This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Agriculture NewsLocal NewsState News

ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಮತ್ತು ಹೆಸರು ಉತ್ಪನ್ನಗಳ ಖರೀದಿ

ಬೆಂಬಲ ಬೆಲೆಯಲ್ಲಿ ಸೂರ್ಯಕಾಂತಿ ಮತ್ತು ಹೆಸರು ಉತ್ಪನ್ನಗಳ ಖರೀದಿ

ಬಾಗಲಕೋಟೆ:

ಕೇಂದ್ರ ಸರಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕ್ರಾಂತಿ ಉತ್ಪನ್ನಕ್ಕೆ ಪ್ರತಿ ಕ್ವಿಂಟಲ್‍ಗೆ 7280 ರೂ. ಹಾಗೂ ಹೆಸರುಕಾಳು ಪ್ರತಿ ಕ್ವಿಂಟಲ್‍ಗೆ 8682 ರೂ.ಗಳಂತೆ ಖರೀದಿ ಮಾಡಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ತಿಳಿಸಿದ್ದಾರೆ.

ಈ ಕುರಿತು ಪ್ರಕಟಣೆಯಲ್ಲಿ ತಿಳಿಸಿದ ಅವರು ಸೂರ್ಯಕ್ರಾಂತಿ ಉತ್ಪನ್ನವನ್ನು ಪ್ರತಿ ಎಕರೆಗೆ 3 ಕ್ವಿಂಟಲ್‍ನಂತೆ ಪ್ರತಿ ರೈತರಿಂದ ಗರಿಷ್ಟ ಪ್ರಮಾಣ 15 ಕ್ವಿಂಟಲ್ ಖರೀದಿಸಲಾಗುತ್ತದೆ. ಖರೀದಿ ಹಾಗೂ ನೋಂದಣಿ ಪ್ರಕ್ರಿಯೆ ಆಗಸ್ಟ 27 ರಿಂದ ಪ್ರಾರಂಭಿಸಲಾಗಿದ್ದು, ಪ್ರಾರಂಭದಿಂದ 45 ದಿನಗಳವರೆಗೆ ರೈತರು ನೋಂದಣಿ ಮಾಡಿಕೊಳ್ಳಬಹುದು. ಖರೀದಿ ಅವಧಿಯನ್ನು 90 ದಿನಗಳವರೆಗೆ ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.
ಹೆಸರುಕಾಳು ಉತ್ಪನ್ನವನ್ನು ಪ್ರತಿ ಎಕರೆಗೆ 2 ಕ್ವಿಂಟಲ್ ಮತ್ತು ಗರಿಷ್ಠ ಪ್ರಮಾಣ ಪ್ರತಿ ರೈತರಿಂದ 10 ಕ್ವಿಂಟಲ್ ಖರೀದಿಸಲಾಗುತ್ತದೆ. ರೈತರ ನೋಂದಣಿ ಕಾರ್ಯ 45 ದಿನಗಳ ವರೆಗೆ ಹಾಗೂ ಖರೀದಿ ಅವಧಿಯನ್ನು 90 ದಿನಗಳವರೆಗೆ ನಿಗಧಿಪಡಿಸಲಾಗಿದೆ. ನೋಂದಣಿ ಕಾರ್ಯದ ಜೊತೆಗೆ ಖರೀದಿ ಪ್ರಕ್ರಿಯೆ ಪ್ರಾರಂಭಿಸಲಾಗುತ್ತದೆ.

ಹೆಸರುಕಾಳು ಗುಣಮಟ್ಟದ ಪ್ರಕಾರ ಪ್ರತಿ ಕ್ವಿಂಟಲ್ ತೂಕದಲ್ಲಿ ಧೂಳು, ಹರಳು, ಹೊಟ್ಟು ಶೇ.2, ಬೆರೆಕೆ ಮಿಶ್ರಣ ಶೇ.3, ಹಾಳಾದ ಕಾಳುಗಳು ಶೇ.3, ಒಡೆದ ಕಾಳುಗಳು ಶೇ.4, ಅಪೂರ್ಣ ಮತ್ತು ಕುಗ್ಗಿದ ಕಾಳುಗಳು ಶೇ.3, ಹುಳುಕಾದ ಕಾಳುಗಳು ಶೇ.4 ಹಾಗೂ ತೇವಾಂಶ ಶೇ.12 ಇರುತ್ತದೆ.

ಜಿಲ್ಲೆಯಲ್ಲಿ ಸ್ಥಾಪಿಸಲಾದ ಖರೀದಿ ಕೇಂದ್ರಗಳಲ್ಲಿ ರೈತರು ನೋಂದಣಿ ಮಾಡಿಕೊಳ್ಳಲು ಕೃಷಿ ಇಲಾಖೆಯಿಂದ ನೀಡಿರುವ ಎಫ್.ಐ.ಡಿ ನಂಬರ ಮತ್ತು ಆಧಾರ ಕಾರ್ಡನ್ನು ನೀಡಿ ನೋಂದಾಯಿಸತಕ್ಕದ್ದು, ಒಂದು ವೇಳೆ ಬೆಳೆ ದರ್ಶಕದಲ್ಲಿ ಮತ್ತು ಪ್ರೂಟ್ಸ್ ತಂತ್ರಾಂಶದಲ್ಲಿ ಬೆಳೆ ಬೆಳೆಯುವುದು ಕಂಡು ಬರದೇ ಇದ್ದಲ್ಲಿ ಹತ್ತಿರದ ಕೃಷಿ ಇಲಾಖೆಗೆ ಹೋಗಿ ಆಕ್ಷೇಪಣೆ ಸಲ್ಲಿಸಿ ಸರಿಪಡಿಸಿಕೊಳ್ಳಬಹುದಾಗಿದೆ. ನೋಂದಣಿ ಸಮಯದಲ್ಲಿ ಆಧಾರ ಕಾರ್ಡ, ಪಹಣಿ ಪತ್ರಿಕೆ, ಆಧಾರ ಲಿಂಕ ಆಗಿರುವ ರಾಷ್ಟ್ರೀಕೃತ ಬ್ಯಾಂಕಿನ ಪಾಸಬುಕ್ಕ ಪ್ರತಿ ಸಲ್ಲಿಸಬೇಕು.

*ಖರೀದಿ ಕೇಂದ್ರಗಳ ವಿವಿರ (ಸೂರ್ಯಕಾಂತಿ)*
————————————
ಬಾಗಲಕೋಟೆ ತಾಲೂಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಖಜ್ಜಿಡೋಣಿ, ಬಾದಾಮಿ ತಾಲೂಕ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಕಗಲಗೊಂಬ, ಕೆಂದೂರ, ನಂದಿಕೇಶ್ವರ, ಹೆಬ್ಬಳ್ಳಿ, ಮುಧೋಳ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಜುನ್ನೂರ, ಬೀಳಗಿ ತಾಲೂಕಿನ ಎಣ್ಣೆ ಬೀಜ ಬೆಳೆಗಾರರ ಸಹಕಾರಿ ಸಂಘ ಸೊನ್ನ ಹಾಗೂ ಹುನಗುಂದ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದಲ್ಲಿ ಖರೀದಿ ಕೇಂದ್ರ ತೆರೆಯಲಾಗಿದೆ.
*

ಖರೀದಿ ಕೇಂದ್ರಗಳ ವಿವಿರ (ಹೆಸರುಕಾಳು)*
———————————-
ಬಾಗಲಕೋಟೆ ತಾಲೂಕಿನಲ್ಲಿ ಟಿ.ಎ.ಪಿ.ಸಿ.ಎಂ.ಎಸ್ ಬಾಗಲಕೋಟೆ (7353861868), ಪಿ.ಕೆ.ಪಿ.ಎಸ್ ಹಳ್ಳೂರು (9901325201), ಬೆನಕಟ್ಟಿ (9740406918), ಎಫ್.ಪಿ.ಒ ರೇಣುಕಾ, ಬಾದಾಮಿ ತಾಲೂಕಿನ ಟಿ.ಎ.ಪಿ.ಸಿ. ಬಾದಾಮಿ (9008116746), ಪಿ.ಕೆ.ಪಿ.ಎಸ್ ಬಾದಾಮಿ (9611358837), ಕೆರೂರ (9972301729), ಎಫ್‍ಪಿ.ಒ ಆಶಾಕಿರಣ (8073983080), ಮುಧೋಳ ತಾಲೂಕಿನ ಟಿ.ಎ.ಪಿ.ಎಂ.ಎಸ್ ಮುಧೋಳ (9242783318), ಎಫ್‍ಪಿಓ ಲೋಕಾಪೂರ (9880927310), ಎಫ್‍ಪಿಓ ಸರ್ವಬಂಧು (9844474344), ಇಳಕಲ್ಲ ಜಿ.ಎಫ್,ಪಿ.ಸಿ.ಎಲ್ (8660203311), ಹುನಗುಂದ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಹುನಗುಂದ (9480262655), ಎಫ್‍ಪಿಒ ಸುಳೇಭಾವಿ (9449762433, 9008215922), ಪಿ.ಕೆ.ಪಿ.ಎಸ್ ಮುಗನೂರ (8310324070) ನಂದವಾಡಗಿ (9902377067), ಜಮಖಂಡಿ ತಾಲೂಕಿನ ಟಿ.ಎ.ಪಿ.ಸಿ.ಎಂ.ಎಸ್ ಜಮಖಂಡಿ (7019445935), ಎಫ್‍ಪಿಒ ತೊದಲಬಾಗಿ (9741998771), ಬೀಳಗಿ ಟಿ.ಎ.ಪಿ.ಸಿ.ಎಂ.ಎಸ್ (7019682890), ಪಿ.ಕೆ.ಪಿ.ಎಸ್ ಬೀಳಗಿ ಕ್ರಾಸ್ (9880376768).

";