ಬಾಗಲಕೋಟೆ
ಜಿಲ್ಲೆಯ ಹುನಗುಂದ ತಾಲೂಕಿನ ಅಮೀನಗಡದ ಪ್ರಭುಶಂಕರೇಶ್ವರ ಗಚ್ಚಿನಮಠದ ಶಂಕರಾಜೇಂದ್ರ ಸ್ವಾಮೀಜಿ ಹಾಗೂ ಖೇಡಗಿ ವಿರಕ್ತಮಠದ ಶಿವಬಸವರಾಜೇಂದ್ರ ಸ್ವಾಮೀಜಿಗಳು ಜ್ಯೋತಿರ್ಲಿಂಗ ದರ್ಶನ ಪಡೆದು ಶ್ರೀಮಠಕ್ಕೆ ಆಗಮಿಸಿದಾಗ ಸಂಗಮೇಶ್ವರ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ, ಸದಸ್ಯರು, ಸಿಬ್ಬಂದಿಯಿಂದ ಗೌರವ ಸಮರ್ಪಿಸಲಾಯಿತು.
ಸಂಘದ ಚೇರ್‌ಮನ್ ಐ.ಎಸ್.ಲಿಂಗದಾಳ, ಕಾಲೇಜ್ ಕಮಿಟಿ ಚೇರ್‌ಮನ್ ಸಿ.ಡಿ.ಇಲಕಲ್, ನಿರ್ದೇಶಕರಾದ ಎಸ್.ಜಿ.ಕನ್ನೂರ, ಡಾ.ಎಂ.ವಿ.ಹಾದಿಮನಿ, ಎಸ್.ಎಸ್.ವಸ್ತçದ, ಎಸ್.ಜಿ.ಮೊಕಾಶಿ, ಬಿ.ಕೆ.ಮಾಟೂರ, ಮಾಧ್ಯಮಿಕ ಶಿಕ್ಷಕ ಸಂಘದ ಜಿಲ್ಲಾಧ್ಯಕ್ಷ ಆರ್.ಜಿ.ಸನ್ನಿ, ಪ್ರಾಚಾರ್ಯ ಬಿ.ಬಿ.ಹೊಸಮನಿ, ಉಪಪ್ರಾಚಾರ್ಯ ವಿ.ಎಂ.ವಸ್ತçದ, ಎಸ್.ಎಸ್.ಹಿರೇಮಠ, ಎಂ.ಆರ್.ಹಿರೇಮಠ, ಜಿ.ಎಂ.ಡೊಳ್ಳಿನ, ಉಪನ್ಯಾಸಕರು, ಶಿಕ್ಷಕರು ಇದ್ದರು.