ಬೆಂಗಳೂರು: ಪೆನ್ ಡ್ರೈವ್ ಕೇಸ್ನಲ್ಲಿ ಡಿಕೆ ಶಿವಕುಮಾರ್ ಅವರನ್ನು ತರಾಟೆಗೆ ತೆಗೆದುಕೊಳ್ಳುವುದನ್ನು ಮುಂದುವರಿಸಿದ ಕುಮಾರಸ್ವಾಮಿ, ‘ಮನುಷ್ಯತ್ವ ಇದ್ಯೇನ್ರೀ ಇವ್ರಿಗೆ… ಪಾಪ ಯೋಗೇಶ್ವರ್ ಮಗಳನ್ನು ಕಾಂಗ್ರೆಸ್ಗೆ ತಂದು ಉದ್ಧಾರ ಮಾಡ್ತಾರಂತೆ ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್ ಡಿ ಕುಮಾರಸ್ವಾಮಿ ಹೇಳಿದರು.
ಪ್ರಜ್ವಲ್ ರೇವಣ್ಣ ಪೆನ್ ಡ್ರೈವ್ ಕೇಸ್ನಲ್ಲಿ ಆರೋಪ ಪ್ರತ್ಯಾರೋಪ, ವಾಗ್ಯುದ್ಧಗಳ ಮಧ್ಯೆ ಇಂದು ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, 2002ರಲ್ಲೂ ಬಂದಿತ್ತು ಒಂದ್ ವಿಷ್ಯ. ಅದು ಈಗ ಬೇಡ…’ ಎಂದು ವ್ಯಂಗ್ಯವಾಡಿದರು.
ದೇವೇಗೌಡರ ಕುಟುಂಬ ಒಡೆದಿದ್ದು, ರೇವಣ್ಣ ಕುಟುಂಬವನ್ನು ಕುಮಾರಸ್ವಾಮಿ ನಾಶ ಮಾಡಲು ಹೊರಟಿದ್ದಾರೆ ಎನ್ನುವಂತಹ ಕಾಂಗ್ರೆಸ್ ನಾಯಕ ಆರೋಪವನ್ನು ಎಚ್ಡಿಕೆ ತಳ್ಳಿಹಾಕಿದ್ದಾರೆ. ಪ್ರಜ್ವಲ್ ರೇವಣ್ಣ ಅವರನ್ನು ಈ ಬಾರಿ ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಮಾಡುವುದು ಬೇಡ ಎಂದು ತಾನು ನಿಲುವು ತೆಗೆದುಕೊಂಡ ಸಂಗತಿಯನ್ನು ಕುಮಾರಸ್ವಾಮಿ ಒಪ್ಪಿಕೊಂಡಿದ್ದಾರೆ ಎಂದರು.
ಆದರೆ, ಆ ನಿಲುವಿಗೆ ಕಾರಣವನ್ನೂ ಬಿಚ್ಚಿಟ್ಟಿದ್ದಾರೆ. ಪ್ರಜ್ವಲ್ ದೊಡ್ಡವರಿಗೆ ಗೌರವ ಕೊಡಲ್ಲ, ಸರಿಯಾಗಿ ನಡೆದುಕೊಳ್ಳುವುದಿಲ್ಲ. ಈ ಬಾರಿ ಕ್ಯಾಂಡಿಡೇಟ್ ಬದಲಿಸಿ ಎಂದು ಕಾರ್ಯಕರ್ತರು ಕೇಳಿದ್ದು, ಹೀಗಾಗಿ ಪ್ರಜ್ವಲ್ಗೆ ಟಿಕೆಟ್ ಕೊಡುವುದು ಬೇಡ ಎಂದು ತಾನು ನಿರ್ಧರಿಸಿದ್ದು ಎಂದು ತಿಳಿಸಿದರು.