ಜಿಲ್ಲೆಯಲ್ಲಿ ಬಿಜೆಪಿ ಗಲುವು ನಿಶ್ಚಿತ,ಮೋದಿ ಪ್ರಧಾನಿಯಾಗುವುದು ಖಚಿತ: ಗದ್ದಿಗೌಡರ
ಬಾಗಲಕೋಟೆ: ಜಿಲ್ಲೆಯಲ್ಲಿ ಬಿಜೆಪಿ ಗೆಲುವು ನಿಶ್ಚಿತವಾಗಿದ್ದು ದೇಶದಲ್ಲಿ ನರೇಂದ್ರ ಮೋದಿ ಮತ್ತೆ ಪ್ರಧಾನಿಯಾಗುವುದು ಖಚಿತ ಎಂದು ಲೋಕಸಭಾ ಬಿಜೆಪಿ ಅಭ್ಯರ್ಥಿ ಹಾಗೂ ಸಂಸದರಾದ ಪಿ.ಸಿ.ಗದ್ದಿಗೌಡರ ಹೇಳಿದರು
ಅವರು ಶುಕ್ರವಾರ ಭಾರತೀಯ ಜನತಾ ಪಾರ್ಟಿ ಬಾಗಲಕೋಟೆ ಮತಕ್ಷೇತ್ರದಿಂದ ಹಮ್ಮಿಕೊಂಡ ಪಾದಯಾತ್ರೆ ಮೂಲಕ ಮನೆ ಮನೆಯ ಪ್ರಚಾರದಲ್ಲಿ ಭಾಗವಹಸಿ ಮತಯಾಚನೆ ಮಾಡಿ ಮಾತನಾಡಿದರು,
ಬಾಗಲಕೋಟೆ ನಗರ ಹಾಗೂ ಗ್ರಾಮೀಣ ಭಾಗದಲ್ಲಿ ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಅವರ ನೇತೃತ್ವದಲ್ಲಿ ಚುನಾವಣಾ ಪ್ರಚಾರ ಪಾದಯಾತ್ರೆ ನಡೆದಿದ್ದು ಪಾದಯಾತ್ರೆಯಲ್ಲಿ ಪಾಲ್ಗೊಂಡು ಮನೆ ಮನೆ ತೆರಳಿ ಮತಯಾಚನೆ ಮಾಡಿದ್ದು ಜನರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಜಿಲ್ಲೆಯ ವಿವಿಧ ಕ್ಷೇತ್ರದಲ್ಲಿ ಪ್ರಚಾರ ಕಾರ್ಯ ನಡೆದಿದ್ದು, ಹಿರಿಯ ಕಿರಿಯ ಕಾರ್ಯಕರ್ತರು ಎಲ್ಲರೂ ಉತ್ಸಾಹದಿಂದ ಪ್ರಚಾರದಲ್ಲಿ ಭಾಗವಹಿಸುತ್ತಿದ್ದಾರೆ, ಎಲ್ಲಡೆ ದೇಶದ ಭದ್ರತೆ,ದೇಶದ ಅಭಿವೃದ್ದಿಗಾಗಿ ಮತ್ತೆ ಮೋದಿ ಪ್ರಧಾನಿಯಾಗಬೇಕು ಎಂಬ ಕೂಗು ಜನರಿಂದ ಕೇಳಿಬರುತ್ತಿದೆ, ಬಾಗಲಕೋಟೆ ಬಿಜೆಪಿ ಭದ್ರಕೋಟೆಯಾಗಿದ್ದು ಬಿಜೆಪಿ ಇಲ್ಲಿ ಗಟ್ಟಿಯಾಗಿದೆ ಜಿಲ್ಲೆಯ ಬಿಜೆಪಿ ಅಭ್ಯರ್ಥಿಯನ್ನು ಗೆಲ್ಲಿಸಿ ದೇಶದಲ್ಲಿ ನರೇಂದ್ರ ಮೋದಿಯವರನ್ನು ಪ್ರಧಾನಿಯನ್ನಾಗಿಸುತ್ತಾರೆ ಎಂಬ ವಿಶ್ವಾಸವಿದೆ ಎಂದರು.
ಮಾಜಿ ಶಾಸಕ ಡಾ.ವೀರಣ್ಣ ಚರಂತಿಮಠ ಮಾತನಾಡಿ ಇಂದು ಮೋಟಗಿ ಬಸವೇಶ್ವರ ದೇವಸ್ಥಾನದಿಂದ ನಗರ ಹಾಗೂ ವಿದ್ಯಾಗಿರಿಯ 23 ವಾರ್ಡಗಳ ಮನೆ ಮನೆ ಪ್ರಚಾರ ಪ್ರಾರಂಭವಾಗಿದ್ದು, ನವನಗರದ ವಾರ್ಡುಗಳ ಪ್ರಚಾರ ಆಯಾ ವಾರ್ಡುಗಳ ನಗರಸಭೆ ಸದಸ್ಯರು ಮಾಡುತ್ತಾರೆ, ಅಲ್ಲಿ ಭೂತಮಟ್ಟದ ಸಭೆಗಳನ್ನು ಮಾಡಲಿದ್ದು, ಒಟ್ಟು 109 ಬೂತಗಳು ಬಾಗಲಕೋಟೆಯಲ್ಲಿರುವುದರಿಂದ ಎಲ್ಲ ಬೂತಗಳಲ್ಲಿ ಸಭೆಗಳನ್ನು ಮಾಡಲಾಗುತ್ತಿದೆ, ಇನ್ನು ಗ್ರಾಮೀಣ ಭಾಗದಲ್ಲಿ ಒಟ್ಟು 80 ಹಳ್ಳಿಗಳಲ್ಲಿ ಪ್ರತಿದಿನ ಸಾಯಂಕಾಲ ಪ್ರಚಾರವನ್ನು ಹಮ್ಮಿಕೊಂಡಿದ್ದು, ಹೆಚ್ಚಿನ ಅಂತರದ ಮತಗಳಿಂದ ಬಿಜೆಪಿ ಅಭ್ಯರ್ಥಿ ಪಿ.ಸಿ.ಗದ್ದಿಗೌಡರನ್ನು ಗೆಲ್ಲಿಸೋಣ, ದೇಶದ ಸರ್ವಾಂಗೀಣ ಅಭಿವೃದ್ಧಿಯೋಂದಿಗೆ 2047 ಕ್ಕೆ ಭಾರತ ವಿಶ್ವಗುರುವಾಗಲಿದೆ, ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ. ಮೋದಿಯವರನ್ನ ಮತ್ತೊಮ್ಮೆ ಪ್ರಧಾನಿಯನ್ನಾಗಿಮಾಡುವ ಅಚಲ ಗುರಿ ನಮ್ಮದಾಗಿದೆ ಎಂದರು.
ನಗರದ ಶ್ರೀ ಮೋಟಗಿ ಬಸವವೇಶ್ವರ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ನಗರದ 5 ಮತ್ತು 9 ನೇ ವಾರ್ಡಗಳಲ್ಲಿ ಪಾದಯಾತ್ರೆ ಮೂಲಕ ಮನೆ ಮನೆಗೆ ತೆರಳಿ ಬಿಜೆಪಿ ಅಭ್ಯರ್ಥಿ ಪರ ಮತಯಾಚನೆ ಮಾಡಿದರು.
ಪಾದಯಾತ್ರೆಯಲ್ಲಿ ಬಾಗಲಕೊಟೆ ಲೋಕಸಭಾ ಮತಕ್ಷೇತ್ರ ಉಸ್ತುವಾರಿ ಲಿಂಗರಾಜ ಪಾಟೀಲ, ಹಿರಿಯರಾದ ಜಿ.ಎನ್.ಪಾಟೀಲ, ಬೆಳಗಾವಿ ಪ್ರಭಾರಿ ಬಸವರಾಜ ಯಂಕಂಚಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಲಕ್ಷ್ಮೀ ನಾರಾಯಣ ಕಾಸಟ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ರಾಜು ನಾಯ್ಕರ, ಅಶೋಕ ಲಿಂಬಾವಳಿ, ಜಯಂತ ಕುರಂದವಾಡ, ಗುರುಬಸವ ಸೂಳಿಬಾವಿ, ಕೇಶವ ಭಜಂತ್ರಿ, ಶರಣಪ್ಪ ಗುಳೇದ, ಶಿವಾನಂದ ಟವಳಿ, ರಾಜು ಶಿಂತ್ರೆ, ನಗರಸಭೆ ಸದಸ್ಯರಾದ ಸಾಗರ ಬಂಡಿ, ಪ್ರೇಮಾ ಅಂಬಿಗೇರ, ವಾರ್ಡ ಅದ್ಯಕ್ಷರಾದ ಸಾಬಣ್ಣ ಅಂಬಿಗೇರ, ಹಿರಿಯರಾದ ಈರಣ್ಣ ಮುಂಡರಗಿ, ದ್ಯಾವಪ್ಪ ರಾಕುಂಪಿ, ಯಲ್ಲಪ್ಪ ಭಜಂತ್ರಿ, ಹುಲ್ಲಪ್ಪ ವಾಲಿಕಾರ, ರಂಗಪ್ಪ ಗಾಳಿ, ರಮೇಶ ಮಡಿವಾಳ, ಶಂಕರ ಗಲಗ, ವೇಂಕಟೇಶ ಅಂಬಿಗೇರ, ವೆಂಕಟೇಶ ಮೀರಜಕರ, ಸುರೇಶ ಮಜ್ಜಗಿ, ಚಂದ್ರಶೇಕರ ಬುಡ್ಡರ, ಅನಿತಾ ಸರೋದೆ, ಜ್ಯೋತಿ ಭಜಂತ್ರಿ ಸೇರಿದಂತೆ ಸೇರಿದಂತೆ ಎಲ್ಲ ನಗರಸಭೆ ಸದಸ್ಯರು, ವಾರ್ಡ್ ಅಧ್ಯಕ್ಷರು, ಬೂತ್ ಅಧ್ಯಕ್ಷರು, ಮೋರ್ಚಾದ ಎಲ್ಲ ಪದಾಧಿಕಾರಿಗಳು, ಶಕ್ತಿಕೇಂದ್ರ, ಮಹಾಶಕ್ತಿ ಕೇಂದ್ರ, ಸಾಮಾಜಿಕ ಜಾಲತಾಣ, ವಿವಿಧ ಪ್ರಕೋಷ್ಠದ ಪದಾಧಿಕಾರಿಗಳು, ಬಿಜೆಪಿ ಪಾರ್ಟಿಯ ಎಲ್ಲ ಕಾರ್ಯಕರ್ತರು ಪಾದಯಾತ್ರೆಯಲ್ಲಿ ಭಾಗವಹಿಸಿದ್ದರು
ದೇಶದ ಸರ್ವಾಂಗೀಣ ಅಭಿವೃದ್ಧಿಯೊಂದಿಗೆ ೨೦೪೭ ಕ್ಕೆ ಭಾರತ ವಿಶ್ವಗುರುವಾಗಲಿದೆ
ಮತ್ತೊಮ್ಮೆ ನರೇಂದ್ರ ಮೋದಿಯವರನ್ನು ಪ್ರಧಾನಿ ಮಾಡಿ ಕೇಂದ್ರದಲ್ಲಿ ಬಿಜೆಪಿಯನ್ನು ಅಧಿಕಾರಕ್ಕೆ ತರೋಣ,ಈ ಚುನಾವಣೆಯಲ್ಲಿ ಇದೆ ನಮ್ಮ ಅಚಲ ಗುರಿಯಾಗಲಿ.
_ ಡಾ.ವೀರಣ್ಣ ಚರಂತಿಮಠ
ಮಾಜಿ ಶಾಸಕರು ಬಾಗಲಕೋಟೆ