ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದಲ್ಲಿ ಸ್ವಾತಂತ್ಯದ ಪೂರ್ವದಲ್ಲಿ ಶೈಕ್ಷಣಿಕ ದಾಸೋಹ ಸೇವೆ ಮಾಡಲು 1945ರಲ್ಲಿ ಸಂಗಮೇಶ್ವರ ವಿದ್ಯಾವರ್ಧಕ ಸಂಘವು ಶ್ರೀ.ಮ.ನಿ.ಪ್ರ.ರಾಜಗುರು ಪ್ರಭುರಾಜೇಂದ್ರ ಮಹಾಸ್ವಾಮಿಗಳಿಂದ ಸ್ಥಾಪನೆಗೊಂಡು 1948ರಲ್ಲಿ ಪ್ರಪ್ರಥಮವಾಗಿ ಸಂಗಮೇಶ್ವರ ಮಾಧ್ಯಮಿಕ ಶಾಲೆ ಪ್ರಾರಂಭ ಮಾಡುವ ಮೂಲಕ ಶೈಕ್ಷಣಿಕ ಪ್ರಗತಿಗೆ ಬುನಾದಿ ಹಾಕಿದರು.
ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜು, ಸಂಗಮೇಶ್ವರ ಹಿರಿಯ ಪ್ರಾಥಮಿಕ ಶಾಲೆ, ಸಂಗಮೇಶ್ವರ ವೃತ್ತಿ ಶಿಕ್ಷಣ ತರಬೇತಿ ಕೇಂದ್ರ, ಸಂಗಮೇಶ್ವರ ಪದವಿ ಮಹಾವಿದ್ಯಾಲಯ, ಸಂಗಮೇಶ್ವರ ಆಂಗ್ಲ ಮಾಧ್ಯಮ ಶಾಲೆ, ಸಂಗಮೇಶ್ವರ ಕೈಗಾರಿಕಾ ತರಬೇತಿ ಕೇಂದ್ರ, ಸಂಗಮೇಶ್ವರ ಅಂಗನವಾಡಿ ತರಬೇತಿ ಕೇಂದ್ರ, ಸಂಗಮೇಶ್ವರ ಹೊಲಿಗೆ ಮತ್ತು ತರಬೇತಿ ಕೇಂದ್ರ, ಸಂಗಮೇಶ್ವರ ಬಾಲಕಿಯರ ಪ್ರೌಢಶಾಲೆ,
ಸಂಗಮೇಶ್ವರ ತೊಟ್ಟಿಲು ಮನೆ, ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಸತಿ ನಿಲಯ, ನಿರಾಶ್ರಿತ ಮಕ್ಕಳ ವಸತಿ ನಿಲಯ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ವಿದ್ಯಾರ್ಥಿಗಳ ವಸತಿ ನಿಲಯ ಸೇರಿದಂತೆ ಹಲವಾರು ಅಂಗ ಸಂಸ್ಥೆಗಳನ್ನು ಹುಟ್ಟುಹಾಕಿದ್ದಾರೆ.
ಲಕ್ಷಾಂತರ ಮಕ್ಕಳಿಗೆ ಜ್ಞಾನ ದಾಸೋಹ ಮಾಡಿದ್ದರ ಫಲವಾಗಿ ಇಂದು ಲಕ್ಷಾಂತರ ಮಕ್ಕಳು ಕಲಿತು ದೇಶದ ನಾನಾ ಭಾಗಗಳಲ್ಲಿ ವಿಶ್ವದ ನಾನಾ ದೇಶಗಳಲ್ಲಿ ತಮ್ಮ ವೃತ್ತಿ ಪ್ರಾರಂಭಿಸಿ ಇಂದು ಸಮಾಜದ ವಿವಿಧ ಕ್ಷೇತ್ರಗಳಲ್ಲಿ ಮತ್ತು ಉನ್ನತವಾದ ಹುದ್ದೆಗಳಲ್ಲಿ ನಮ್ಮ ಸಂಸ್ಥೆಯಲ್ಲಿ ಕಲಿತ ವಿದ್ಯಾರ್ಥಿಗಳು ಕಾಣಿಸಿಕೊಳ್ಳುತ್ತಿರುವುದು ಸಂತೋಷವನ್ನುಂಟುಮಾಡಿದೆ.
ಅಂತೆಯೆ ಸಂಸ್ಥೆಯ ವಿವಿಧ ಅಂಗ ಸಂಸ್ಥೆಗಳಲ್ಲಿ ಜ್ಞಾನಾರ್ಜನೆ ಮಾಡಿದ ವಿದ್ಯಾರ್ಥಿಗಳನ್ನು ಒಂದು ಕಡೆ ಸೇರಿಸುವ ಸಂಕಲ್ಪ ಬಹಳ ದಿನಗಳಿಂದ ಇದ್ದರೂ, ಈಗ ಅದು ಕೂಡಿಬಂದಿದೆ.
ಡಿಸೆಂಬರ್ 15ನೇ ತಾರಿಖಿನಿಂದ ಜನೇವರಿ 5 ನೇ ತಾರಿಖಿನವರೆಗೆ ಲಿಂ.ರಾಜಗುರು ಪ್ರಭುರಾಜೇಂದ್ರ ಮಹಾಸ್ವಾಮಿಗಳ ಜನ್ಮಶತಮಾನೋತ್ಸವ, ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಅಮೃತ ಮಹೋತ್ಸವ, ಶ್ರೀ.ಮ.ನಿ.ಪ್ರ. ಶಂಕರರಾಜೇAದ್ರ ಮಹಾಸ್ವಾಮಿಗಳ ಪೀಠಾಧಿಕಾರ ರಜತಮಹೋತ್ಸವ ಹಾಗೂ ಜನ್ಮ ಸುವರ್ಣ ಮಹೋತ್ಸವ ಸಂಸ್ಥೆಯ ಹಿರಿಯ ವಿದ್ಯಾರ್ಥಿಗಳ ಸಮಾವೇಶವನ್ನು ದಿನಾಂಕ : 29-12-2024 ರ ರವಿವಾರ ಬೆಳಿಗ್ಗೆ 11 ಗಂಟೆಗೆ ನೆರವೇರಿಸಬೇಕೆಂದು ತೀರ್ಮಾನಿಸಲಾಗಿದೆ.
ಅದರ ರೂಪರೇಷೆಗಳನ್ನು ಸಿದ್ಧಪಡಿಸಲು ದಿನಾಂಕ 8-12-2024 ರಂದು ಬೆಳಗ್ಗೆ 10.30ಕ್ಕೆ ಸಂಗಮೇಶ್ವರ ಸಂಯುಕ್ತ ಪದವಿ ಪೂರ್ವ ಕಾಲೇಜ್‌ನಲ್ಲಿ ತಮ್ಮೆಲ್ಲರ ಸಭೆ ಕರೆಯಲಾಗಿದೆ. ತಾವು ಆಗಮಿಸಿ ಸೂಕ್ತ ಸಲಹೆ ಸೂಚನೆಗಳನ್ನ ನೀಡಿ ಕಾರ್ಯಕ್ರಮ ಯಶಸ್ವಿಗೊಳಿಸಲು ಪ್ರಾಚಾರ್ಯರಾದ ಎಂ.ಎನ್.ವAದಾಲ, ಡಿ.ಆರ್.ಕುಬಸದ, ಎಂ.ಆರ್.ಹಿರೇಮಠ, ಉಪಪ್ರಾಚಾರ್ಯ ಆರ್.ಜಿ.ಸನ್ನಿ, ಮುಖ್ಯಶಿಕ್ಷಕ ಎಸ್.ಎಸ್.ಹಿರೇಮಠ, ಮುಖ್ಯಶಿಕ್ಷಕಿ ಜ್ಯೋತಿ ಟಿರಕಿ ವಿನಂತಿಸಿದ್ದಾರೆ.
Team One