ಬಾಗಲಕೋಟೆ
ಅಪಘಾತದಲ್ಲಿ ಮೃತಪಟ್ಟ ವ್ಯಕ್ತಿಗೆ ನ್ಯಾಷನಲ್ ಇನ್ಸೂರೆನ್ಸ ಕಂಪನಿಯವರು ಕುಂಟ ನೆಪ ಹೇಳಿ ವಿಮೆ ಪರಿಹಾರಧನ ನೀಡಲು ನಿರಾಕರಿಸಿದಕ್ಕೆ ಶೇ.೯ರ ಬಡ್ಡಿ ಸಮೇತ ವಿಮೆ ಪರಿಹಾರಧನ ನೀಡುವಂತೆ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ತೀರ್ಪು ನೀಡುವಂತೆ ಆದೇಶ ಹೊರಡಿಸಿದೆ.
ಬಾಗಲಕೋಟೆ ತಾಲೂಕಿನ ಚಿಕ್ಕಹೊಲದೂರ ಗ್ರಾಮದ ನಿವಾಸಿ ಸಂಗಪ್ಪ ಮಾಳವಾಡ ನವನಗರದ ಎಪಿಎಂಸಿ ಬಸವೇಶ್ವರ ಸಹಕಾರಿ ಬ್ಯಾಂಕ್ ಶಾಖೆಯಲ್ಲಿ ಉಳಿತಾಯ ಖಾತೆ ಹೊಂದಿದ್ದು, ಪಿಎಂಎಸ್‌ಬಿವಾಯ್ ಯೋಜನೆಯಡಿ ೨ ಲಕ್ಷ ರೂ.ಗಳ ವಿಮೆ ಪಾಲಸಿ ಮಾಡಿದ್ದರು. ಮೋಟರ್ ಸೈಕಲ್‌ನಲ್ಲಿ ಹೋಗುವಾಗಿ ಅಪಘಾತಕ್ಕೀಡಾಗಿ ವ್ಯಕ್ತ ಮೃತಪಟ್ಟಿದ್ದರು. ಈ ಕುರಿತು ನಿಡಗುಂದಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪರಿಹಾರ ನೀಡುವಂತೆ ನ್ಯಾಷನಲ್ ಇನ್ಸೂರೆನ್ಸ ಕಂಪನಿಗೆ ದಾಖಲೆಗಳ ಸಮೇತ ಮನವಿ ಸಲ್ಲಿಸಿದ್ದರು.
ಮನವಿಗೆ ಸ್ಪಂಧಿಸದ ಇನ್ಸೂರೆನ್ಸ್ ಕಂಪನಿ ಮೃತನು ಅಪಘಾತ ವೇಳೆ ಮಧ್ಯ ಸೇವಿಸಿ ಮೋಟರ ಸೈಕಲ್ ಚಾಲನೆ ಮಾಡಿ ಸ್ಕಿಡ್ ಆಗಿ ಬಿದ್ದು ಮೃತಪಟ್ಟಿದ್ದಾರೆ ಎಂದು ವಿಮಾ ಹಣ ಕೊಡಲು ತಿರಸ್ಕರಿಸಿದ್ದರು. ಅನಿವಾರ್ಯವಾಗಿ ಮೃತನ ಪತ್ನಿ ಶಿವಲೀಲಾ ಮಾಳವಾಡ ವಿಮಾ ಕಂಪನಿ ವಿರುದ್ದ ಜಿಲ್ಲಾ ಗ್ರಾಹಕ ವ್ಯಾಜ್ಯಗಳ ಪರಿಹಾರ ಆಯೋಗದಲ್ಲಿ ದೂರು ದಾಖಲಿಸಿದ್ದರು. ಸದರ ಆಯೋಗವು ವಿಚಾರಣೆ ನಡೆಸಿದಾಗ ಕಂಪನಿ ಹೇಳಿಕೆಯಿಂದ ಯಾವುದೇ ದಾಖಲೆ, ಸಾಕ್ಷಿ ಪುರಾವೆಗಳು ಒದಗಿಸಿರುವದಿಲ್ಲ. ವಿಮೆ ಹಣ ನೀಡದೇ ಸೇವಾ ನೂನ್ಯತೆ ಎಸಗಿದ್ದಾರೆಂದು ತೀರ್ಪು ನೀಡಿದೆ.
ದೂರುದಾರರಿಗೆ ೨ ಲಕ್ಷ ರೂ.ಗಳ ವಿಮೆ ಪರಿಹಾರದ ಹಣದ ಜೊತೆಗೆ ಶೇ.೯೦ ರಂತೆ ಬಡ್ಡಿಯನ್ನು ಪರಿಹಾರ ನೀಡಲು ತಿರಸ್ಕರಿಸಿದ ದಿನಾಂಕಿAದ ಕೊಡಲು ಆದೇಶಿಸಿದೆ. ಜೊತೆಗೆ ದೂರುದಾರರನ್ನು ಅನಾವಶ್ಯಕ ಆಯೋಗಕ್ಕೆ ಅಲೆದಾಡಿಸಿದಕ್ಕೆ ೨೦ ಸಾವಿರ ರೂ, ಹಾಗೂ ಪ್ರಕರಣದ ಖರ್ಚು ೧೦ ಸಾವಿರ ರೂ.ಗಳನ್ನು ಕೊಡುವಂತೆ ಆಯೋಗದ ಅಧ್ಯಕ್ಷ ಡಿ.ವೈ.ಬಸಾಪೂರ ಮತ್ತು ಸದಸ್ಯೆ ಕಮಲಕಿಶೋರ ಜೋಶಿ ಒಳಗೊಂಡ ಪೀಠವು ಮಹತ್ವದ ತೀರ್ಪು ನೀಡಿದೆ.