ಬೆಂಗಳೂರು: ದೆಹಲಿಯಲ್ಲಿ ನಡೆಯುತ್ತಿರುವ ರೈತರ ಪ್ರತಿಭಟನೆ ಕಾಂಗ್ರೆಸ್ ಪೋಷಿತವಾಗಿದ್ದು, ಹಿಂದಿನಂತೆಯೇ ಟೂಲ್‌ಕಿಟ್‌ನ ಒಂದು ಭಾಗವಾಗಿದೆ ಎಂದು ವಿಧಾನಸಭೆಯ ಪ್ರತಿಪಕ್ಷ ನಾಯಕ ಆರ್. ಅಶೋಕ್ ಹೇಳಿದರು.
ಈ ಕುರಿತು ಮಾತನಾಡಿದ ಅವರು, ಈ ಹಿಂದೆ ಕೇಂದ್ರ ಸರ್ಕಾರ ಜಾರಿ ಮಾಡಿದ್ದ ಕೃಷಿ ಮಸೂದೆಗಳ ವಿಚಾರದಲ್ಲೂ ಕಾಂಗ್ರೆಸ್ ಇದೇ ಟೂಲ್‌ಕಿಟ್ ತಂತ್ರವನ್ನು ಅನುಸರಿಸಿದ್ದು, ಹಿಂದಿನ ಯುಪಿಎ ಸರ್ಕಾರಕ್ಕಿಂತ ಹೆಚ್ಚು ನೆರವನ್ನು ರೈತರಿಗೆ ಪ್ರಧಾನಿ ನರೇಂದ್ರ ಮೋದಿ ನೀಡಿದ್ದು, ರಾಜ್ಯದ ಕಾಂಗ್ರೆಸ್ ಸರ್ಕಾರ ಹಿಂದಿನ ಬಿಜೆಪಿ ಸರ್ಕಾರ ತಂದಿದ್ದ ರೈತ ಪರ ಯೋಜನೆಗಳನ್ನು ಸ್ಥಗಿತಗೊಳಿಸಿದೆ.
ರೈತ ವಿರೋಧಿ ಮನೋಭಾವದ ಕಾಂಗ್ರೆಸ್ ಈಗ ಪ್ರತಿಭಟನೆಯ ನಾಟಕ ಶುರು ಮಾಡಿದೆ. ರೈತರಿಗೆ ಕನಿಷ್ಠ ಬೆಂಬಲ ಬೆಲೆಯ ಗ್ಯಾರಂಟಿ ನೀಡುತ್ತೇವೆಂದು ಕಾಂಗ್ರೆಸ್ ಬುರುಡೆ ಬಿಟ್ಟಿದೆ. 2010 ರಲ್ಲಿ ತಮ್ಮದೇ ಯುಪಿಎ ಸರ್ಕಾರ ಇದ್ದಾಗ ಡಾ. ಎಂ. ಎಸ್. ಸ್ವಾಮಿನಾಥನ್ ಅವರು ಕನಿಷ್ಠ ಬೆಂಬಲ ಬೆಲೆ ಬಗ್ಗೆ ನೀಡಿದ್ದ ವರದಿಯನ್ನು ಸಾರಾಸಗಟಾಗಿ ತಿರಸ್ಕಾರ ಮಾಡಿತ್ತು ಎಂದು ತಿಳಿಸಿದರು.