This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

State News

ಈಶ್ವರ ಲಿಂಗ ಇದ್ದ ಮೇಲೆ ಜೀರ್ಣೋದ್ಧಾರ, ದೇವಸ್ಥಾನ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ: ಪ್ರಮೋದ್ ಮುತಾಲಿಕ್

ಈಶ್ವರ ಲಿಂಗ ಇದ್ದ ಮೇಲೆ ಜೀರ್ಣೋದ್ಧಾರ, ದೇವಸ್ಥಾನ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ: ಪ್ರಮೋದ್ ಮುತಾಲಿಕ್

ಕಲಬುರಗಿ: ಆಳಂದ ಪಟ್ಟಣದಲ್ಲಿ ಇರುವ ಲಾಡ್ಲೆ ಮಶಾಕ್ ದರ್ಗಾದಲ್ಲಿರುವ ರಾಘವ ಚೈತನ್ಯ ಶಿವಲಿಂಗದ ದೇವಸ್ಥಾನಕ್ಕೆ ಶಿವರಾತ್ರಿಯಂದು ಅಡಿಗಲ್ಲು ಹಾಕುತ್ತೇವೆ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಅಧ್ಯಕ್ಷ ಪ್ರಮೋದ್ ಮುತಾಲಿಕ್ ತಿಳಿಸಿದರು.

ಕಲಬುರಗಿಯಲ್ಲಿ ಮಾತನಾಡಿದ ಅವರು, ರಾಘವ ಚೈತನ್ಯ ಅವರು ಈಶ್ವರಲಿಂಗ ಪ್ರತಿಷ್ಠಾಪನೆ ಮಾಡಿದ ಆ ಸ್ಥಳ ಅದನ್ನು ಅತಿಕ್ರಮಣ ಮಾಡಿಕೊಂಡಿದ್ದು ಮುಸ್ಲಿಮರು. ಈಗ ದರ್ಗಾ ಮಾಡಿ ಉರುಸ್ ಮಾಡುತ್ತಿದ್ದು, ನೂರಾರು ವರ್ಷದ ಹಿಂದಿನ ಪವಿತ್ರ ಕ್ಷೇತ್ರವಿದು. ಪೂಜೆ ಸಲ್ಲಿಸಲು ಕಳೆದ ವರ್ಷವೇ ಕೋರ್ಟ್ ಅನುಮತಿ ಕೊಟ್ಟಿದೆ ಎಂದರು.

ಅಲ್ಲಿ ಪೂಜೆ ಮಾಡುವುದು ನಮ್ಮ ಹಕ್ಕು. ಶಿವರಾತ್ರಿ ದಿನ ಆ ಸ್ಥಳದಲ್ಲಿ ಸಾವಿರಾರು ಜನ ಅಲ್ಲ, ಲಕ್ಷಾಂತರ ಜನ ಬಂದು ಪೂಜೆ ಮಾಡುತ್ತೇವೆ. ರಕ್ಷಣೆ ನೀಡುವುದು ಸರ್ಕಾರದ ಕೆಲಸ. ಸರ್ಕಾರ ಅದರ ಕರ್ತವ್ಯ ನಿರ್ವಹಿಸಲಿ, ನಾವು ನಮ್ಮ ಕರ್ತವ್ಯ ನಿರ್ವಹಿಸುತ್ತೇವೆ ಎಂದು ಅವರು ಹೇಳಿದರು.

ಆ ಸ್ಥಳದಲ್ಲಿ ಈಶ್ವರ ಲಿಂಗ ಇದ್ದ ಮೇಲೆ ಜೀರ್ಣೋದ್ಧಾರ, ದೇವಸ್ಥಾನ ನಿರ್ಮಾಣ ಮಾಡುವುದು ನಮ್ಮ ಕರ್ತವ್ಯ. ಶಿವರಾತ್ರಿ ದಿನ ಗುದ್ದಲಿ ಪೂಜೆಯಿಂದ ಪ್ರಾರಂಭ ಮಾಡುತ್ತೇವೆ. ಯಾವುದೇ ರೀತಿಯ ಕಾನೂನು ಬಾಹಿರವಾಗಿ ಮಾಡುವುದಿಲ್ಲ. ದೇವಸ್ಥಾನ ಅಲ್ಲಿ ಕಟ್ಟುವುದು ನಿಶ್ಚಿತ ಎಂದು ಸೂಚಿಸಿದರು.

";