ಹುಬ್ಬಳ್ಳಿ: ಭಾರತದಲ್ಲಿ ಯಾವಾಗ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತದೋ ಆಗ ಪ್ರಜಾಪ್ರಭುತ್ವದಲ್ಲಿ ಬದಲಾವಣೆ ಖಚಿತವಾಗಿದ್ದು ಆಗ ಇದು ಜಾತ್ಯತೀತ ರಾಷ್ಟ್ರವಾಗಿ ಉಳಿಯುವುದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಅವರು ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಯಾವ ದಿನ ದೇಶದಲ್ಲಿ ಹಿಂದೂಗಳ ಸಂಖ್ಯೆ ಕಡಿಮೆ ಆಗುತ್ತೆ ಅಂದು ದೇಶದಲ್ಲಿ ಡೆಮಾಕ್ರಫಿ ಬದಲಾವಣೆ ಆಗುತ್ತದೆ. ದೇಶ ಸೆಕ್ಯೂಲರ್ ಆಗಿ ಉಳಿಯುವುದಿಲ್ಲ. ಜಗತ್ತಿನಲ್ಲಿ ಪಕ್ಕಾ ಮತ್ತು ಏಕೈಕ ಸೆಕ್ಯೂಲರ್ ದೇಶ ಅಂದರೆ ಭಾರತ ಮಾತ್ರ. ಸೆಕ್ಯೂಲರ್ ದೇಶ ಜನರ ಸ್ವಭಾವ ರಕ್ತದಲ್ಲಿದಿದ್ದು ನಾವು ಹಲವಾರು ದೇವತೆಗಳನ್ನು ಪೂಜೆ ಮಾಡುತ್ತವೆ. ಯಾರು ಪೂಜಿಸುವುದಿಲ್ಲವೋ ಅವರನ್ನೂ ಋಷಿ ಅಂದ ದೇಶ ಇದಾಗಿದೆ ಎಂದರು.
ವಿವಿಧ ಸಂಸ್ಕೃತಿಗಳ ಒಂದಾಗಿರುವ ಏಕೈಕ ಧರ್ಮ, ದೇಶ ಅಂದರೆ ಅದು ಭಾರತ ಮಾತ್ರ. ಯಾರ ಬಂದರೂ ವಿಚಾರ ಕೇಳಿದ್ದೆವೆ, ಮಾನ್ಯತೆ ನೀಡಿದ್ದೆವೆಹಿಂದೂ ಜೀವನ ಪದ್ಧತಿ ಮುಂದುವರಿಬೇಕು ಅಂದರೆ ಈ ವರದಿಯನ್ನು ಗಂಭೀರವಾಗಿ ತೆಗೆದುಕೊಳ್ಳಬೇಕು ಎಂದು ಸಲಹೆ ನೀಡಿದರು.
ದೇಶದಲ್ಲಿ ಹಿಂದೂಗಳ ಪ್ರಮಾಣ ಇಳಿಕೆ ವರದಿ ಬಹಿರಂಗ ಅತ್ಯಂತ ಆತಂಕಾರಿ ವಿಷಯವಾಗಿದ್ದು ಇದನ್ನು ಸಮಾಜ ಮತ್ತು ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳಬೇಕು. ಪರ್ಯಾಯ ಕ್ರಮಗಳ ಬಗ್ಗೆ ಯೋಚನೆ ಮಾಡಬೇಕು ಎಂದು ಹೇಳಿದರು.