ಬಾಗಲಕೋಟೆ
ಕಡಿಮೆ ದರದಲ್ಲಿ ಗುಣಮಟ್ಟದ ಔಷಧ ದೊರೆಯುವಂತಾಗಲೆAದು ದೇಶಾದ್ಯಂತ ಜನ ಔಷಧ ಕೇಂದ್ರ ತೆರೆಯಲಾಗಿದ್ದು ಇನ್ನೂ 25 ಸಾವಿರ ಕೇಂದ್ರಗಳನ್ನು ಆರಂಭಿಸುವ ಉದ್ದೇಶ ಹೊಂದಲಾಗಿದೆ ಎಂದು ಸಂಸದ ಪಿ.ಸಿ.ಗದ್ದಿಗೌಡರ ಹೇಳಿದರು.
ನವನಗರದ ಬಿಜೆಪಿ ಜಿಲ್ಲಾ ಕಚೇರಿಯಲ್ಲಿ ಶುಕ್ರವಾರ ನಡೆದ ಜನ ಔಷಧ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಡವರಿಗೆ ಕೈಗೆಟುಕುವ ದರದಲ್ಲಿ ಔಷಧ ಲಭ್ಯವಾಗಬೇಕು. ಔಷಧದ ಕೊರತೆಯಿಂದ ಪ್ರಾಣ ಕಳೆದುಕೊಳ್ಳಬಾರದು ಎಂಬ ಉದ್ದೇಶದಿಂದ ದೇಶಾದ್ಯಂತ ಜನ ಔಷಧ ಕೇಂದ್ರ ತೆರೆಯಲಾಗಿದೆ. ಜಿಲ್ಲೆಯಲ್ಲಿ ಕೇಂದ್ರಗಳಲ್ಲೂ ಗುಣಮಟ್ಟದ ಔಷಧ ಲಭ್ಯವಿವೆ ಎಂದರು.
ರಾಜ್ಯಸಭಾ ಸದಸ್ಯ ನಾರಾಯಣಸಾ ಭಾಂಡಗೆ, ವೈದ್ಯರು ಸಹ ಜನ ಔµಧ ಕೇಂದ್ರಗಳಲ್ಲಿ ಔಷಧ ತೆಗೆದುಕೊಳ್ಳಲು ಸಲಹೆ ನೀಡುತ್ತಿದ್ದಾರೆ. ಜನ ಔಷಧ ಕೇಂದ್ರಗಳು ಬಡವರಿಗೆ ಆಶಾದಾಯಕವಾಗಿವೆ ಎಂದು ಹೇಳಿದರು.
ಮಾಜಿ ಶಾಸಕ ವೀರಣ್ಣ ಚರಂತಿಮಠ, ಸಹಾಯಕ ಔಷಧ ನಿಯಂತ್ರಕ ಶರಣಬಸಪ್ಪ ಸೋಮನಾಳ, ಔಷಧ ಪರಿವೀಕ್ಷಕ ಅರುಣ ಕಟಾರೆ, ಬಸವರಾಜ ಹುನಗುಂದ, ಶಿವಲಿಂಗ ನಿಂಗನೂರ, ಈಶ್ವರ ಆಲದಿ, ಶ್ರೀಧರ ಕವಟಗಿ, ಶಿವಪ್ರಕಾಶ ಅಲದಿ, ನಾಗಾರಾಜ ಗಚ್ಚಿ, ನಾಗೇಶ ರಾಯ್ಕರ, ಈಶ್ವರ ಮುತ್ತುರ, ಶ್ರೀಕಾಂತ ಭಾವಿ, ಶಶಿಧರ ಉದ್ನೂರ, ಸಿದ್ದು ಮೇಟಿ ಇತರರಿದ್ದರು.