ಬೆಂಗಳೂರು: ದೇಶದಲ್ಲಿ ಕತ್ತೆಲೆ ಇದ್ದಾಗ ಗಾಂಧಿ ಕುಟುಂಬದಲ್ಲಿ ಮಾತ್ರ ಬೆಳಕಿತ್ತು, ಆ ಅಹಂಕಾರ ಇನ್ನೂ ಹಾಗೆಯೇ ಇದೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ಹೇಳಿದ್ದಾರೆ. ರಾಮ ಮಂದಿರ ಶಂಕುಸ್ಥಾಪನೆ ನಡೆಯುತ್ತಿದ್ದಾಗ ಅವರನ್ನೂ ಆಹ್ವಾನಿಸಲಾಗಿದ್ದು, ಆದರೆ ಅವರು ಅದನ್ನು ತಿರಸ್ಕರಿಸಿದರು.
ರಾಹುಲ್ ಗಾಂಧಿಯವರೇ ನೀವು ಕ್ಷೇತ್ರವನ್ನು ಆರಿಸಿ, ನಾವು ಕಾರ್ಯಕರ್ತರನ್ನು ಆಯ್ಕೆ ಮಾಡುತ್ತೇವೆ, ಹತ್ತು ವರ್ಷಗಳ ಚರ್ಚೆ ನಡೆದುಬಿಡಲಿ ಎಂದರು.ಆಯ್ಕೆ ಮಾಡುತ್ತೇವೆ ಎಂದು ಕೇಂದ್ರ ಸಚಿವೆ ಸ್ಮೃತಿ ಇರಾನಿ ರಾಹುಲ್ ಗಾಂಧಿಗೆ ಬಹಿರಂಗ ಸವಾಲು ಹಾಕಿದ್ದು, ಲೋಕಸಭೆ ಚುನಾವಣೆಗೂ ಮುನ್ನ ದೇಶದಲ್ಲಿ ರಾಜಕೀಯ ಬಿಸಿ ಏರಿದೆ. ಏತನ್ಮಧ್ಯೆ ಕೇಂದ್ರ ಸಚಿವೆ ಮತ್ತು ಬಿಜೆಪಿ ನಾಯಕಿ ಸ್ಮೃತಿ ಇರಾನಿ ಕಾಂಗ್ರೆಸ್ ಸಂಸದ ರಾಹುಲ್ ಗಾಂಧಿಗೆ ಎನ್ಡಿಎ ಹಾಗೂ ಯುಪಿಎ ಎರಡರ ಹತ್ತು ವರ್ಷಗಳ ಬಗ್ಗೆ ಚರ್ಚೆ ನಡೆಸುವಂತೆ ಬಹಿರಂಗ ಸವಾಲು ಎಸೆದರು.
ನೀವು ಕ್ಷೇತ್ರವನ್ನು ಆರಿಸಿ, ನಾವು ಕಾರ್ಯಕರ್ತರನ್ನು ಆಯ್ಕೆ ಮಾಡುತ್ತೇವೆ ಎಂದು ಹೇಳಿದ್ದಾರೆ. ನಾಗ್ಪುರದಲ್ಲಿ ನಡೆದ ನಮೋ ಯುವ ಮಹಾಸಮ್ಮೇಳನದಲ್ಲಿ ಮಾತನಾಡಿದ ಸ್ಮೃತಿ ರಾಹುಲ್ ಗಾಂಧಿ ಅವರನ್ನು ಚರ್ಚೆಗೆ ಆಹ್ವಾನಿಸಿದ್ದು, ನನ್ನ ಧ್ವನಿ ರಾಹುಲ್ ಗಾಂಧಿ ಅವರನ್ನು ತಲುಪುತ್ತಿದ್ದರೆ ತೆರೆದ ಕಿವಿಯಿಂದ ಎಲ್ಲವನ್ನೂ ಕೇಳಬೇಕು, ಯಾರ ಹತ್ತು ವರ್ಷಗಳು ಉತ್ತವೆಂದು ಚರ್ಚಿಸೋಣ ಎಂದಿದ್ದಾರೆ.