ಇಂದು ನವನಗರದಲ್ಲಿ ವಿದ್ಯುತ್ ವ್ಯತ್ಯಯ
ಬಾಗಲಕೋಟೆ
ನಗರದ 110ಕೆವ್ಹಿ ವಿದ್ಯುತ್ ವಿತರಣಾ ಕೇಂದ್ರದ ವ್ಯಾಪ್ತಿಯ ನವನಗರದ ಕಾಮಗಾರಿ ಹಾಗೂ ಬಿಟಿಡಿಎ ವಿದ್ಯುತ್ ಬೀದಿ ದೀಪಗಳ ಕೆಲಸದ ನಿಮಿತ್ಯ ಸೆಪ್ಟೆಂಬರ 11 ರಂದು ಬೆಳಿಗ್ಗೆ 10 ರಿಂದ ಸಂಜೆ 6 ರವರೆಗೆ ನವನಗರದ ಶಾಖೆ-2ರ ಎಫ್-3 ಡಿ.ಸಿ ಆಫೀಸ್ ಪೀಡರ್ ಮೇಲೆ ಬರುವ ಸೆಕ್ಟರ್ ಸಂಖ್ಯೆ 5 ರಿಂದ 10, 18 ರಿಂದ 25, 32 ರಿಂದ 38, 46 ರಿಂದ 49 ವಾಜಪೇ ಕಾಲ್ಲೋನಿ, ಅತಿಥಿ ಬಡಾವಣೆ 1 & 2, ಸ್ಲಮ್ ಬೊರ್ಡ, ಮುಚಖಂಡಿ ಬಡಾವಣೆ 1 & 2, ಕೆ. ಎಸ್.ಆರ್.ಟಿ.ಸಿ ವಿದ್ಯುತ್ ಮಾರ್ಗಗಳ ಸರಬರಾಜುವಿನಲ್ಲಿ ವ್ಯತ್ಯಯವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
12 ರಂದು ವಿದ್ಯಾಗಿರಿಯಲ್ಲಿ ವಿದ್ಯುತ್ ವ್ಯತ್ಯಯ
ಬಾಗಲಕೋಟೆ
ನಗರದ 110/11ಕೆವ್ಹಿ ವಿದ್ಯುತ್ ವಿತರಣಾ ಉಪ ಕೇಂದ್ರದಿಂದ ಹೊರಡುವ ಎಫ್-1 ವಿದ್ಯಾಗಿರಿ ವಿದ್ಯುತ್ ಮಾರ್ಗದ ವ್ಯಾಪ್ತಿಯಲ್ಲಿ ಬರುವ ಕಂಬಗಳನ್ನು ಸ್ಥಳಾಂತರಿಸುವ ಕಾಮಗಾರಿ ಕೈಗೊಂಡ ನಿಮಿತ್ಯ ಸೆಪ್ಟೆಂಬರ 12 ರಂದು ಬೆಳಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ ಎಫ್-1 ವಿದ್ಯಾಗಿರಿ ವಿದ್ಯುತ್ ಮಾರ್ಗದ ಮೇಲೆ ಬರುವ ರಸ್ತೆ ಸಂಖ್ಯೆ 20ನೇ, 21 ಮತ್ತು 22ನೇ ಕ್ರಾಸ್, ಪೆÇೀಸ್ಟಲ್ ಕಾಲೋನಿ, ಸೋಳಿಬಾವಿ ಕಾಲೋನಿ, ಬೆಂಡಿಗೇರಿ ಕಾಲೋನಿ, ಸಿ.ಆರ್.ಪಾಟೀಲ್ ಲೇಔಟ್, ಶಿವಶಕ್ತಿ ಲೇಔಟ್ ಮತ್ತು ಗಾಣಿಗೇರ್ ಲೇಔಟ್ ಸ್ಥಳಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ವಾಗಲಿದ್ದು, ಗ್ರಾಹಕರು ಸಹಕರಿಸುವಂತೆ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಯುವ ಸಂಘ ಪ್ರಶಸ್ತಿಗಾಗಿ ಅರ್ಜಿ
ಬಾಗಲಕೋಟೆ
ಭಾರತ ಸರ್ಕಾರದ ನೆಹರು ಯುವ ಕೇಂದ್ರದ ವತಿಯಿಂದ ಪ್ರಸಕ್ತ ಸಾಲಿನ ಜಿಲ್ಲಾ ಯುವ ಸಂಘ ಪ್ರಶಸ್ತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಜಿಲ್ಲಾ ಮಟ್ಟದಲ್ಲಿ ಆಯ್ಕೆಯಾದ ಒಂದು ಯುವ ಸಂಘಕ್ಕೆ 25 ಸಾವಿರ ರೂ., ಪ್ರಶಸ್ತಿ ಪತ್ರ, ರಾಜ್ಯ ಮಟ್ಟದಲ್ಲಿ 75 ಸಾವಿರ ರೂ., ರಾಷ್ಟ್ರ ಮಟ್ಟದಲ್ಲಿ ಪ್ರಥಮ 3 ಲಕ್ಷ, ದ್ವಿತೀಯ 1 ಲಕ್ಷ ರೂ. ತೃತೀಯ 50 ಸಾವಿರ ರೂ. ಬಹುಮಾನ ಮತ್ತು ಪ್ರಶಸ್ತಿ ಪತ್ರ ನೀಡಲಾಗುತ್ತದೆ.
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸುವ ಯುವ ಸಂಘವು ಕರ್ನಾಟಕ ರಾಜ್ಯ ಸಂಘ ಸಂಸ್ಥೆ ನೋಂದಣಿ ಕಾಯ್ದೆ ಪ್ರಕಾರ ನೋಂದಣಿಯಾಗಿರಬೇಕು. ನೆಹರು ಯುವ ಕೇಂದ್ರದಲ್ಲಿ ಸಂಯೋಜನೆಗೊಂಡಿರಬೇಕು. ಸಂಘವು ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಏರ್ಪಡಿಸಿರಬೇಕು. ಅಗತ್ಯ ದಾಖಲಾತಿಗಳನ್ನು ಲಗತ್ತಿಸಿರಬೇಕು. ಈ ಪ್ರಶಸ್ತಿಯನ್ನು ಜಿಲ್ಲಾಧಿಕಾರಿಗಳ ಅಧ್ಯಕ್ಷತೆಯಲ್ಲಿ ಜಿಲ್ಲಾ ಆಯ್ಕೆ ಸಮಿತಿ ಮೂಲಕ ಆಯ್ಕೆಮಾಡಲಾಗುವುದು ಅರ್ಜಿ ಸಲ್ಲಿಸಲು ಕೊನೆಯ ದಿನ ಸೆಪ್ಟೆಂಬರ 25 ಆಗಿದೆ. ಹೆಚ್ಚಿನ ಮಾಹಿತಿಗಾಗಿ ನೆಹರು ಯುವ ಕೇಂದ್ರ ಒಳಾಂಗಣ ಕ್ರೀಡಾಂಗಣ, ಜಿಲ್ಲಾ ಕ್ರೀಡಾಂಗಣ ಆವರಣ, ಸೆಕ್ಟರ್ 39, ಜಿಲ್ಲಾ ಯುವ ಸಮನ್ವಯ ಅಧಿಕಾರಿಗಳಾದ ಸುಷ್ಮಾ ಗವಳಿ ದೂ.08354-235252 ಸಂಪರ್ಕಿಸುವಂತೆ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.