ಬಾಗಲಕೋಟೆ: ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರಕಾರ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಬಿಳಿಜೋಳ (ಮಾಲದಂಡಿ) ಉತ್ಪನ್ನವನ್ನು ಪ್ರತಿ ಕ್ವಿಂಟಲ್‍ಗೆ 3225 ರೂ.ಗಳಂತೆ ಹಾಗೂ ಬಿಳಿಜೋಳ (ಹೈಬ್ರಡ್) ಪ್ರತಿ ಕ್ವಿಂಟಲ್‍ಗೆ 3180 ರೂ.ಗಳಂತೆ ಖರೀದಿಸಲಾಗುತ್ತಿದೆ ಎಂದು ಜಿಲ್ಲಾಧಿಕಾರಿ ಜಾನಕಿ ಕೆ.ಎಂ ಹೇಳಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ ಅವರು ಪ್ರತಿ ರೈತರಿಂದ ಪ್ರತಿ ಎಕರೆಗೆ 10 ಕ್ವಿಂಟಲ್ ಜೋಳವನ್ನು ಖರೀದಿಸಲಾಗುತ್ತಿದೆ. ಖರೀದಿಗೆ ನೊಂದಣಿ ಕಾರ್ಯ 1, ಜನವರಿ 2024 ರಿಂದ ಮಾರ್ಚ 31 ವರೆಗೆ ಕೈಗೊಳ್ಳಲಾಗುತ್ತಿದೆ. ಕೆ.ಎಫ್.ಸಿ.ಎಸ್.ಸಿ ಖರೀದಿ ಏಜೇನ್ಸಿಯಾಗಿದ್ದು, ರೈತರು ನೋಂದಣಿ ಕಾರ್ಯವನ್ನು ಕೈಗೊಳ್ಳುತ್ತಾರೆ. ನೋಂದಣಿ ಮತ್ತು ಖರೀದಿ ಕೇಂದ್ರಗಳಲ್ಲಿ ಆನ್‍ಲೈನ್ ಮುಖಾಂತರ ಮಾಡಲಾಗುತ್ತದೆ. ಖರೀದಿ ಕೇಂದ್ರಗಳಲ್ಲಿ ಕೃಷಿ ಇಲಾಖೆಯಿಂದ ಪಡೆದಿರುವ ಫ್ರೂಟ್ಸ್ ಐಡಿ, ಆಧಾರ ಕಾರ್ಡ, ಚಾಲ್ತಿಯಲ್ಲಿರುವ ಬ್ಯಾಂಕ್ ಖಾತೆಯ ಪಾಸ್‍ಬುಕ್ ಝರಾಕ್ಸ್ ಪ್ರತಿಯೊಂದಿಗೆ ನೊಂದಣಿ ಮಾಡಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಆಯಾ ತಾಲೂಕಿನ ಕೆ.ಎಫ್.ಸಿ.ಎಸ್.ಸಿ ವ್ಯವಸ್ಥಾಪಕರು ಸಂಪರ್ಕಿಸಬಹುದಾಗಿದೆ.
*ಖರೀದಿ ಕೇಂದ್ರಗಳ ವಿವರ*
ಬಾಗಲಕೋಟೆ ಎ.ಪಿ.ಎಂ.ಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಹುನಗುಂದ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಇಲಕಲ್ಲ ಎಪಿಎಂಸಿ ಉಪ ಮಾರುಕಟ್ಟೆ ಪ್ರಾಂಗಣ, ಬಾದಾಮಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ಗುಳೇದಗುಡ್ಡ ಹೊಳೆಬಸು ಶೆಟ್ಟರ ಗೋದಾಮು, ಬೀಳಗಿ ಟಿ.ಎ.ಪಿ.ಎಂ.ಎಸ್ ಗೋದಾಮು, ಜಮಖಂಡಿ ಎಪಿಎಂಸಿ ಮುಖ್ಯ ಮಾರುಕಟ್ಟೆ ಪ್ರಾಂಗಣ, ರಬಕವಿ-ಬನಹಟ್ಟಿ, ಅನಗಂಡಿ, ತೇರದಾಳ ರಸ್ತೆಯಲ್ಲಿರುವ ಕೆ.ಎಫ್.ಸಿ.ಎಸ್.ಸಿ ವ್ಯವಸ್ಥಾಪಕರು, ಮುಧೋಳ ವ್ಯವಸ್ಥಾಪಕರು ಕೆ.ಎಫ್.ಸಿ.ಎಸ್.ಸಿ ಕೇಂದ್ರಗಳಲ್ಲಿ ನೋಂದಣಿ ಮಾಡಿಸುವಂತೆ ಜಿಲ್ಲಾಧಿಕಾರಿಗಳು ತಿಳಿಸಿದ್ದಾರೆ.