ಹೊಸದಿಲ್ಲಿ: ಇಡೀ ದೇಶದಾದ್ಯಂತ 7 ಹಂತದಲ್ಲಿ ನಡೆದ ಮತದಾನ ಪ್ರಕ್ರಿಯೆ ಶನಿವಾರ ಸಂಜೆ 6 ಗಂಟೆಗೆ ಅಂತ್ಯವಾಗುತ್ತಿದ್ದಂತೆ ಚುನಾವಣೋತ್ತರ ಸಮೀಕ್ಷೆಗಳು ಹೊರಬಿದ್ದಿವೆ. ಎನ್‌ಡಿಎ ನಿಶ್ಚಳ ಬಹುಮತದೊಂದಿಗೆ ಸರಕಾರ ರಚಿಸಲಿದ್ದುಘಿ, ಕರ್ನಾಟಕದಲ್ಲಿ ಬಿಜೆಪಿ-ಜೆಡಿಎಸ್‌ಗೆ ಮತದಾರ ಹೆಚ್ಚು ಒಲವು ತೋರಿಸಿದ್ದಾನೆಂದು ಹೇಳುತ್ತಿವೆ.
ಕರ್ನಾಟಕದಲ್ಲಿ ಟಿವಿ8 ಎಕ್ಸಿಟ್ ಪೋಲ್ ಪ್ರಕಾರ ಬಿಜೆಪಿ 18, ಕಾಂಗ್ರೆಸ್ 8, ಜೆಡಿಎಸ್ 2 ಸ್ಥಾನ ಎಂದಿದೆ. ಎನ್‌ಡಿಟಿವಿ ಬಿಜೆಪಿಗೆ 20ರಿಂದ 22, ಜೆಡಿಎಸ್‌ಗೆ 2, ಕಾಂಗ್ರೆಸ್‌ಗೆ 3 ರಿಂದ 5 ಸ್ಥಾನ ಎಂದಿದೆ.
ಲೋಕಸಭೆ ಚುನಾವಣೆಗೆ (Lok Sabha Election 2024) ತೆರೆ ಬಿದ್ದಿದ್ದು, ಮತಗಟ್ಟೆ ಸಮೀಕ್ಷೆಗಳು ಹೊರಬೀಳತೊಡಗಿವೆ. ಲೋಕಸಭೆ ಚುನಾವಣೆ ಕುರಿತು ಪಿ ಮಾರ್ಕ್ ಸಮೀಕ್ಷಾ ವರದಿ ಪ್ರಕಟಿಸಿದ್ದು, ಚುನಾವಣೆಯಲ್ಲಿ ಎನ್‌ಡಿಎ 359 ಕ್ಷೇತ್ರ, ಇಂಡಿಯಾ ಒಕ್ಕೂಟ 154 ಹಾಗೂ ಇತರೆ ಅಭ್ಯರ್ಥಿಗಳು 30 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದ್ದಾರೆ ಎಂದು ಸಮೀಕ್ಷೆ ತಿಳಿಸಿದೆ. ಇನ್ನು ಇಂಡಿಯಾ ಟುಡೇ ತಮಿಳುನಾಡಿನ ಸಮೀಕ್ಷೆ ವರದಿ ಪ್ರಕಟಿಸಿದೆ. ಅಷ್ಟೇ ಅಲ್ಲ, ಪೋಲ್ ಸ್ಟ್ರ್ಯಾಟ್ ಕರ್ನಾಟಕದ ಸಮೀಕ್ಷಾ ವರದಿ ತಿಳಿಸಿದೆ.
ಇದರೊಂದಿಗೆ ಸತತ ಮೂರನೇ ಬಾರಿಗೆ ನರೇಂದ್ರ ಮೋದಿ ಅವರೇ ಪ್ರಧಾನಿಯಾಗುವುದು ಖಚಿತವಾಗಿದೆ. ಲೋಕಸಭೆ ಚುನಾವಣೆಯುದ್ದಕ್ಕೂ ಇಂಡಿಯಾ ಒಕ್ಕೂಟ ಅಬ್ಬರದ ಪ್ರಚಾರ ನಡೆಸಿದರೂ, ಮೂರನೇ ಬಾರಿಗೂ ಬಿಜೆಪಿಯೇ ಗೆಲುವು ಸಾಧಿಸಲಿದೆ ಎಂಬುದು ಬಹುತೇಕ ಸಮೀಕ್ಷಾ ವರದಿಗಳ ಲೆಕ್ಕಾಚಾರವಾಗಿದೆ. ಅದರಲ್ಲೂ, ತಮಿಳುನಾಡಿನಲ್ಲಿ ಬಿಜೆಪಿಯು ಖಾತೆ ತೆರೆಯಲು ಮುಂದಾಗಿರುವುದು ಬಿಜೆಪಿಗೆ ಪಾಲಿಗೆ ದಕ್ಷಿಣ ಭಾರತದಲ್ಲಿ ವರದಾನವಾಗಲಿದೆ.
ಪಿ ಮಾರ್ಕ್
ಎನ್‌ಡಿಎ: 359
ಇಂಡಿಯಾ: ಒಕ್ಕೂಟ 154
ಇತರೆ: 30
ಇಂಡಿಯಾ ಟುಡೇ: ತಮಿಳುನಾಡು
ಡಿಎಂಕೆ: 20-22
ಬಿಜೆಪಿ: 1-3
ಪೋಲ್ ಸ್ಟ್ರ್ಯಾಟ್: ಕರ್ನಾಟಕ
ಬಿಜೆಪಿ 18
ಕಾಂಗ್ರೆಸ್: 8
ಜೆಡಿಎಸ್: 2
ಇಂಡಿಯಾ ನ್ಯೂಸ್
ಎನ್‌ಡಿಎ: 371
ಇಂಡಿಯಾ ಒಕ್ಕೂಟ: 125
ಮ್ಯಾಟ್ರಿಜ್
ಎನ್‌ಡಿಎ: 353-368
ಇಂಡಿಯಾ ಒಕ್ಕೂಟ: 120
ಮುಂಬೈ ಸಟ್ಟಾ ಬಜಾರ್ ವರದಿ ಪ್ರಕಾರ, ಚುನಾವಣೆಯಲ್ಲಿ ಬಿಜೆಪಿಯು 295-305 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದು ತಿಳಿದುಬಂದಿತ್ತು. ಕಾಂಗ್ರೆಸ್ ಈ ಬಾರಿ 55-65 ಕ್ಷೇತ್ರಗಳಲ್ಲಿ ಮಾತ್ರ ಜಯಿಸಲಿದೆ. ಇನ್ನು, ರಾಮಮಂದಿರ ಕಾರಣದಿಂದ ಬಿಜೆಪಿಗೆ ಪ್ರಮುಖವಾಗಿರುವ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ 64-66 ಕ್ಷೇತ್ರಗಳು ಲಭಿಸಲಿವೆ ಎಂದು ವರದಿ ತಿಳಿಸಿದೆ. ಇದಕ್ಕೂ ಮೊದಲು ಮುಂಬೈ ಸಟ್ಟಾ ಬಜಾರ್ ಸಮೀಕ್ಷೆಯು ಬಿಜೆಪಿ 270-280 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಲಿದೆ ಎಂದಿದ್ದರೆ, ಕಾಂಗ್ರೆಸ್ 70-80 ಕ್ಷೇತ್ರಗಳಲ್ಲಿ ಜಯಿಸಲಿದೆ ಎಂದು ತಿಳಿಸಿತ್ತು. ಈಗ ಬಹುತೇಕ ಸಮೀಕ್ಷೆಗಳು ಇದೇ ಅಂಶವನ್ನು ಉಲ್ಲೇಖಿಸಿವೆ.