ಬಾಗಲಕೋಟೆ
ಪ್ರವಾಸೋದ್ಯಮ ಇಲಾಖೆಯಿಂದ ಜಾರಿಗೊಡಿರುವ ಪ್ರವಾಸಿಮಿತ್ರ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರವಾಸಿಮಿತ್ರರಿಗೆ ಉದ್ಯೋಗ ಭದ್ರತೆ ಒದಸಿಗಬೇಕು ಎಂದು ಪ್ರವಾಸಿಮಿತ್ರ ಕ್ಷೇಮಾಭಿವೃದ್ಧಿ ಅಸೋಸಿಯೇಷನ್ ಸಂಘದಿAದ ಪ್ರವಾಸೋದ್ಯಮ ಸಚಿವರಿಗೆ ಮನವಿ ಸಲ್ಲಿಸಲಾಯಿತು.
ಜಿಲ್ಲೆಯ ಹುನಗುಂದ ತಾಲೂಕಿನ ಶಿಲ್ಪಕಲೆಯ ತೊಟ್ಟಿಲು ಐಹೊಳೆ ಸ್ಮಾರಕಗಳ ವೀಕ್ಷಣೆಗೆ ಆಗಮಿಸಿದ ಪ್ರವಾಸೋದ್ಯಮ ಸಚಿವ ಎಚ್.ಕೆ.ಪಾಟೀಲ ಅವರನ್ನು ಸಂಘದಿಂದ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ಸಮಿತಿ ರಾಜ್ಯಾಧ್ಯಕ್ಷ ಕೆ.ಹನಮಂತರೆಡ್ಡಿ, ೨೦೧೫-೧೬ರಿಂದ ಪ್ರವಾಸಿ ತಾಣಗಳ ರಕ್ಷಣೆ ನಿಟ್ಟಿನಲ್ಲಿ ಆರಂಭವಾದ ಈ ಯೋಜನೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪ್ರವಾಸಿ ಮಿತ್ರರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದರು.
ತಾವು ಇಲಾಖೆ ಸಚಿವರಾದ ನಂತರ ಕೆಲ ಸೌಲಭ್ಯಗಳನ್ನು ಒದಗಿಸಿದ್ದೀರಿ. ಆದರೂ ಈವರೆಗೆ ಉದ್ಯೋಗ ಭದ್ರತೆ ಸೇರಿದಂತೆ ಕೆಲ ಸೌಲಭ್ಯಗಳು ದೊರೆಯುತ್ತಿಲ್ಲ. ಸಚಿವರು ಮುತುವರ್ಜಿ ವಹಿಸಿ ಬದಲಾವಣೆಗೆ ಕಾಣದೆ ಅಂತ್ಯವಾಗುವ ಪರಿಸ್ಥಿತಿಗೆ ಬಂದೊದಗಿದ ಪ್ರವಾಸಿಮಿತ್ರರ ಕುಟುಂಬಕ್ಕೆ ಭದ್ರತೆ ಒದಗಿಸುವ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಸಂಘದ ಕಾರ್ಯದರ್ಶಿ ಗಂಗಾಧರ, ಸುನಿತಾ, ಶಕುಂತಲಾ, ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ತುಮ್ಮರಮಟ್ಟಿ, ಪ್ರಕಾಶ, ಯಮನಪ್ಪ ಭಜಂತ್ರಿ ಇತರರು ಇದ್ದರು.