ಬೆಂಗಳೂರು: ಪ್ರಜ್ವಲ್ ರೇವಣ್ಣ ಪ್ರಕರಣ ಇದೀಗ ರಾಜ್ಯದಲ್ಲಿ ದೊಡ್ಡಮಟ್ಟದಲ್ಲಿ ಸುದ್ದಿಯಾಗಿದ್ದು, ಈ ಮಧ್ಯೆ ಚುನಾವಣೆ ಮುಗಿದರೂ ಉಭಯ ಪಕ್ಷಗಳು ಆರೋಪ-ಪ್ರತ್ಯಾರೋಪಗಳ ಸುರಿಮಳೆಗೈಯುತ್ತಿದ್ದು, ಇತ್ತ ಟ್ವೀಟ್ ಮೂಲಕ H.D ಕುಮಾರಸ್ವಾಮಿ ವಿರುದ್ಧ ಡಿಕೆ ಶಿವಕುಮಾರ್ ಅಟ್ಯಾಕ್ ಮಾಡಿದ್ದು, ‘ಕುಮಾರಸ್ವಾಮಿ ಹಿಟ್ ಆ್ಯಂಡ್ ರನ್ ಗಿರಾಕಿ ಅನ್ನೋದು ರಾಜ್ಯದ ಜನರಿಗೆ ಗೊತ್ತಿದೆ ಎಂದು ವಿವರಿಸಿದರು.
ಈ ಪ್ರಕರಣದ ಹಿಂದೆ ಬ್ಲಾಕ್ ಮೇಲ್ ಕಿಂಗ್ ಕುಮಾರಸ್ವಾಮಿ ಇದ್ದು, ರಾಜಕಾರಣಿಗಳು, ಅಧಿಕಾರಿ ಬ್ಲಾಕ್ ಮೇಲ್ ಮಾಡುವುದೇ ಅವರ ಕೆಲಸ. ಅವರಿಗೆ ದಿನಕ್ಕೊಮ್ಮೆ ನನ್ನ ಹೆಸರು ಎತ್ತದಿದ್ದರೆ ನಿದ್ದೆ ಬರಲ್ಲ, ನಾನು ಹೇಳುತ್ತಿದ್ದೇನೆ ಈ ಪ್ರಕರಣದ ಕಥಾನಾಯಕ, ಡೈರೆಕ್ಟರ್, ಪ್ರೋಡ್ಯೂಸರ್ ಎಲ್ಲಾ ಕುಮಾರಸ್ವಾಮಿ ಅವರೇ ಎಂದು ತಿಳಿಸಿದರು.
ಅವರ ಈ ಹಿಂದಿನ ಯಾವುದೇ ಆರೋಪಗಳು ಸಾಭೀತಾಗಿಲ್ಲ. ಇನ್ನು ಪ್ರಜ್ವಲ್ ಸೆಕ್ಸ್ಗೇಟ್ ಕೇಸ್ನಲ್ಲಿ ನನ್ನ ಹೆಸರು ಮುನ್ನಲೆಗೆ ತಂದರೆ, ಇಡೀ ರಾಜ್ಯದ ಗಮನ ಸೆಳೆಯಬಹುದು ಎನ್ನುವ ಕಾರಣಕ್ಕೆ ಪದೇ ಪದೇ ನನ್ನ ಮೇಲೆ ಗೂಬೆ ಕೂರಿಸುವ ಕೆಲಸ ಮಾಡ್ತಿದ್ದಾರೆ ಎಂದು ಕಿಡಿಕಾರಿದರು.