ಕಲಬುರಗಿ: ನಗರದಲ್ಲಿಂದು ಸುದ್ದಿಗೋಷ್ಟಿ ನಡೆಸಿ ಮಾತಾಡಿದ ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ರಾಜ್ಯದಲ್ಲಿ ಬಿಜೆಪಿ ಒಂದು ಒಡೆದ ಮನೆಯಾಗಿದೆ ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕು ಮುರುಟಿ ಹೋಗುತ್ತಿದೆ ಎಂದು ಹೇಳಿದರು.
ತಮ್ಮ ಮನೆಯನ್ನು ನೇರಗೊಳಿಸಿಕೊಳ್ಳುವ ಬದಲು ಆದರ ನಾಯಕರು ಕಾಂಗ್ರೆಸ್ ಪಕ್ಷವನ್ನು ಟೀಕಿಸುತ್ತಿದ್ದಾರೆ . ಕೆಎಸ್ ಈಶ್ವರಪ್ಪ, ಡಿವಿ ಸದಾನಂದ ಗೌಡ ಮತ್ತು ಅನಂತಕುಮಾರ್ ಹೆಗಡೆ ಮೊದಲಾದವರು ರಾಜ್ಯದಲ್ಲಿ ಪಕ್ಷವು ಒಂದೇ ಕುಟುಂಬದ ಹಿಡಿತಕ್ಕೆ ಸಿಕ್ಕು ನಲುಗುತ್ತಿರುವುದರಿಂದ ಅದನ್ನು ಶುದ್ಧೀಕರಣ ಮಾಡಿ ಪುನಃ ಹೊಸದಾಗಿ ಕಟ್ಟಬೇಕಿದೆ ಎನ್ನುತ್ತಿದ್ದಾರೆ ಅಂತ ಹೇಳಿದರು.
ಬಿಜೆಪಿಗೆ ಲೋಕಸಭಾ ಚುನಾವಣೆಯಲ್ಲಿ ಹೇಳಿಕೊಳ್ಳಲು ಏನೂ ಇಲ್ಲ, ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದನ್ನೇ ಅವರು ತಮ್ಮ ಪ್ರಚಾರದ ಅಸ್ತ್ರವಾಗಿಸಿಕೊಂಡಿದ್ದಾರೆ. ಯಾವುದೇ ಸಾಧನೆ ಮಾಡದ ಕಾರಣ ಮತ್ತೇ ಧರ್ಮ ಮತ್ತು ದೇವರ ಮೇಲೆ ವೋಟು ಕೇಳುತ್ತಿದ್ದಾರೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.
ಸಿಟಿ ರವಿ, ಬಸನಗೌಡ ಪಾಟೀಲ್ ಯತ್ನಾಳ್ ಮತ್ತು ಪ್ರತಾಪ್ ಸಿಂಹ ಮುಂತಾದವರು ಹಿಂದೂತ್ವವನ್ನು ಪ್ರತಿಪಾದಿಸುವ ನಾಯಕರಿಗೆ ಕವಡೆಕಾಸಿನ ಕಿಮ್ಮತ್ತು ಸಿಗುತ್ತಿಲ್ಲ ಎಂದು ಹಲುಬುತ್ತಿದ್ದಾರೆ ಎಂದು ಖರ್ಗೆ ಹೇಳಿದರು.