This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Education NewsLocal NewsState News

ನೂತನ ಬಸ್ ಘಟಕ ಪರಿಶೀಲಿಸಿದ ಪ್ರೀಯಾಂಗಾ

ನೂತನ ಬಸ್ ಘಟಕ ಪರಿಶೀಲಿಸಿದ ಪ್ರೀಯಾಂಗಾ

ಬಾಗಲಕೋಟೆ:

ನವನಗರದಲ್ಲಿ ನೂತನವಾಗಿ ನಿರ್ಮಾಣಗೊಳ್ಳುತ್ತಿರುವ ಬಸ್ ಘಟಕಕ್ಕೆ ಹುಬ್ಬಳ್ಳಿ ವಾ.ಕ.ರ.ಸಾ ಸಂಸ್ಥೆಯ ಕೇಂದ್ರ ಕಚೇರಿಯ ವ್ಯವಸ್ಥಾಪಕ ನಿರ್ದೇಶಕಿ ಪ್ರೀಯಾಂಗಾ ಎಂ. ಬೇಟಿ ನೀಡಿ ಪರಿಶೀಲನೆ ನಡೆಸಿದರು.

ಜಿಲ್ಲೆಗೆ ಬೇಟಿ ನೀಡಿದ ಅವರು ನವನಗರದಲ್ಲಿರುವ ವಿಭಾಗೀಯ ಕಾರ್ಯಾಗಾರ, ಟೈರ್ ಸಂಸ್ಕರಣಾ ಘಟಕಗಳಿಗೆ ಭೇಟಿ ನೀಡಿ ವಾಹನಗಳ ದುರಸ್ಥಿ ಇತ್ಯಾದಿ ವಿಷಯಗಳ ಬಗ್ಗೆ ಪರಿಶೀಲನೆ ನಡೆಸಿದರು. ನಂತರ ವಿಭಾಗೀಯ ಉಗ್ರಾಣ ಶಾಖೆಗೆ ಭೇಟಿ ನೀಡಿದ ಅವರು ಉಗ್ರಾಣ ದಾಸ್ತಾನುಗಳ ನಿರ್ವಹಣೆ ವ್ಯವಸ್ಥೆ ತಂತ್ರಾಂಶ ಅನುಷ್ಠಾನದ ಕುರಿತಂತೆ ಮಾಹಿತಿ ಪಡೆದುಕೊಂಡರು.

ನವನಗರದಲ್ಲಿ ಅಪೂರ್ನವಾಗಿ ನಿರ್ಮಾಣಗೊಂಡ ವಾಣಿಜ್ಯ ಸಂಕೀರ್ಣದ ಕಟ್ಟಡಕ್ಕೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿದರು. ನಂತರ ಬಾಗಲಕೋಟೆ ಬಸ್ ನಿಲ್ದಾಣಕ್ಕೆ ಭೇಟಿ ನೀಡಿ ವಾಣಿಜ್ಯ ಮಳಿಗೆ, ನಮ್ಮ ಕಾರ್ಗೋ ಪಾರ್ಸಲ್ ಕೌಂಟರ್, ಸಾರಿಗೆ ನಿಯಂತ್ರಕರ ಬಿಂದುಗಳ ಕಾರ್ಯನಿರ್ವಹಣೆ ಕುರಿತು ಪರಿಶೀಲಿಸಿದರು. ಚಾಲಕ ಮತ್ತು ನಿರ್ವಾಹಕ ಹಾಗೂ ತಾಂತ್ರಿಕ ಸಿಬ್ಬಂದಿಗಳೊಂದಿಗೆ ಸಮಾಲೋಚನೆ ನಡೆಸಿದರು. ವಿಭಾಗೀಯ ಕಚೇರಿಯಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ವಿಭಾಗದ ಸರ್ವತೋಮುಖ ಬೆಳೆವಣಿಗೆ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು

ಭೇಟಿ ಸಮಯದಲ್ಲಿ ವಿಭಾಗೀಯ ನಿಯಂತ್ರಣಾಧಿಕಾರಿ ನಿತೀನ ಹೆಗಡೆ, ಡಿಟಿಓ ಪಡಿಯಪ್ಪ ಮೈತ್ರಿ, ಡಿಎಂಇ ಸಲೀಮ, ಘಟಕ ವ್ಯವಸ್ಥಾಪಕ ಎ.ಎ.ಕೋರಿ ಸೇರಿದಂತೆ ಇತರರು ಇದ್ದರು

";