಯಡಿಯೂರಪ್ಪ ಆಪರೇಶನ್ ಕಮಲ ನಡೆಸಿ ಅಧಿಕಾರಕ್ಕೆ ಬಂದರು ಎಂದು ವಿವರಿಸಿದರು.
ನಂತರ 2018ರಲ್ಲಿ ಬಿಜೆಪಿ ಸಿಕ್ಕಿದ್ದು 100 ಸೀಟು ಮಾತ್ರ. ಆದರೆ ಅಧಿಕಾರದಲ್ಲಿದ್ದ ಸಮ್ಮಿಶ್ರ ಸರ್ಕಾರದ 17 ಶಾಸಕರನ್ನು ಖರೀದಿಸಿ ಇವರು ಅಧಿಕಾರಕ್ಕೆ ಬಂದರು ಎಂದರು.
ಇಲ್ಲಿಯವರೆಗೂ ಬಿಜೆಪಿ ಹಿಂಬಾಗಿಲಿನಿಂದ ಅಧಿಕಾರಕ್ಕೆ ಬಂದಿದೆಯೇ ಹೊರತು ಜನಾರ್ಶೀವಾದದೊಂದಿಗೆ ಮುಂಬಾಗಿಲಿಂದ ಬಂದು ಅಧಿಕಾರ ನಡೆಸಿಲ್ಲ ಎಂದು ಸೂಚಿಸಿದರು.