ಬೆಂಗಳೂರು: ಇಡೀ ರಾಜ್ಯವೇ ಬಹಳ ಕುತೂಹಲದಿಂದ ನಿರೀಕ್ಷಿಸುತ್ತಿದ್ದ ಜಾತಿ ಗಣತಿ ವರದಿಯನ್ನು ಹಿಂದುಳಿದ ವರ್ಗಗಳ ಅಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗಡೆ ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಸಲ್ಲಿಸಿದ್ದಾರೆ ಎಂದು ಮಾಹಿತಿ ತಿಳಿದು ಬಂದಿದೆ.
ವರದಿಯ ಸಲ್ಲಿಕೆ ಮತ್ತು ಅದರಲ್ಲಿರುವ ಶಿಫಾರಸ್ಸುಗಳ ಬಗ್ಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಟಿವಿ9 ವರದಿಗಾರ ಕೇಳಿದಾಗ, ಈಗಷ್ಟೇ ವರದಿ ಸಲ್ಲಿಕೆಯಾಗುತ್ತಿದೆ, ಅದರಲ್ಲಿರುವ ಮಾಹಿತಿ, ದತ್ತಾಂಶಗಳ ಬಗ್ಗೆ ಏನೂ ಗೊತ್ತಿಲ್ಲ, ಮೊದಲಿಗೆ ವರದಿಯಲ್ಲಿ ಏನಿದೆ ಅಂತ ನೋಡಬೇಕು, ಅದನ್ನು ಅಧ್ಯಯನ ಮಾಡಿದ ಬಳಿಕವೇ ಅಭಿಪ್ರಾಯಗಳನ್ನು ತಿಳಿಸಬಹುದು ಎಂದರು.
ಕಾಂಗ್ರೆಸ್ ಪಕ್ಷದ ನಾಯಕರ್ಯಾರೂ ವರದಿಯನ್ನು ಅವೈಜ್ಞಾನಿಕ ಅಂತ ಹೇಳಿಲ್ಲ, ಆದರೆ ಅದರಲ್ಲಿ ಹೇಳಿರುವ ಸಂಗತಿಗಳನ್ನು ವೈಜ್ಞಾನಿಕ ದೃಷ್ಟಿಕೋನದಿಂದ ಪರಾಮರ್ಶೆ ಅಥವಾ ವೈಜ್ಞಾನಿಕ ತಿದ್ದುಪಾಟುಗಳನ್ನು ಮಾಡುವುದು ಸಾಧ್ಯವೇ ಅಂತ ಹೇಳಿದ್ದಾರೆ. ಜನಸಂಖ್ಕೆಯ ಆಧಾರದ ಮೇಲೆ ಹಕ್ಕು ಹಂಚುವುದರ ಬಗ್ಗೆ ತಮ್ಮ ನಾಯಕರ ತಕಾರಾರಿಲ್ಲ ಎಂದು ಹೇಳಿದರು.