ನಮ್ಮ ಪರಂಪರೆ, ಸಂಸ್ಕೃತಿ ನಾವೇ ಉಳಿಸಬೇಕು
ಅಮೀನಗಡ
ಶರಣ ಪರಂಪರೆಯ ಇತಿಹಾಸ ಹೊಂದಿದ ನಮ್ಮ ಪರಂಪರೆ, ಸಂಸ್ಕೃತಿಯನ್ನು ಉಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಜಿಪಂ ಮಾಜಿ ಅಧ್ಯಕ್ಷೆ ವೀಣಾ ಕಾಶಪ್ಪನವರ ಹೇಳಿದರು.
ಇಲ್ಲಿನ ಪ್ರಭುಶಂಕರೇಶ್ವರ ಗಚ್ಚಿನಮಠದ ಲಿಂ.ರಾಜಗುರು ಪ್ರಭುರಾಜೇಂದ್ರ ಸ್ವಾಮೀಜಿಗಳ ಜನ್ಮಶತಮಾನೋತ್ಸವ ನಿಮಿತ್ತ ಪ್ರಭುಶಂಕರೇಶ್ವರ ಅನುಭವ ಮಂಟಪ ಲೋಕಾರ್ಪಣೆ, ಅಕ್ಕನ ಬಳಗದ ಅಮೃತ ಮಹೋತ್ಸವ ಹಾಗೂ ಎಸ್‌ವಿವಿ ಸಂಘದ ನೌಕರರ ಪತ್ತಿನ ಸಹಕಾರಿ ಸಂಘದ ಸುವರ್ಣ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 12ನೇ ಶತಮಾನದಲ್ಲೇ ಅಣ್ಣ ಬಸವಣ್ಣ ಮಹಿಳೆಯರಿಗೂ ಅನುಭವ ಮಂಟಪದಲ್ಲಿ ಸ್ಥಾನ ನೀಡಿದ್ದರು. ಧರ್ಮ ಎತ್ತಿ ಹಿಡಿಯುವವರು ಸ್ವಾಮೀಜಿಗಳು. ಅವರ ಮಾರ್ಗದರ್ಶನದಲ್ಲಿ ಸಾಗಬೇಕಿದೆ ಎಂದರು.
ಸಾಕಷ್ಟು ಮಹಿಳೆಯರ ಸಾಧನೆಗಳು ನಮ್ಮ ಮುಂದಿದ್ದು ಅವುಗಳಿಂದ ಸ್ಪೂರ್ತಿ ಪಡೆಯಬೇಕು. ಆತ್ಮಸ್ಥೆöÊರ್ಯ ಬೆಳೆಸಿಕೊಂಡು ಬದುಕು ಸಾಗಿಸಬೇಕು. ಮಕ್ಕಳಿಗೆ ವಚನ ಸಾಹಿತ್ಯ ತಿಳಿಸಿ. ಸ್ವಾಮಿಜೀಗಳ ಸೇವೆ ಮೂಲಕ ಬದುಕು ಸುಂದರಗೊಳಿಸಿಕೊಳ್ಳಿ ಎಂದು ಹೇಳಿದರು.
ಎಸ್‌ವಿವಿ ಸಂಘದ ನೌಕರರ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಆರ್.ಜಿ.ಸನ್ನಿ ಸಂಘದ ಹಾಗೂ ಪತ್ತಿನ ಸಹಕಾರಿ ಸೊಸೈಟಿಯ ಬೆಳವಣಿಗೆ ಕುರಿತು ಮಾತನಾಡಿದರು.
ಗದಗ ತೋಂಟದಾರ್ಯ ಮಠದ ಡಾ.ತೋಂಟದ ಸಿದ್ದರಾಮ ಸ್ವಾಮೀಜಿ, ಹಾವೇರಿಯ ಹುಕ್ಕೇರಿಮಠದ ಸದಾಶಿವ ಶ್ರೀ, ನಾಗನೂರು ರುದ್ರಾಕ್ಷಿಮಠದ ಅಲ್ಲಮಪ್ರಭು ಸ್ವಾಮೀಜಿ, ಪ್ರಭುಶಂಕರೇಶ್ವರ ಶ್ರೀ, ಗುಳೇದುಗಡ್ಡದ ಕಾಶೀನಾಥ ಶ್ರೀ, ಸಿದ್ದಲಿಂಗ ಸ್ವಾಮೀಜಿ, ಗುರುಪಾದ ಸ್ವಾಮೀಜಿ, ಮಲ್ಲಿಕಾರ್ಜುನ ಶಿವಾಚಾರ್ಯರು, ಕಮತಗಿ ಹುಚ್ಚೇಶ್ವರ ಸ್ವಾಮೀಜಿ ಸೇರಿದಂತೆ ನಾನಾ ಮಠದ ಸ್ವಾಮೀಜಿಗಳು ಇದ್ದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವಿಧಾನ ಪರಿಷತ್ ಸದಸ್ಯ ಹನಮಂತ ನಿರಾಣಿ ಮಾತನಾಡಿದರು. ಅಕ್ಕನಬಳಗದ ಅಧ್ಯಕ್ಷೆ ಪಾರ್ವತೆವ್ವ ಗರಡಿ, ವಿಜಯಕುಮಾರ ಯಡ್ರಾಮಿ, ಆನಂದ ಐಹೊಳ್ಳಿ, ವಿಜಯಕುಮಾರ ಕನ್ನೂರ, ಶಿವು ಕನ್ನೂರ, ವೀರಣ್ಣ ಕಂಬಾಳಿಮಠ ಇತರರಿದ್ದರು.
ಇದೇ ಸಂದರ್ಭದಲ್ಲಿ ಪಟ್ಟಣದ ವೈದ್ಯ ಡಾ.ಪಿ.ಐ.ರಕ್ಕಸಗಿ ಅವರ ಸಾಮಾನ್ಯ ವೈದ್ಯನ ಅಸಾಮಾನ್ಯ ಆತ್ಮಕಥೆ ಕುರಿತು ಗಣೇಶ ಅಮೀನಗಡ ಅವರ ವೈಸೂರಿನ ಕವಿತಾ ಪ್ರಕಾಶನದಿಂದ ಮುದ್ರಣಗೊಂಡ ಪುಸ್ತಕ ಬಿಡುಗಡೆಗೊಳಿಸಲಾಯಿತು.