ನಿಮ್ಮ ಸುದ್ದಿ ಬಾಗಲಕೋಟೆ
ಕೊರೋನಾ ತಡೆ ಹಿನ್ನೆಲೆಯಲ್ಲಿ ರಾಜ್ಯ ಸರಕಾರ ಜಾರಿಗೊಳಿಸಿದ ನೈಟ್ ಕರ್ಫ್ಯೂ ಜಾರಿಗೊಳಿಸುವಲ್ಲಿ ಅಮೀನಗಡ ಪೊಲೀಸರು ಕಾರ್ಯಾಚರಣೆಗಿಳಿದರು.
ಸ್ಥಳೀಯ ಠಾಣೆ ಸಬ್ ಇನ್ಸ್ಪೆಕ್ಟರ್ ಎಂ.ಜಿ.ಕುಲಕರ್ಣಿ ಸ್ವತ: ರಸ್ತೆಗಿಳಿದು ಕೊರೊನಾ ತಡೆ ನಿಯಮ ಪಾಲನೆಗೆ ಮುಂದಾದರು. ಬುಧವಾರ ಮಧ್ಯಾಹ್ನವೇ ಪಟ್ಟಣದ ವ್ಯಾಪಾರಿಗಳ, ಹೊಟೇಲ್ ಮಾಲಿಕರ, ವರ್ತಕರು ಸೇರಿದಂತೆ ಅವಶ್ಯಕ ವಸ್ತುಗಳ ವ್ಯಾಪಾರಸ್ಥರ ಸಭೆ ಕರೆದಿದ್ದರು.
ಕೊರೊನಾ ತಡೆಗೆ ಎಲ್ಲರ ಸಹಕಾರ ಅತ್ಯಗತ್ಯ. ಸರಕಾರ ನಿಯಮ ಮಾಡಿದರೂ ಪಾಲನೆ ಎಲ್ಲರ ಕರ್ತವ್ಯ. ನಿಷ್ಕಾಳಜಿ ವಹಿಸದೆ ಕೊರೊನಾ ಬಾರದಂತೆ ಎಚ್ಚರ ವಹಿಸೋಣ ಎಂದು ತಿಳಿಸಿದ್ದರು.
ಸಂಜೆ ೮ರ ನಂತರ ರಸ್ತೆಗಿಳಿದ ಅವರು ಅಂಗಡಿ ಮುಗ್ಗಂಟು ಬಂದ್ ಮಾಡುವಂತೆ ಸೂಚಿಸಿದರು. ಪಟ್ಟಣದ ಬಹುತೇಕರು ಸ್ವಯಂ ಪ್ರೇರಿತರಾಗಿ ಬಂದ್ ಮಾಡಿದರೆ ಇನ್ನೂ ಕೆಲವರು ತಮ್ಮ ಮೊದಲಿನ ಮೊಂಡುತನವನ್ನೇ ಮುಂದುವರೆಸಿದ್ದರು.
ಪಟ್ಟಣದಲ್ಲಿ ಕೆಲ ಅಂಗಡಿಗಳು ಪೊಲೀಸರು ಬಂದ ಮೇಲೆಯೇ ಬಂದ್ ಮಾಡುವಂತೆ ಕಂಡು ಬಂದಿತು. ಕೆಲವರು ಅಂಗಡಿ ಶಟರ್ ಎಳೆದು ಒಳಗೆ ಕುಳಿತುಕೊಂಡಿದ್ದರು. ಅಂತಹ ಅಂಗಡಿಗಳಿಗೆ ಪೊಲೀಸರು ಎಚ್ಚರಿಕೆ ನೀಡಿದರು.