This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Politics NewsState News

ಸ್ವಯಂ ಘೋಷಿತ ‘ದೇಶ ಭಕ್ತ’ರಿಗೆ ಜಾತಿ ಗಣತಿಯ ನಡುಕ: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವ್ಯಂಗ್ಯ

ಸ್ವಯಂ ಘೋಷಿತ ‘ದೇಶ ಭಕ್ತ’ರಿಗೆ ಜಾತಿ ಗಣತಿಯ ನಡುಕ: ನರೇಂದ್ರ ಮೋದಿ ವಿರುದ್ಧ ರಾಹುಲ್ ಗಾಂಧಿ ವ್ಯಂಗ್ಯ

ನವದೆಹಲಿ: ನೂತನವಾಗಿ ಜಾತಿ ಗಣತಿ ನಡೆಸಿ ಪ್ರಸ್ತುತ ಇರುವ ಜಾತಿ ಗಣತಿ ವರದಿಯನ್ನು ಸೂಕ್ಷ್ಮವಾಗಿ ಪರಿಷ್ಕರಿಸುವುದಾಗಿ ತಾವು ನೀಡಿರುವ ಹೇಳಿಕೆಯು ಸ್ವಯಂ ಘೋಷಿತ ದೇಶ ಭಕ್ತರಲ್ಲಿ ನಡುಕ ಹುಟ್ಟಿಸಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಬಿಜೆಪಿ ನಾಯಕರಿಗೆ ತಿಳಿಸಿದರು.

ನಗರದಲ್ಲಿ ಬುಧವಾರ ಜರುಗಿದ ‘ಸಾಮಾಜಿಕ ನ್ಯಾಯ ಸಮ್ಮೇಳನ’ ಉದ್ದೇಶಿಸಿ ಮಾತನಾಡಿದ ರಾಹುಲ್‌, ” ದೇಶದ 90% ಜನಸಂಖ್ಯೆಯ ಸಂಪತ್ತನ್ನು ಪ್ರಧಾನಿಯ 22 ಮಂದಿ ಆಪ್ತರು ಹೊಂದಿದ್ದಾರೆ ಎಂದು ಹಲವು ಅಂತಾರಾಷ್ಟ್ರೀಯ ಸಮೀಕ್ಷೆಗಳು ಹೇಳಿವೆ. ನಾನು 90% ಜನರಿಗೆ ನ್ಯಾಯ ಸಿಗುವಂತೆ ನಿಗಾವಹಿಸಲು ಮುಂದಾಗಿದ್ದೇನೆ. ಈ ನಡುವೆ ಸಂಪತ್ತು ಮರುಹಂಚಿಕೆಯ ನನ್ನ ಹೇಳಿಕೆಯನ್ನು ತಿರುಚಿ ಬಿಜೆಪಿ ಜನರು ಹೆದರಿಸಿ ರಾಜಕೀಯ ಮಾಡುತ್ತಿದೆ,” ಎಂದು ಹೇಳಿದರು.

ಈ ಹಿಂದೆ ಬಿಜೆಪಿಗರು, ಕೆಲವು ಮಾಧ್ಯಮಗಳು ತಮ್ಮನ್ನು ‘ಗಂಭೀರವಲ್ಲದ ರಾಜಕಾರಣಿ’ ಎಂದು ಬಿಂಬಿಸಿವೆ ಎಂದು ಅಸಮಾಧಾನ ವ್ಯಕ್ತಪಡಿಸಿದ ರಾಹುಲ್‌ ಗಾಂಧಿ, ” ನಾನು ಮನರೇಗಾ, ಭೂಸ್ವಾಧೀನ ಮಸೂದೆ, ನಿಯಮಗಿರಿ ಹಿಲ್ಸ್‌ ಕೇಸ್‌, ಭಟ್ಟಾ ಪರ್ಸೌಲ್‌ ಚಳವಳಿಯನ್ನು ಅರ್ಥೈಸಿಕೊಂಡು ಭಾಗಿಯಾಗಿದ್ದೇನೆ. ಆದರೆ, ಇದನ್ನು ಗಮನಿಸದ ಕೆಲವು ಮಾಧ್ಯಮಗಳಿಗೆ ನಟರಾದ ಅಮಿತಾಭ್‌, ಐಶ್ವರ್ಯಾ ರೈ, ವಿರಾಟ್‌ ಕೊಹ್ಲಿ ಬಗ್ಗೆ ಮಾತನಾಡುವುದು ಗಂಭೀರ ರಾಜಕಾರಣ ಎನಿಸಿರುವುದು ವಿಪರ್ಯಾಸ. ದೇಶದ 90% ಜನರ ನ್ಯಾಯದ ಪರವಾಗಿ ಮಾತನಾಡುವವನು ಗಂಭೀರ ರಾಜಕಾರಣಿ ಅಲ್ಲವೇ,” ಎಂದು ರಾಹುಲ್‌ ಪ್ರಶ್ನಿಸಿದರು.

“ನನಗೆ ಜಾತಿ ಮುಖ್ಯವಲ್ಲ. ಆದರೆ, ಜನರಿಗೆ ಸಿಗಬೇಕಿರುವ ನ್ಯಾಯ ನನಗೆ ಬಹಳ ಮುಖ್ಯ. ದೇಶದ 90% ಜನರಿಗೆ ಬಿಜೆಪಿ ಆಡಳಿತದಲ್ಲಿ ಘೋರ ಅನ್ಯಾಯವಾಗಿದೆ. ಜಾತಿಗಣತಿಯಿಂದ ಈ ಅನ್ಯಾಯದ ಪೂರ್ಣ ವಿವರ ಬಯಲಾಗಲಿದೆ. ನನ್ನ ಜೀವನದ ಉದ್ದೇಶ 90% ದೇಶವಾಸಿಗರಿಗೆ ನ್ಯಾಯ ಕೊಡಿಸುವುದು” ಎಂದು ಅವರು ಹೇಳಿದರು.

” ದೇಶ ಭಕ್ತ ಯಾರು? ದೇಶಕ್ಕೆ ನ್ಯಾಯ ಬೇಕೆನ್ನುವವನು ದೇಶಭಕ್ತ. ಇದಕ್ಕಾಗಿ ದೇಶದ 90% ಜನರನ್ನು ಒಟ್ಟಾಗಿ ಕರೆದೊಯ್ದು ‘ಸೂಪರ್‌ ಪವರ್‌’ ಆಗಬೇಕು. ಕಳೆದ 10 ವರ್ಷಗಳಿಂದ ತಮ್ಮನ್ನು ಒಬಿಸಿ ಎಂದು ಕರೆದುಕೊಂಡ ಪ್ರಧಾನಿ ಮೋದಿ ಅವರು, ನಾನು ಜಾತಿ ಗಣತಿ ಬಗ್ಗೆ ಮಾತನಾಡಿದ ಕೂಡಲೇ ‘ ದೇಶದಲ್ಲಿ ಜಾತಿಗಳು ಇಲ್ಲ’ ಎನ್ನುತ್ತಿದ್ದಾರೆ. ಹಾಗಿದ್ದರೆ, ಇಷ್ಟು ದಿನ ನಿಮ್ಮ ಒಬಿಸಿ ಎಂಬ ಹಣೆಪಟ್ಟಿ ಕೇವಲ ಅನುಕಂಪ ಗಿಟ್ಟಿಸಲು ಎಂದು ಬಯಲಾಗಿದೆ,” ಎಂದು ರಾಹುಲ್‌ ವಾಗ್ದಾಳಿ ನಡೆಸಿದರು.

";