ಬಾಗಲಕೋಟೆ
ಉತ್ತಮ ಆರೋಗ್ಯಕ್ಕಾಗಿ ಚಿಕಿತ್ಸೆಯ ಜೊತೆಗೆ ಜನರಲ್ಲಿ ಅರಿವು ಮೂಡಿಸುವುದು ಅಗತ್ಯವಾಗಿದ್ದು ರೇಡಿಯೋ ಕನ್ನಡಿ ಮತ್ತು ನೆರಳಿನಂತೆ ಸಮಾಜಮುಖಿಯಾಗಿ ದಶಕಗಳಿಂದ ಕಾರ್ಯನಿರ್ವಹಿಸುತ್ತಿದೆ ಎಂದು ಬಸವೇಶ್ವರ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯ ಎಸ್.ಆರ್.ಮುಗನೂರಮಠ ಹೇಳಿದರು.
ನಗರದ ಬಿವಿವ ಸಂಘದ ಹೋಮಿಯೋಪಥಿ ವೈದ್ಯಕೀಯ ಮಹಾವಿದ್ಯಾಲಯ ಮತ್ತು ಆಸ್ಪತ್ರೆ ವತಿಯಿಂದ ಹಮ್ಮಿಕೊಳ್ಳಲಾದÀ ಸಂಪೂರ್ಣ ಆರೋಗ್ಯಕ್ಕಾಗಿ ಹೋಮಿಯೋಪಥಿ ರೇಡಿಯೋ ಸಂವಾದ ಮತ್ತು ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭದ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಹೋಮಿಯೋಪಥಿಯು ಭಾರತ ಜಗತ್ತಿಗೆ ನೀಡಿದ ವೈದ್ಯ ಪದ್ಧತಿಯಾಗಿದ್ದು ೧೨ನೇ ಶತಮಾನದಲ್ಲಿಯೇ ವೈದ್ಯ ಸಂಗಣ್ಣ ತನ್ನ ವಚನದಲ್ಲಿ ಜೀವನಕ್ರಮ ಮತ್ತು ದೇಹದ ಆರೋಗ್ಯದ ಕುರಿತು ಉಲ್ಲೇಖಿಸಿದ್ದು ಗಮನಾರ್ಹ ಸಂಗತಿ ಎಂದರು.
ಕೊರೊನಾದಂತಹ ಸಂದರ್ಭದಲ್ಲಿ ಮಾದ್ಯಮಗಳು ಮತ್ತು ವೈದ್ಯರು ಸಮಾಜಮುಖಿಯಾಗಿ ಕಾರ್ಯನಿರ್ವಹಿಸಿದ್ದು ಅದರಲ್ಲಿ ರೇಡಿಯೋ ಪಾತ್ರವು ದೊಡ್ಡದು. ಬಾನುಲಿಗಳಲ್ಲಿ ಬೇರೆ ಬೇರೆ ಕ್ಷೇತ್ರಗಳ ಕುರಿತು ಇಂದಿಗೂ ಜಾಗೃತಿ ಮತ್ತು ಮಾಹಿತಿ ನೀಡುವಲ್ಲಿ ಪರಿಣಾಮಕಾರಿ ಸಮೂಹ ಮಾದ್ಯಮವಾಗಿದೆ ಎಂದು ಹೇಳಿದರು.
ಬಿಇಸಿ ಧ್ವನಿ ಸಮುದಾಯ ಬಾನುಲಿ ಕೇಂದ್ರದ ವ್ಯವಸ್ಥಾಪಕ ಭರತ ಬಡಿಗೇರ, ಸಮುದಾಯ ಬಾನುಲಿ ಕೇಂದ್ರಗಳು ಕಳೆದ ಇಪ್ಪತ್ತು ವರ್ಷಗಳಿಂದ ಸ್ಥಳೀಯ ಸಮುದಾಯಗಳ ಧ್ವನಿಯಾಗಿ ದೇಶದಲ್ಲಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ಬಿಇಸಿ ಧ್ವನಿ ಆರೋಗ್ಯದ ಕುರಿತಾದ ಜಾಗೃತಿ, ಶಿಕ್ಷಣ, ಕೃಷಿ ಹೀಗೆ ಬೇರೆ ಬೇರೆ ಕಾರ್ಯಕ್ರಮ ಬಿತ್ತರಿಸುತ್ತಾ ಬಂದಿದ್ದು ಇದು ಬಾಗಲಕೋಟೆಯ ಮೊದಲ ಸಮುದಾಯ ಬಾನುಲಿ ಕೇಂದ್ರವಾಗಿದೆ ಎಂದರು.
ಪ್ರಾಚಾರ್ಯ ಡಾ.ಅರುಣ ಹೂಲಿ, ಸಂಯೋಜಕÀ ಡಾ.ರವಿ ಕೋಟೆನ್ನವರ, ಡಾ.ವಿಜಯಲಕ್ಷಿö್ಮÃ ಪಾಟೀಲ ಇತರರಿದ್ದರು.