This is the title of the web page
This is the title of the web page

Live Stream

September 2024
S M T W T F S
1234567
891011121314
15161718192021
22232425262728
2930  

| Latest Version 9.4.1 |

Local NewsState News

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಂಶೋಧನಾ ನೆಲೆಯ ಅಧ್ಯಯನಗಳು ಅಗತ್ಯ

ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಂಶೋಧನಾ ನೆಲೆಯ ಅಧ್ಯಯನಗಳು ಅಗತ್ಯ

ಬಾಗಲಕೋಟೆ :

ಹವ್ಯಾಸಿ ಬರವಣಿಗೆಗಳಿಗಿಂತ ಸಂಶೋಧನಾ ನೆಲೆಯ ಬರವಣಿಗೆಗಳಿಗೆ ಹೆಚ್ಚಿನ ಮಹತ್ವ ಇರಲಾಗಿದೆ. ರಾಣಿ ಚನ್ನಮ್ಮ ವಿಶ್ವವಿದ್ಯಾಲಯ ಬಿ.ಎ ೬ ನೇ ಸೆಮಿಸ್ಟರ್ ವಿದ್ಯಾರ್ಥಿಗಳ ಅಂತಿಮ ವರ್ಷದ ಶೈಕ್ಷಣಿಕ ಅಧ್ಯಯನಕ್ಕಾಗಿ ೫೦ ಅಂಕಗಳನ್ನು ನಿಗದಿಪಡಿಸಿ ಯೋಜನಾಕಾರ್ಯದ ಪ್ರೊಜೆಕ್ಟ್ಗಳನ್ನು ಕಡ್ಡಾಯವಾಗಿ ಸಲ್ಲಿಸಲು ನಿಗದಿಪಡಿಸಿದ್ದರಿಂದ ವಿದ್ಯಾರ್ಥಿಗಳು ಪ್ರಾಮಾಣಿಕತೆ, ಉತ್ಸಾಹ, ಅಧ್ಯಯನಶೀಲ ಮನೋಭಾವನೆಯಿಂದ ವಿಶೇಷವಾದ ಶೀರ್ಷಿಕೆಗಳನ್ನು ಒಳಗೊಂಡ ಕಿರು ಪ್ರಬಂಧ ರೂಪದ ಯೋಜನಾಕಾರ್ಯಗಳನ್ನು ಮಂಡಿಸಿದ್ದು; ಭವಿತವ್ಯದಲ್ಲಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಸಂಶೋಧನಾ ನೆಲೆಯ ಅಧ್ಯಯನಗಳು ಅಗತ್ಯವಾಗಿವೆ ಎಂದು ಬಾಗಲಕೋಟ ತಾಲೂಕಿನ ಬೇವೂರಿನ ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಪ್ರಾಚಾರ್ಯರಾದ ಡಾ. ಜಗದೀಶ ಗು. ಬೈರಮಟ್ಟಿ ಹೇಳಿದರು.

ಯೋಜನಾ ಕಾರ್ಯದ ಮಂಡನೆ, ಮೌಖಿಕ ಪರೀಕ್ಷೆಯ ಉದ್ಘಾಟನಾ ಕಾರ್ಯಕ್ರಮದ ಅಧ್ಯಕ್ಷö್ಯತೆ ವಹಿಸಿ ಮಾತನಾಡಿದ ಅವರು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನಮ್ಮ ಮಹಾವಿದ್ಯಾಲಯದ ಕನ್ನಡ, ಇಂಗ್ಲೀಷ, ಅರ್ಥಶಾಸ್ತç, ಸಮಾಜಶಾಸ್ತç, ರಾಜ್ಯಶಾಸ್ತç, ಇತಿಹಾಸ ಅಧ್ಯಯನ ವಿಭಾಗಗಳಿಗೆ ಸಲ್ಲಿಸಿದ ಯೋಜನಾಕಾರ್ಯಗಳು ಉತ್ತಮ ಗುಣಮಟ್ಟ ಹೊಂದಿದ್ದು ಮಾರ್ಗದರ್ಶನ ಮಾಡಿದ ಉಪನ್ಯಾಸಕರ ಪರಿಶ್ರಮ ವಿದ್ಯಾರ್ಥಿಗಳ ಅಧ್ಯಯನಾಸಕ್ತಿ ಸಾರ್ಥಕತೆ, ಸಾಫಲ್ಯ ಕಾಣುವಲ್ಲಿ ಯಶಸ್ವಿಯಾಗಿವೆ ಎಂದು ಅವರು ಹೇಳಿದರು.

ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬಾಗಲಕೋಟೆಯ ಅಕ್ಕಮಹಾದೇವಿ ಮಹಿಳಾ ಕಲಾ ಮಹಾವಿದ್ಯಾಲಯದಿಂದ ಆಗಮಿಸಿದ ಸಂಪನ್ಮೂಲ ವ್ಯಕ್ತಿಗಳು ಆದ ಡಾ. ಜಿ.ಆಯ್. ನಂದಿಕೋಲಮಠ ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿ ಎಂ ಎಂ ಕಲ್ಬುರ್ಗಿ ಗುರುಗಳಂತಹ ಮಹನೀಯರು ಸಂಶೋಧನಾ ಕ್ಷೇತ್ರಕ್ಕೆ ನೀಡಿದ ಕೊಡುಗೆ ಕೊಡಮಾಡಿದ ಅಧ್ಯಯನ ಶಿಸ್ತುಗಳು ಪರಿಚಯಿಸಿದ ವಿವಿಧ ಆಯಾಮಗಳು ನಾಡಿನ ಹಿರಿಯ ಕಿರಿಯ ಸಂಶೋಧಕರಿಗೆ ದಾರಿದೀಪವಾಗಿವೆ. ಸಂಶೋಧಕ ಆಕರಗಳ ಕೊರತೆ, ಸಮಯದ ಮಿತಿಯ ಒತ್ತಡದಲ್ಲಿ ಅಪೂರ್ಣಮಾಹಿತಿ ಕೊಡಬಹುದು ಆದರೆ ಎಂದಿಗೂ ಅಸತ್ಯವಾದ ಮಾಹಿತಿಗಳನ್ನು ಕೊಡುವುದಿಲ್ಲ ಸಂಶೋಧನಾ ಕಾರ್ಯ ನಿರಂತರ ಹರಿಯುವ ಜಲವಿದ್ದಂತೆ ವಿದ್ಯಾರ್ಥಿಗಳಿಗೆ ಎನ್.ಇ.ಪಿ ಶಿಕ್ಷಣ ವ್ಯವಸ್ಥೆ ಅಡಿಯಲ್ಲಿ ಪರಿಚಯಿಸಿದ ಸಂಶೋಧನಾ ಗುಣಗಳನ್ನು ಬೆಳೆಸಿಕೊಳ್ಳುವ ಮೊದಲ ಮೆಟ್ಟಿಲಾಗಿ ಈ ೫೦ ಅಂಕದ ಪ್ರೋಜೆಕ್ಟ ಕಾರ್ಯ ಕಂಡುಬರುತ್ತಿದ್ದು ಇಲ್ಲಿ ಕಲಿತ ಅಧ್ಯಯನಶಿಸ್ತು ಸಂಶೋಧನಾ ನೆಲೆಯ ಅಂಶಗಳನ್ನು ಮುಂದಿನ ವ್ಯಾಸಂಗಗಳಲ್ಲಿಯೂ ರೂಢಿಸಿಕೊಳ್ಳಬೇಕು ಎಂದು ಅವರು ಹೇಳಿದರು.

ಕಾರ್ಯಕ್ರಮದ ವೇದಿಕೆಯಲ್ಲಿ ವಿವಿಧ ಕಾಲೇಜುಗಳಿಂದ ಆಗಮಿಸಿದ ಸಂಪನ್ಮೂಲ ವ್ಯಕ್ಯಿಗಳಾದ ಶ್ರೀ ಆರ್.ಆಯ್ ಗೌಡರ, ಡಾ. ವಿನಯಕುಮಾರ ಹೀರೆಮಠ, ಡಾ. ಮಹೆಂದ್ರ ದೊಡ್ಡಮನಿ, ಪರಶುರಾಮ ಮಾಂಗ್, ಕೃಷ್ಣಾಜಿ. ದಾಸರ ಹಿರಿಯ ಉಪನ್ಯಾಸಕರಾದ ಬಿ.ಬಿ. ಬೇವೂರ ಉಪಸ್ಥಿತರಿದ್ದರು. ಶ್ರೀ ಪರಪ್ಪ ಸಂಗಪ್ಪ ಸಜ್ಜನ ಕಲಾ ಮಹಾವಿದ್ಯಾಲಯದ ಅರ್ಥಶಾಸ್ತç ವಿಭಾಗದ ಮುಖ್ಯಸ್ಥರಾದ ಶ್ರೀ ಎಸ್.ಎಸ್. ಆದಾಪೂರ ಸ್ವಾಗತಿಸಿದರು. ಕನ್ನಡ ವಿಭಾಗದ ಉಪನ್ಯಾಸಕರಾದ ಡಾ. ಸಂಗಮೇಶ ಹಂಚಿನಾಳ ಅತಿಥಿ ಮಹನೀಯರನ್ನು ಪರಿಚಯಿಸಿದರು.

ಇತಿಹಾಸ ಉಪನ್ಯಾಸಕ ಡಾ. ಎ.ಎಮ್. ಗೊರಚಿಕ್ಕನವರ ನಿರೂಪಿಸಿದರು. ರಾಜ್ಯಶಾಸ್ತç ಉಪನ್ಯಾಸಕ ಶ್ರೀ ನಾಗಲಿಂಗೇಶ ಬಿ. ಬೆಣ್ಣೂರ ವಂದಿಸಿದರು. ಪ್ರತಿಭಾ ಹೆಳವರ ವಸಂತಲಕ್ಷಿö್ಮÃ ಸಜ್ಜನ ಪ್ರಾರ್ಥಿಸಿದರು. ಸಮಾಜಶಾಸ್ತç ವಿಭಾಗದ ಮುಖ್ಯಸ್ಥರು ಎನ್.ಎಸ್.ಎಸ್. ಕಾರ್ಯಕ್ರಮ ಅಧಿಕಾರಿಗಳಾದ ಜಿ.ಎಸ್. ಗೌಡರ, ಇಂಗ್ಲೀಷ ವಿಭಾಗದ ಮುಖ್ಯಸ್ಥ ಡಿ.ವಾಯ್ ಬುಡ್ಡಿಯವರ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಆಯಾ ವಿಭಾಗಗಳಲ್ಲಿ ವಿಷಯ ಪರಿಣಿತ ಸಂಪನ್ಮೂಲ ವ್ಯಕ್ತಿಗಳು ಸಂಯೋಜಕರು, ಪ್ರಾಚಾರ್ಯರು, ಮಾರ್ಗದರ್ಶಕ ಉಪನ್ಯಾಸಕರ ಉಪಸ್ಥಿತಿಯಲ್ಲಿ ಯೋಜನಾಕಾರ್ಯದ ಮಂಡನೆ, ಮೌಖಿಕ ಸಂದರ್ಶನಗಳು ಜರುಗಿದವು.

";