This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Crime NewsNational NewsState News

ಕಾಲೇಜ್ ನಲ್ಲೆ ನೇಣಿಗೆ ಶರಣಾದ ಪ್ರಾಚಾರ್ಯ

ಕಾಲೇಜ್ ನಲ್ಲೆ ನೇಣಿಗೆ ಶರಣಾದ ಪ್ರಾಚಾರ್ಯ

ಬಾಗಲಕೋಟೆ :

ಹುನಗುಂದ ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಪದವಿ ಕಾಲೇಜಿನ ಪ್ರಾಂಶುಪಾಲರು ಕಾಲೇಜಿನ ಆವರಣದಲ್ಲೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಮಂಗಳವಾರ ನಡೆದಿದೆ.

೧೪ ವರ್ಷಗಳಿಂದ ಇಳಕಲ್ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸುತ್ತಿದ್ದ ಅವರು ಕಳೆದ ೬ ತಿಂಗಳ ಹಿಂದಷ್ಟೇ ಹುನಗುಂದಕ್ಕೆ ವರ್ಗವಾಗಿ ಬಂದಿದ್ದರು. ಕಾಲೇಜಿನಲ್ಲಿ ಮಂಗಳವಾರ ‌ಅದ್ಧೂರಿ ಜಾನಪದ ಉತ್ಸವ ಹಮ್ಮಿಕೊಳ್ಳಲಾಗಿದ್ದು, ನಾಗರಾಜ ಅವರು ಸೋಮವಾರ ಅತಿಥಿಗಳಿಗೆ ಆಹ್ವಾನ ಪತ್ರಿಕೆ ನೀಡಿ ಆಹ್ವಾನಿಸಿ ಬಂದಿದ್ದರು.

ಸೋಮವಾರ ಅವರು ಕಾಲೇಜಿನಲ್ಲೇ ವಾಸ್ತವ್ಯ ಮಾಡಿದ್ದು, ಮಂಗಳವಾರ ನಸುಕಿನ‌ ಜಾವ ಕಾಲೇಜಿನ ಮೆಟ್ಟಿಲುಗಳ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ. ಸಾವಿಗೆ ಕಾರಣ ತಿಳಿದು ಬಂದಿಲ್ಲ. ಹುನಗುಂದ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

";