ಬೆಂಗಳೂರು : ರಾಜ್ಯದಲ್ಲಿ ಕುಡಿಯುವ ನೀರಿಗೆ ಹಾಹಾಕಾರ ಎಲ್ಲೆಡೆ ತಲೆದೋರಿರುವ ಕಾರಣ ರಾಜ್ಯ ಸರ್ಕಾರ ತ್ವರಿತವಾಗಿ ಪ್ರತಿ ಗ್ರಾಮ ಪಂಚಾಯತಿಗೆ ತಲಾ 10 ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕೆಂದು ವಿಧಾನಸಭೆಯ ವಿಪಕ್ಷ ನಾಯಕ ಆರ್.ಅಶೋಕ್ ಆಗ್ರಹಿಸಿದರು.
ವಿಧಾನಸಭೆಯ ಕಲಾಪದಲ್ಲಿ ಕುಡಿಯುವ ನೀರಿನ ಅಭಾವ ಕುರಿತು ನಿಲುವಳಿ ಸೂಚನೆ ಪ್ರಸ್ತಾವ ಮಂಡಿಸಿ, ರಾಜ್ಯ ವ್ಯಾಪಿ ಬೇಸಿಗೆ ಆರಂಭ ಮುನ್ನವೇ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಹಲವು ಗ್ರಾಮಗಳಲ್ಲಿ ನೀರಿ ಸಮಸ್ಯೆಯಿಂದ ಬೇಸತ್ತು ಗ್ರಾಮಸ್ಥರು ಗುಳೆ ಹೊರಟಿರುವ ಉದಾಹರಣೆಗಳಿವೆ ಎಂದರು.
ಮುಂದಿನ ನಾಲ್ಕೈದು ತಿಂಗಳು ಪ್ರತಿ ಗ್ರಾಮ ಪಂಚಾಯತಿಗೆ ತಲಾ 10 ಲಕ್ಷ ರೂಪಾಯಿ ಬಿಡುಗಡೆ ಮಾಡಬೇಕೆಂದು ಒತ್ತಾಯಿಸಿದ್ದು, ಆರ್ ಎಸ್, ಭದ್ರ ಅಣೆಕಟ್ಟು ಸೇರಿದಂತೆ ಹಲವು ಕಡೆಗಳಲ್ಲಿ ಶೇಖರಣೆ ಆಗಿರುವ ನೀರಿನ ಪ್ರಮಾಣ ಇಳಿಕೆಯಾಗುತ್ತಿದೆ. ಈಗಾಗಲೇ ತಜ್ಞರು ಆತಂಕ ವ್ಯಕ್ತಪಡಿಸಿದ್ದು, ಮುಂದಿನ ತಿಂಗಳು ತಾಪಮಾನ ಏರಿಕೆಯಾಗಿ ಇನ್ನಷ್ಟು ನೀರು ಖಾಲಿ ಆಗುವ ಸಂಭವ ಇದೆ.ಹೀಗಾಗಿ, ಸರ್ಕಾರ ಎಚ್ಚತ್ತು ಕ್ರಮ ಕೈಗೊಳ್ಳುವಂತೆ ತಿಳಿಸಿದರು.