ಬೆಂಗಳೂರು
ಮಹತ್ವದ ಬೆಳವಣಿಗೆಯೊಂದರಲ್ಲಿ ಸಿಎಂ ಸಿದ್ದರಾಮಯ್ಯ ವಿರುದ್ಧ ಪ್ರಾಸಿಕ್ಯೂಶನ್ ನಡೆಸಲು ರಾಜ್ಯಪಾಲರು ಅನುಮತಿ ನೀಡಿದ್ದಾರೆ.
ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ನಡೆದಿದೆ ಎನ್ನಲಾದ ಭೂ ವ್ಯವಹಾರಕ್ಕೆ ಸಂಭಂದಿಸಿದಂತೆ ಅವರ ವಿರುದ್ಧ ವಿಚಾರಣೆ ನಡೆಸುವ ಕುರಿತು ಸಾಮಾಜಿಕ ಹೋರಾಟಗಾರ ಟಿ.ಜೆ.ಅಬ್ರಹಾಂ ಸೇರಿದಂತೆ ಮೂವರು ಹೋರಾಟಗಾರರು ರಾಜ್ಯಪಾಲರಲ್ಲಿ ಅನುಮತಿ ಕೇಳಿದ್ದರು.
ಇದೀಗ ರಾಜಭವನದಿಂದ ಸರಕಾರದ ಮುಖ್ಯ ಕಾರ್ಯದರ್ಶಿ ಕಚೇರಿಗೆ ನೋಟೀಫಿಕೇಶನ್ ಬಂದಿದೆ. ಕಾನೂನು ತಜ್ಞರೊಂದಿಗೆ ಪರಿಶೀಲನೆ ನಡೆಸಿ ಮುಂದಿನ ಕ್ರಮಕ್ಕೆ ರಾಜ್ಯಪಾಲರು ಮುಂದಾಗಿದ್ದಾರೆ ಎನ್ನಲಾಗಿದೆ.
ಮೂವರು ದೂರುದಾರರಿಗೆ ರಾಜ್ಯಪಾಲರ ಕಚೇರಿಯಿಂದ ಇಂದು ಮಧ್ಯಾಹ್ನ ಭೇಟಿ ಆಗುವಂತೆ ಬುಲಾವ್ ಬಂದಿದೆ. ಮತ್ತಷ್ಟು ದಾಖಲೆಗಳನ್ನು ಅವರಿಂದ ಸಂಗ್ರಹಿಸುವ ಮಾಹಿತಿ ಇದೆ.
ರಾಜ್ಯ ಸರಕಾರ ಈಗಾಗಲೇ ತಿಳಿಸಿದಂತೆ ಮುಂದಿನ ಹಂತದಲ್ಲಿ ಕಾನೂನು ಹೋರಾಟ ನಡೆಸಲಿದೆ. ಈ ಕುರಿತಂತೆ ಕಾಂಗ್ರೆಸ್ ಹೈ ಕಮಾಂಡ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.