ಸಹಸ್ರಾರು ಜನರ ಮದ್ಯ ವೈಭದಿಂದ ಜರುಗಿದ ಶ್ರೀ ಮಳೆರಾಜೇಂದ್ರಸ್ವಾಮಿ ಮಹಾರಥೋತ್ಸವ ಜರುಗಿತು
ನಿಮ್ಮ ಸುದ್ದಿ ಬಾಗಲಕೋಟೆ
ಬಾಗಲಕೋಟೆ ತಾಲೂಕಿನ ಮುರನಾಳ ಪುನರವಸತಿ ಕೇಂದ್ರದಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಶ್ರೀ ಮಳೆರಾಜೇಂದ್ರಸ್ವಾಮಿ ಮಠಜಾತ್ರೆ ೯ ದಿನಗಳ ಪರಿಯಂತರ ರಾತ್ರಿ ಮಹಿಳೆಯರ ಆರತಿಸೇವೆಯೊಂದಿಗೆ ಸಣ್ಣರಥೋತ್ಸವ ಜರುಗಿ ಇಂದು ಮಂಗಳವಾರ ಬೆಳಗಿನ ಶ್ರೀ ಮಳೆರಾಜೇಂದ್ರಸ್ವಾಮಿ ಮೂರ್ತಿಗೆ ಮಹಾ ಪಂಚಾಮೃತ ಅಭಿಷೇಕ, ಜಲಾಭಿಷೇಕ, ಮೇಘರಾಜನ ಸಹಸ್ರನಾಮವಳಿಗಳಿಂದ ಪೂಜೆ,ವಿಶೇಷ ಅಲಂಕಾರ,ಮಹಾಮಂಗಳಾರುತಿ ಜರುಗಿತು,
ಮದ್ಯಾಹ್ನ 12 ಗಂಟೆಗೆ ಶ್ರೀ ಮಳೆರಾಜೇಂದ್ರಾಮಿ ಮೂರ್ತಿ ಇರುವ ಪಲ್ಲಕ್ಕಿ,ನಂದಿಕೋಲು ಪುರವಂತರ ಜೋತೆಗೆ ಸಾವಿರಾರು ಮಹಿಳೆಯರ ಆರತಿ ಸೇವೆಯೋಂದಿಗೆ ಸಣ್ಣ ರಥೋತ್ಸವ ಅದ್ದೂರಿಯಾಗಿ ಜರುಗಿತು.
ಶ್ರೀ ಮೇಘರಾಜ ಮಹಾಸ್ವಾಮಿಗಳು ಹಾಗೂ ಮೌನೇಶ್ವರ ಸ್ವಾಮಿಗಳ ರಥೋತ್ಸವದಲ್ಲಿ ಪಾಲ್ಘೋಂಡಿದ್ದರು.
ಸಾವಿರಾರು ಮಾತೆಯರ ಆರತಿ ಸೇವೆ ನೋಡುಗರನ್ನು ಗಮನಸೇಳೆಯಿತು.
ಸಂಜೆ ಜಗದ್ಗುರು ಶ್ರೀ ಮಳೆರಾಜೇಂದ್ರಸ್ವಾಮಿಯ ಮಹಾರಥೋತ್ಸವ ಸಹಸ್ರಾರು ಜನರ ಮದ್ಯ ಅತಿ ವೈಭವದೊಂದಿಗೆ ಜರುಗಿತು.
ರಥೋತ್ಸವದಲ್ಲಿ ಬೆರೆ ಬೆರೆ ಜಿಲ್ಲೆಗಳಿಂದ ಸಾವಿರಾರು ಜನರು ಬಾಗವಹಿಸಿದ್ದರು.