This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

Politics NewsState News

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಮೀಸಲು ವ್ಯವಸ್ಥೆಯನ್ನು ವಿರೋಧಿಸಿಲ್ಲ: ಮೋಹನ್ ಭಾಗವತ್ ಸ್ಪಷ್ಟನೆ

ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಮೀಸಲು ವ್ಯವಸ್ಥೆಯನ್ನು ವಿರೋಧಿಸಿಲ್ಲ: ಮೋಹನ್ ಭಾಗವತ್ ಸ್ಪಷ್ಟನೆ

ಹೈದರಾಬಾದ್‌: ”ರಾಷ್ಟ್ರೀಯ ಸ್ವಯಂ ಸೇವಕ ಸಂಘ ಎಂದಿಗೂ ಮೀಸಲು ವ್ಯವಸ್ಥೆಯನ್ನು ವಿರೋಧಿಸಿಲ್ಲ. ತೀರಾ ಹಿಂದುಳಿದ ವರ್ಗಗಳಿಗೆ ಮೀಸಲು ನೀಡುವುದಕ್ಕೆ ಅಭ್ಯಂತರವಿಲ್ಲ,” ಎಂದು ಆರ್‌ಎಸ್‌ಎಸ್‌ ಮುಖ್ಯಸ್ಥ ಮೋಹನ್‌ ಭಾಗವತ್‌ ತಿಳಿಸಿದರು.

ಹೈದರಾಬಾದ್‌ನಲ್ಲಿ ನಡೆದ ಶೈಕ್ಷಣಿಕ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಆರ್‌ಎಸ್‌ಎಸ್‌ ಮೀಸಲು ನೀತಿ ವಿರೋಧಿಸುತ್ತಿದೆ. ಸಂವಿಧಾನ ಬದಲಿಸಿ ಮೀಸಲು ಪದ್ದತಿ ತೆಗೆದು ಹಾಕಲು ಬೆಂಬಲಿಸುತ್ತಿದೆ ಎಂಬ ಆರೋಪಗಳನ್ನು ಅಲ್ಲಗಳೆದ ಮೋಹನ್‌ ಭಾಗವತ್‌, ”ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಮಾಜಿಕ ಜಾಲತಾಣದಲ್ಲಿ ಸಂಘವು ಮೀಸಲಾತಿಗೆ ವಿರುದ್ಧವಾಗಿದೆ ಎಂದು ಪ್ರತಿಪಾದಿಸುವ ನಕಲಿ ವಿಡಿಯೋ ಮೂಲಕ ಸುಳ್ಳು ಸುದ್ದಿ ಬಿತ್ತರಿಸಲಾಗಿದೆ ಎಂದರು.

ಹೊರಗೆ ಜನರ ನಡುವೆ ಇದ್ದಾಗ ಮೀಸಲಾತಿ ಕುರಿತು ಉಪದೇಶ ನೀಡುವ ಹಾಗೂ ಹಿಂದಿನಿಂದ ಆ ಪರಿಕಲ್ಪನೆ ವಿರುದ್ಧವಾಗಿ ಕೆಲಸ ಮಾಡುವ ಜನರು ಇಂತಹ ಸುಳ್ಳು ಹಾಗೂ ದಾರಿತಪ್ಪಿಸುವ ವಿಡಿಯೋಗಳನ್ನು ಸೃಷ್ಟಿಸುತ್ತಾರೆ. ಆರ್‌ಎಸ್‌ಎಸ್‌ಗೆ ಅಂತಹ ಯಾವುದೇ ಉದ್ದೇಶಗಳು ಇಲ್ಲ. ಬಿಜೆಪಿಯ ರಾಜಕೀಯ ನಿರ್ಧಾರಗಳಲ್ಲಿ ಸಂಘವು ಮಧ್ಯ ಪ್ರವೇಶಿಸುವುದಿಲ್ಲ,” ಎಂದು ಹೇಳಿದರು.

ಆರೆಸ್ಸೆಸ್- ಬಿಜೆಪಿ ಮೀಸಲಾತಿಗೆ ವಿರೋಧ ವ್ಯಕ್ತಪಡಿಸುತ್ತಿವೆ ಎಂಬ ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಅವರ ಇತ್ತೀಚಿನ ಆರೋಪಗಳ ಹಿನ್ನೆಲೆಯಲ್ಲಿ ಮೋಹನ್ ಭಾಗವತ್ ಹೇಳಿಕೆ ಮಹತ್ವ ಪಡೆದಿದ್ದು, ಸಂಘವು ಆರಂಭದಿಂದಲೂ ಸಂವಿಧಾನದ ಅಡಿಯಲ್ಲಿ ನೀಡಲಾಗಿರುವ ಮತ್ತು ಖಾತರಿಗೊಳಿಸಲಾಗಿರುವ ಮೀಸಲಾತಿಯ ಪರವಾಗಿ ನಿಂತಿದೆ ಎಂದು ವಿವರಿಸಿದರು.

ತಳ ಸಮುದಾಯದ ಜನರನ್ನು ಮೇಲೆತ್ತಲು ಎಲ್ಲಿಯವರೆಗೂ ಮೀಸಲು ಅಗತ್ಯವಿದೆಯೋ ಅಲ್ಲಿಯವರೆಗೂ ಮುಂದುವರಿಸಬೇಕೆಂದು ಆರ್‌ಎಸ್‌ಎಸ್‌ ಬಯಸುತ್ತದೆ. ಆದರೆ, ಮೀಸಲು ವ್ಯವಸ್ಥೆಯನ್ನು ಹಿಂದೆಯಾಗಲಿ, ಮುಂದೆಯಾಗಲಿ, ಎಂದೆಂದಿಗೂ ವಿರೋಧಿಸಿಲ್ಲ. ತಾರತಮ್ಯ ನಿರ್ಮೂಲನೆಯಾಗುವವರೆಗೂ ಮೀಸಲಾತಿ ಅಸ್ತಿತ್ವದಲ್ಲಿ ಇರಬೇಕು,” ಎಂದು ಸೂಚಿಸಿದರು.

 

Nimma Suddi
";