ಬಾಗಲಕೋಟೆ: ಶ್ರೇಯಾಂಕಾ ಪಾಟೀಲ. ಇದು ಈಗ ಎಲ್ಲರಿಗೂ ಚಿರಪರಿಚಿತ ಹೆಸರು. ಯಾಕಂದರೆ, ಕಳೆದ 18 ವರ್ಷಗಳಿಂದ ಗೆಲ್ಲಲಾಗದ ಕಪ್ ಗೆದ್ದ ಆರ್ ಸಿಬಿ ಟೀಂನ ಪ್ರಮುಖ ಆಟಗಾರ್ತಿ. ತಮ್ಮ ಸ್ಪಿನ್ ಮೂಲಕವೇ ನಾಲ್ಕು ವಿಕೆಟ್ ಕಿತ್ತು ತಂಡದ ಗೆಲುವಿಗೆ ಕಾರಣವಾದವರು. ಅವರಿಗೂ ಬಾಗಲಕೋಟೆಗೂ ಸಂಬಂಧ ಇದೆ. ಅದು ಹೇಗಂತ ತಿಳಿಯಲು ಈ ಸ್ಟೋರಿ ಓದಿ
Shreyanka Patil: ವುಮೆನ್ಸ್ ಪ್ರೀಮಿಯರ್ ಲೀಗ್ನ ಫೈನಲ್ ಪಂದ್ಯದಲ್ಲಿ ಸ್ಪಿನ್ ಮೋಡಿ ಮಾಡುವ ಮೂಲಕ ಆರ್ಸಿಬಿ ತಂಡದ ಯುವ ಆಲ್ರೌಂಡರ್ ಶ್ರೇಯಾಂಕಾ ಪಾಟೀಲ್ ವಿಶೇಷ ದಾಖಲೆ ಬರೆದಿದ್ದಾರೆ. ಅದು ಕೂಡ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಇದುವರೆಗೆ ಯಾರೂ ಮಾಡದ ದಾಖಲೆ ಬರೆಯುವ ಮೂಲಕ ಎಂಬುದು ವಿಶೇಷ.
ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿ ನಡೆದ ವುಮೆನ್ಸ್ ಪ್ರೀಮಿಯರ್ ಲೀಗ್ನ (WPL 2024) ಫೈನಲ್ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡ 8 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ಕನ್ನಡತಿ ಶ್ರೇಯಾಂಕಾ ಪಾಟೀಲ್ ಕೂಡ ಒಬ್ಬರು.
ಏಕೆಂದರೆ ಈ ಪಂದ್ಯದಲ್ಲಿ 3.3 ಓವರ್ಗಳನ್ನು ಎಸೆದ ಶ್ರೇಯಾಂಕಾ ಪಾಟೀಲ್ ಕೇವಲ 12 ರನ್ಗಳನ್ನು ಮಾತ್ರ ನೀಡಿದ್ದರು. ಇದೇ ವೇಳೆ 4 ವಿಕೆಟ್ಗಳನ್ನು ಕಬಳಿಸಿ ಡೆಲ್ಲಿ ಕ್ಯಾಪಿಟಲ್ಸ್ ತಂಡ 113 ರನ್ಗಳಿಗೆ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
ವಿಶೇಷ ಎಂದರೆ ಈ 4 ವಿಕೆಟ್ಗಳೊಂದಿಗೆ ವುಮೆನ್ಸ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲೇ ಎರಡು ಬಾರಿ ನಾಲ್ಕು ವಿಕೆಟ್ ಪಡೆದ ದಾಖಲೆಯೊಂದು ಶ್ರೇಯಾಂಕಾ ಹೆಸರಿಗೆ ಸೇರ್ಪಡೆಯಾಯಿತು. ಅಂದರೆ ಶ್ರೇಯಾಂಕಾ ಅವರನ್ನು ಹೊರತುಪಡಿಸಿ ಬೇರೆ ಯಾವುದೇ ಆಟಗಾರ್ತಿ WPL ನಲ್ಲಿ 2 ಬಾರಿ 4 ವಿಕೆಟ್ ಕಬಳಿಸಿಲ್ಲ.
ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಲೀಗ್ ಹಂತದ ಪಂದ್ಯದಲ್ಲಿ 4 ವಿಕೆಟ್ ಕಬಳಿಸಿ ಮಿಂಚಿದ್ದ ಶ್ರೇಯಾಂಕ ಪಾಟೀಲ್ ಇದೀಗ ಫೈನಲ್ ಪಂದ್ಯದಲ್ಲೂ 4 ವಿಕೆಟ್ಗಳನ್ನು ಉರುಳಿಸಿದ್ದಾರೆ. ಈ ಮೂಲಕ ವುಮೆನ್ಸ್ ಪ್ರೀಮಿಯರ್ ಲೀಗ್ನಲ್ಲಿ ಯಾರೂ ಮಾಡದ ಸಾಧನೆ ಮಾಡಿ ಹೊಸ ಇತಿಹಾಸ ನಿರ್ಮಿಸಿದ್ದಾರೆ.
ಇನ್ನು ಈ ಬಾರಿಯ ಟೂರ್ನಿಯಲ್ಲಿ ಒಟ್ಟು 12 ವಿಕೆಟ್ ಕಬಳಿಸುವ ಮೂಲಕ ಪರ್ಪಲ್ ಕ್ಯಾಪ್ ವಿನ್ನರ್ ಆಗಿ ಹೊರಹೊಮ್ಮಿದ್ದಾರೆ. ಈ ಮೂಲಕ ಆರ್ಸಿಬಿ ಮಹಿಳಾ ತಂಡದ ಪರ ಪರ್ಪಲ್ ಕ್ಯಾಪ್ ಗೆದ್ದ ಮೊದಲ ಆಟಗಾರ್ತಿ ಎಂಬ ಹೆಗ್ಗಳಿಕೆಗೂ ಶ್ರೇಯಾಂಕಾ ಪಾಟೀಲ್ ಪಾತ್ರರಾಗಿದ್ದಾರೆ.
ಶ್ರೇಯಾಂಕಾ ಪಾಟೀಲ್ ಬಾಗಲಕೋಟೆ ಯ ಶ್ರೀ ಮತಿ ಭಾರತಿ ಮೆಳ್ಳಿಗೇರಿ ಅವರ ಸಹೋದರಿ ಪುತ್ರಿ.
ಅವರ ಸಾಧನೆ ಗೆ ಶ್ರೀ ಹೇಮರೆಡ್ಡಿ ಮಲ್ಲಮ್ಮ ಸೇವಾ ಸಂಸ್ಥೆ ಅದ್ಯಕ್ಷರು ಶ್ರೀ ಮಹೇಶ್ ಕಕರಡ್ಡಿ ಅವರು ಅಭಿನಂದಿಸಿದ್ದಾರೆ.