ಪ್ರಧಾನಿ ನರೇಂದ್ರ ಮೋದಿ ಇಂದು ಬಿಹಾರದಲ್ಲಿರುವ ಪಾಟ್ನಾ ಸಾಹಿಬ್ ಗುರುದ್ವಾರದಲ್ಲಿ ಸಿಖ್ಖರ ಪೇಟ ಧರಿಸಿ ನೂರಾರು ಮಂದಿಗೆ ಊಟ ಬಡಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ನೆಲದ ಮೇಲೆ ಕುಳಿತಿರುವ ಸಿಖ್ಖರಿಗೆ ಊಟ ಬಡಿಸಿದ್ದಾರೆ. ಗುರು ಗೋಬಿಂದ್ ಸಿಂಗ್ ಅವರ ಜನ್ಮಸ್ಥಳವಾಗಿ, ಈ ಗುರುದ್ವಾರವನ್ನು 18 ನೇ ಶತಮಾನದಲ್ಲಿ ಮಹಾರಾಜ ರಂಜಿತ್ ಸಿಂಗ್ ನಿರ್ಮಿಸಿದರು.
ಸಿಖ್ಖರ ಹತ್ತನೇ ಗುರು ಗುರು ಗೋಬಿಂದ್ ಸಿಂಗ್ 1666 ರಲ್ಲಿ ಪಾಟ್ನಾದಲ್ಲಿ ಜನಿಸಿದರು. ಆನಂದಪುರ ಸಾಹಿಬ್‌ಗೆ ಹೋಗುವ ಮೊದಲು ಅವರು ತಮ್ಮ ಆರಂಭಿಕ ವರ್ಷಗಳನ್ನು ಇಲ್ಲಿ ಕಳೆದರು.
ಪ್ರಧಾನಿ ನರೇಂದ್ರ ಮೋದಿ ಅವರು ಇಂದು ರಾಜ್ಯದ ಹಾಜಿಪುರ, ಮುಜಾಫರ್‌ಪುರ ಮತ್ತು ಸರನ್ ಕ್ಷೇತ್ರಗಳಲ್ಲಿ ಚುನಾವಣಾ ರ್ಯಾಲಿಗಳನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.
ಬಿಹಾರದಲ್ಲಿ ಮೋದಿ ರೋಡ್ ಶೋ ಕೂಡ ನಡೆಸಿದ್ದು, ಬಿಹಾರ ಮುಖ್ಯಮಂತ್ರಿ ನಿತೀಶ್ ಕುಮಾರ್, ಉಪಮುಖ್ಯಮಂತ್ರಿ ಮತ್ತು ರಾಜ್ಯ ಬಿಜೆಪಿ ಅಧ್ಯಕ್ಷ ಸಾಮ್ರಾಟ್ ಚೌಧರಿ ಮತ್ತು ಸ್ಥಳೀಯ ಸಂಸದ ರವಿಶಂಕರ್ ಪ್ರಸಾದ್ ಜೊತೆಗಿದ್ದರು.