This is the title of the web page
This is the title of the web page

Live Stream

November 2024
S M T W T F S
 12
3456789
10111213141516
17181920212223
24252627282930

| Latest Version 9.4.1 |

National NewsState News

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ – ವಿವಿಧ ವಿಭಾಗಗಳ ಹುದ್ದೆಗಳ ನೇಮಕಾತಿ

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ – ವಿವಿಧ ವಿಭಾಗಗಳ ಹುದ್ದೆಗಳ ನೇಮಕಾತಿ

2019ನೇ ಸಾಲಿನ ಸೆಪ್ಟೆಂಬರ್ ಮಾಹೆಯಲ್ಲಿ ಅಧಿಸೂಚಿಸಿದ್ದ ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಕಿರಿಯ ತರಬೇತಿ ಅಧಿಕಾರಿ – ವಿವಿಧ ವಿಭಾಗಗಳ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ, ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿಯನ್ನು ಕೆಪಿಎಸ್‌ಸಿ ಬಿಡುಗಡೆ ಮಾಡಿದೆ.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ಯಾವೆಲ್ಲ ವೃತ್ತಿಗಳಿಗೆ ಈ ಪಟ್ಟಿಗಳನ್ನು ಬಿಡುಗಡೆ ಮಾಡಲಾಗಿದೆ ಎಂದು ಕೆಳಗಿನಂತೆ ಲಿಸ್ಟ್‌ ನೀಡಲಾಗಿದೆ.

ಕಿರಿಯ ತರಬೇತಿ ಅಧಿಕಾರಿ – ಫಿಟ್ಟರ್ ವೃತ್ತಿ.
ಕಿರಿಯ ತರಬೇತಿ ಅಧಿಕಾರಿ – ಇಲೆಕ್ಟ್ರಾನಿಕ್ ಮೆಕ್ಯಾನಿಕ್.
ಕಿರಿಯ ತರಬೇತಿ ಅಧಿಕಾರಿ – ಮೆಕ್ಯಾನಿಕ್ ಮೋಟಾರ್ ವೆಹಿಕಲ್.
ಕಿರಿಯ ತರಬೇತಿ ಅಧಿಕಾರಿ – ಐಟಿಟಿಎಸ್‌ಎಂ (ಐಟಿಇಎಸ್‌ಎಂ).
ಕಿರಿಯ ತರಬೇತಿ ಅಧಿಕಾರಿ – ಮೆಕ್ಯಾನಿಕ್ ರೆಫಿಜೆರೇಷನ್‌ ಅಂಡ್ ಏರ್‌ ಕಂಡೀಷನರ್ ವೃತ್ತಿ.
ಕಿರಿಯ ತರಬೇತಿ ಅಧಿಕಾರಿ – ವರ್ಕ್‌ಶಾಪ್‌ ಕ್ಯಾಲುಕುಲೇಷನ್‌ ಅಂಡ್ ಸೈನ್ಸ್‌ ವೃತ್ತಿ.
ಕಿರಿಯ ತರಬೇತಿ ಅಧಿಕಾರಿ – ಇಂಜಿನಿಯರಿಂಗ್ ಡ್ರಾಯಿಂತ್ ವೃತ್ತಿ.
ಕಿರಿಯ ತರಬೇತಿ ಅಧಿಕಾರಿ – ಮೆಕ್ಯಾನಿಕ್ ಡೀಸೆಲ್.
ಕಿರಿಯ ತರಬೇತಿ ಅಧಿಕಾರಿ – ಇನ್‌ಸ್ಟ್ರುಮೆಂಟ್ ಮೆಕ್ಯಾನಿಕ್.
ಕಿರಿಯ ತರಬೇತಿ ಅಧಿಕಾರಿ – ಇಲೆಕ್ಟ್ರೀಷಿಯನ್
ಕಿರಿಯ ತರಬೇತಿ ಅಧಿಕಾರಿ – ಡ್ರೆಸ್‌ ಮೇಕಿಂಗ್
ಕಿರಿಯ ತರಬೇತಿ ಅಧಿಕಾರಿ – ಇಂಟೇರಿಯರ್ ಡಿಸೈನ್.
ಕಿರಿಯ ತರಬೇತಿ ಅಧಿಕಾರಿ – ವೆಲ್ಡರ್
ಕಿರಿಯ ತರಬೇತಿ ಅಧಿಕಾರಿ – ಆರ್ಕಿಟೆಕ್ಚರಲ್ ಅಸಿಸ್ಟಂಟ್
ಕಿರಿಯ ತರಬೇತಿ ಅಧಿಕಾರಿ – ಮೆಕ್ಯಾನಿಕ್ ಮಷಿನ್ ಟೂಲ್‌ ನಿರ್ವಹಣೆ.
ಕಿರಿಯ ತರಬೇತಿ ಅಧಿಕಾರಿ – ಸೆಕ್ರೇಟರಿಯಲ್ ಪ್ರಾಕ್ಟೀಸ್
ಕಿರಿಯ ತರಬೇತಿ ಅಧಿಕಾರಿ – ಪ್ಲಾಸ್ಟಿಕ್ ಪ್ರೋಸೆಸಿಂಗ್ ಆಪರೇಟರ್
ಕಿರಿಯ ತರಬೇತಿ ಅಧಿಕಾರಿ – ಡ್ರಾಟ್ಸ್‌ಮನ್ ಸಿವಿಲ್
ಕಿರಿಯ ತರಬೇತಿ ಅಧಿಕಾರಿ – ಟರ್ನರ್
ಕಿರಿಯ ತರಬೇತಿ ಅಧಿಕಾರಿ – ಕಾರ್ಪೆಂಟರ್
ಕಿರಿಯ ತರಬೇತಿ ಅಧಿಕಾರಿ – ಮಷಿನಿಸ್ಟ್‌
ಕಿರಿಯ ತರಬೇತಿ ಅಧಿಕಾರಿ – ಇಲೆಕ್ಟ್ರೋಪ್ಲೇಟರ್

ಪ್ರಸ್ತುತ ಬಿಡುಗಡೆ ಮಾಡಿರುವ ಪರಿಷ್ಕೃತ ತಾತ್ಕಾಲಿಕ ಪಟ್ಟಿಗಳಿಗೆ ಕೆಪಿಎಸ್‌ಸಿ ಆಕ್ಷೇಪಣೆ ಅರ್ಜಿ ಇದ್ದಲ್ಲಿ ಸಲ್ಲಿಸಲು ಅವಕಾಶ ನೀಡಿದೆ. ಮೇ 13, 2024 ರೊಳಗೆ, ಉದ್ಯೋಗ ಸೌಧ, ಬೆಂಗಳೂರು – 560001ಗೆ ಖುದ್ದಾಗಿ ಭೇಟಿ ನೀಡಿ ಆಕ್ಷೇಪಣೆಯನ್ನು ವಿವರವಾದ ಮಾಹಿತಿಗಳೊಂದಿಗೆ ಸಲ್ಲಿಸಬಹುದು.

ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಆಯುಕ್ತಾಲಯದಲ್ಲಿನ ವಿವಿಧ ವಿಭಾಗಗಳ ಜೆಟಿಒ ಹುದ್ದೆಗಳಿಗೆ ಸದರಿ ಸಾಲಿನಲ್ಲಿ ಅರ್ಜಿ ಆಹ್ವಾನಿಸಿ, ನೇಮಕ ಪ್ರಕ್ರಿಯೆಗಳನ್ನು ನಡೆಸಲಾಗಿತ್ತು. ನಂತರ 2022 ರ ಫೆಬ್ರುವರಿಯಲ್ಲಿ ಅಂತಿಮ ಆಯ್ಕೆಪಟ್ಟಿಯನ್ನು ಬಿಡುಗಡೆ ಮಾಡಲಾಗಿತ್ತು. ಸದರಿ ಹುದ್ದೆಗಳ ನೇಮಕಾತಿಯ ಪ್ರಕರಣ ಹೈಕೋರ್ಟ್‌ನಲ್ಲಿದ್ದ ಕಾರಣ ಕಳೆದ ಮಾರ್ಚ್‌ನಲ್ಲಿ ಮತ್ತೆ ಮಧ್ಯಂತರ ಆದೇಶ ಪ್ರಕಟಿಸಿ ಪರಿಷ್ಕೃತ ತಾತ್ಕಾಲಿಕ ಆಯ್ಕೆಪಟ್ಟಿ ಬಿಡುಗಡೆಗೆ ಕೆಪಿಎಸ್‌ಸಿ’ಗೆ ಆದೇಶ ನೀಡಿತ್ತು. ಈ ಹಿನ್ನೆಲೆಯಲ್ಲಿ ಈಗ ಕೆಪಿಎಸ್‌ಸಿ 22 ವೃತ್ತಿಗಳಿಗೆ ಪ್ರತ್ಯೇಕ ಪಿಡಿಎಫ್‌ ಫೈಳ್‌ನಲ್ಲಿ ಪರಿಷ್ಕೃತ ಆಯ್ಕೆಪಟ್ಟಿಗಳನ್ನು ಬಿಡುಗಡೆ ಮಾಡಿದೆ.

Nimma Suddi
";