ವೆಲೋಡ್ರೊಮ್ ಇದು ವಿಜಯಪುರ-ಬಾಗಲಕೋಟೆ ಜಿಲ್ಲೆಗಳ ಸೈಕ್ಲಿಸ್ಟ್‌ಗಳ ಕನಸು. ಆ ಕನಸು ಕೊನೆಗೂ ಸಾಕಾರಗೊಳ್ಳುವ ಸಮಯ ಬಂದಿದೆ. ಆ.15ಕ್ಕೆ ವೆಲೋಡ್ರೊಮ್ ಉದ್ಘಾಟನೆಗೆ ಬೇಕಾದ ಸಿದ್ಧತೆಗಳು ನಡೆದಿವೆ. ಕಳೆದೆರಡು ದಿನಗಳ ಹಿಂದೆ ವಿಜಯಪುರದ ಜಿಲ್ಲಾಕಾರಿ ಟಿ.‘ೂಬಾಲನ್ ಆ ಪ್ರದೇಶಕ್ಕೆ ‘ೇಟಿ ನೀಡಿ, ಪ್ರಗತಿ ಪರಿಶೀಲನೆ ನಡೆಸಿದ್ದಾರೆ.
ವಿಜಯಪುರದ ‘ೂತನಾಳ ಕೆರೆಯ ಹತ್ತಿರದ ಜಾಗೆಯಲ್ಲಿ ಎರಡು ದಶಕದ ಹಿಂದೆಯೇ ಈ ವಿಶೇಷ ಕ್ರೀಡಾಂಗಣದ ಕಾಮಗಾರಿ ಪ್ರಾರಂ‘ವಾಗಿದ್ದುಘಿ, ಅದು ಈಗ ಮುಕ್ತಾಯವಾಗಿದೆ. ಅಂದುಕೊಂಡಂತೆ ಕಾಮಗಾರಿ ಮುಗಿದಿದ್ದರೆ ಈಗಾಗಲೇ ಇಲ್ಲಿ ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್‘ೆಗಳು ನಡೆಯಬೇಕಾಗುತ್ತುಘಿ. ಆದರೆ ನಾನಾ ಕಾರಣಗಳಿಂದಾಗಿ ಅದು ಬಾರಾ ಕಮಾನ್‌ದಂತಾಗಿ ಹೋಗಿತ್ತು.
ವಿಜಯಪುರ-ಬಾಗಲಕೋಟೆ ಜಿಲ್ಲೆಯ ಸೈಕ್ಲಿಸ್ಟ್‌ಗಳು ರೋಡ್, ವೌಂಟೇನ್ ಬೈಕ್, ಟ್ರ್ಯಾಕ್ ಸೈಕ್ಲಿಂಗ್‌ಗಳಲ್ಲಿ ಗಳಿಸಿದ ಪದಕಗಳಿಗೆ ಲೆಕ್ಕವೇ ಇಲ್ಲ. ಹಾಗಾಗಿಯೇ ಅವರಿಗೆ ಅನುಕೂಲ ಆಗಲಿ ಅಂತ ಇಲ್ಲಿ ವೆಲೋಡ್ರೊಮ್ ನಿರ್ಮಾಣಕ್ಕೆ ಮುಂದಾಗಿತ್ತು. ಎರಡು ದಶಕಗಳ ಹಿಂದಿನ ಸರಕಾರ. ಅದಾದ ನಂತರ ಸಾಕಷ್ಟು ಸರಕಾರಗಳು ಬದಲಾದವು. ಆದರೆ ಕಾಮಗಾರಿ ಮಾತ್ರ ಬಾರಾಕಮಾನ್ ದಂತಾಗಿಯೇ ನಿಂತಿತ್ತುಘಿ. ಆದರೆ ಅದನ್ನು ಬಾರಾಕಮಾನ್‌ನಂತಾಗಲು ಬಿಡದೇ ಕೊನೆಗೆ ಪೂರ್ಣಗೊಳಿಸಿ ಈಗ ಉದ್ಘಟನೆಗೆ ಸಿದ್ಧತೆ ನಡೆಸಿದ್ದಾರೆ.
ವೆಲೋಡ್ರೊಮ್ ನಿರ್ಮಾಣದ ಇತಿಹಾಸ: 2003ರಲ್ಲಿ ವಿಜಯಪುರದ ಹೊರವಲಯದ ‘ೂತನಾಳದಲ್ಲಿ 8.10 ಎಕರೆ ಜಾಗೆಯನ್ನು ಆಗಿನ ಸರಕಾರ ಅಂತಾರಾಷ್ಟ್ರೀಯ ಮಟ್ಟದ ವೆಲೋಡ್ರೊಮ್ ನಿರ್ಮಾಣಕ್ಕೆ ಮಂಜೂರು ಮಾಡಿ ಕ್ರೀಡಾ ಇಲಾಖೆಗೆ ಹಸ್ತಾಂತರಿಸಿತ್ತು. ಕಾಮಗಾರಿ ಪ್ರಾರಂಭಿಸಲು 2007ರಲ್ಲಿ 12ನೇ ಹಣಕಾಸು ಯೋಜನೆಯಡಿ ಅನುದಾನ ಬಿಡುಗಡೆ ಮಾಡಬೇಕೆಂದು ವಿಜಯಪುರ ಜಿಲ್ಲಾಡಳಿತ ಕ್ರೀಡಾ ಇಲಾಖೆಗೆ ಕೇಳಿಕೊಂಡಿತ್ತುಘಿ.
ಅದರಂತೆ ಅಕಾರಿಗಳ ತಂಡ ಹೈದ್ರಾಬಾದ್ ಹಾಗೂ ಪುಣೆ ವೆಲೋಡ್ರೊಮ್ ವೀಕ್ಷಣೆ ಮಾಡಿ, ಇಲ್ಲಿನ ವೆಲೋಡ್ರೊಮ್‌ಗೆ ಯೋಜನೆ ರೂಪಿಸಿ 2 ಕೋಟಿ ರೂ. ಅನುದಾನ ಬಿಡುಗಡೆ ಮಾಡಿತ್ತುಘಿ. ಆದರೆ 2008ರಲ್ಲಿ ಸದ್ದಿಲ್ಲದೇ ಇದನ್ನು ಬೆಂಗಳೂರಿಗೆ ಸ್ಥಳಾಂತರಿಸಲು ಕ್ರೀಡಾ ಇಲಾಖೆ ಅಕಾರಿಗಳೇ ಹುನ್ನಾರ ನಡೆಸಿದ್ದರು. ಬಹಳಷ್ಟು ವಿರೋ‘ದಿಂದಾಗಿ ಸ್ಥಳಾಂತರ ಕೈ ಬಿಡಲಾಯಿತು.
ನಂತರ ದಿನಗಳಲ್ಲಿ ಆಗಿನ ಕ್ರೀಡಾ ಸಚಿವ ಗೂಳಿಹಟ್ಟಿ ಶೇಖರ ವಿಜಯಪುರದಲ್ಲಿ ಮತ್ತೊಮ್ಮೆ ಶಿಲಾನ್ಯಾಸ ನೆರವೇರಿಸಿದರು. ಆದರೆ ಕಾಮಗಾರಿ ಮಾತ್ರ ನಡೆಯಲಿಲ್ಲಘಿ. 2015ರಲ್ಲಿ ಕಾಂಗ್ರೆಸ್ ಸರಕಾರ ಅಕಾರಕ್ಕೆ ಬಂದಾಗ ಆಗಿನ ಕ್ರೀಡಾ ಸಚಿವ ಅ‘ಯಚಂದ್ರ ಜೈನ ಮತ್ತೊಮ್ಮೆ ಮತ್ತೊಮ್ಮೆ ಶಂಕುಸ್ಥಾಪನೆ ನೆರವೇರಿಸಿದರು. ಅದಾದ ಎರಡು ವರ್ಷದ ನಂತರ ಬದಲಾದ ಕ್ರೀಡಾ ಸಚಿವ ಪ್ರಮೋದ ಮ‘್ವರಾಜ ಕಾಮಗಾರಿ ಪರಿಶೀಲನೆ ನಡೆಸಿ ಉದ್ಘಾಟನೆಗೆ ಬೇಗ ಸಿದ್ಧತೆ ಮಾಡಿ ಅಂದ್ರುಘಿ. ಆದರೆ ಆಗಲಿಲ್ಲಘಿ. ಮುಂದೆ ಮತ್ತೆ ಬಿಜೆಪಿ ಸರಕಾರ ಅಕಾರಕ್ಕೆ ಬಂದು ಆಗ ಕೆ.ಎಸ್.ಈಶ್ವರಪ್ಪ ಕೂಡ ಕಾಮಗಾರಿ ವೀಕ್ಷಿಸಿದರು. ಆದರೆ ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ನಡೆಸುವಂತಹ ಕ್ರೀಡಾಂಗಣ ಅದಾಗಲಿಲ್ಲಘಿ. ಹಾಗಾಗಿ ಬಾರಾಕಮಾನ್‌ದಂತೆ ನಿಂತು ಬಿಟ್ಟಿತ್ತುಘಿ.;
ಏಳು ಸಲ ಟೆಂಡರ್ಈ ವೆಲೋಡ್ರೊಮ್ ಕಾಮಗಾರಿ ನಡೆಸಲು ಒಂದಲ್ಲಘಿ, ಎರಡಲ್ಲ ಏಳು ಸಲ ಟೆಂಡರ್ ಕರೆಯಲಾಗಿತ್ತುಘಿ. ಆದರೆ ಮೊದಲು ಕ್ರೀಡಾ ಇಲಾಖೆ, ನಂತರ ಮತ್ತೊಂದು ಇಲಾಖೆ ಕಾಮಗಾರಿ ನಡೆಸಿತ್ತುಘಿ. ಅವುಗಳಿಂದಲೂ ಸಾ‘್ಯವಾಗಲಿಲ್ಲಘಿ. ಆ ನಂತರ ಶಿವಮೊಗ್ಗದ ಒಬ್ಬ ಗುತ್ತಿಗೆದಾರನಿಗೆ ಕಾಮಗಾರಿ ನೀಡಲಾಯಿತು. ಆದರೆ ಆತನಿಗೆ ಸರಿಯಾಗಿ ಹಣ ಬಿಡುಗಡೆ ಮಾಡದ ಕಾರಣ ಆತನೂ ಅ‘ರ್ಕ್ಕೆ ನಿಲ್ಲಿಸಿ ಹೋಗಿದ್ದಘಿ. ಆ ಮೇಲೆ ವಿಜಯಪುರದ ಅಂದಿನ ಜಿಲ್ಲಾಕಾರಿ ವೈಘಿ.ಎಸ್.ಪಾಟೀಲ ಮುತುವರ್ಜಿ ವಹಿಸಿ ಕ್ರೀಡಾ ಇಲಾಖೆ ಜತೆ ಸಂಪರ್ಕ ಸಾಸಿದ್ದರಿಂದ ಕೊನೆಗೂ ಈಗ ಕಾಮಗಾರಿ ಮುಗಿಯುವಂತಾಗಿದೆ. ಸೈಕ್ಲಿಸ್ಟ್‌ಗಳ ಆಸೆ ಕೊನೆಗೂ ಈಡೇರಿದಂತಾಗಿದೆ.
ಈ ದಿನಾಂಕವೂ ಮುಂದೆ ಹೋಗದೇ, ಆಗಸ್ಟ್ 15ಕ್ಕೆ ಉದ್ಘಾಟನೆಗೊಂಡು, ಸೈಕ್ಲಿಸ್ಟ್‌ಗಳ ತರಬೇತಿಗೆ ಹಾಗೂ ರಾಜ್ಯಘಿ, ರಾಷ್ಟ್ರಘಿ, ಅಂತಾರಾಷ್ಟ್ರೀಯ ಮಟ್ಟದ ಸೈಕ್ಲಿಂಗ್ ಸ್ಪರ್‘ೆ ನಡೆಸಲು ಅನುವು ಮಾಡಿಕೊಡಲಿ ಎಂಬುದು ಎಲ್ಲ ಸೈಕ್ಲಿಸ್ಟ್ ಒತ್ತಾಸೆ.